ಲತಾ ಮಂಗೇಶ್ಕರ್ ಆರೋಗ್ಯ ಮಾಹಿತಿ: ವೈದ್ಯರು ಹೇಳಿದ್ದೇನು?

ಭಾರತದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್‌ ಕೋವಿಡ್‌ನಿಂದಾಗಿ ಕಳೆದ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದು, ಐಸಿಯು ನಲ್ಲಿ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಕಳೆದ ಶನಿವಾರ (ಜನವರಿ 08)ರಂದು ಲತಾ ಮಂಗೇಶ್ಕರ್ ದಾಖಲಾಗಿದ್ದರು. ಅವರಿಗೆ ಕೋವಿಡ್ ಮೂಲಕ ನ್ಯುಮೊನಿಯಾ ಸಹ ಆಗಿದೆ ಎಂದು ವೈದ್ಯರು ಹೇಳಿದ್ದರು ಇದು ಆತಂಕಕ್ಕೆ ಕಾರಣವಾಗಿತ್ತು.

ಆದರೆ ಇಂದು ಲತಾ ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ ವೈದ್ಯರು, ಲತಾ ಮಂಗೇಶ್ಕರ್ ಆರೋಗ್ಯದಲ್ಲಿ ತುಸು ಚೇತರಿಕೆ ಕಂಡಿದೆ ಎಂದು ಹೇಳಿದ್ದಾರೆ. ಇದು ತುಸು ಆಶಾಭಾವವನ್ನು ಅಭಿಮಾನಿಗಳಲ್ಲಿ ಮೂಡಿಸಿದೆ.

Lata Mangeshkar Health Update As On January 13
ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಲತಾ ಮಂಗೇಶ್ಕರ್ ಸಹೋದರಿ ಆಶಾ ಭೋಂಸ್ಲೆ, 'ಅಕ್ಕ ಈಗ ಮೊದಲಿಗಿಂತಲೂ ತುಸು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆಸ್ಪತ್ರೆಯವರು ಯಾರನ್ನೂ ಒಳಗೆ ಬಿಡುತ್ತಿಲ್ಲ. ನನ್ನನ್ನೂ ಸಹ ಕಾಂಪೌಂಡ್‌ನಿಂದ ಒಳಗೆ ಹೋಗಲು ಸಹ ಬಿಡಲಿಲ್ಲ'' ಎಂದಿದ್ದಾರೆ.

''ಅಲ್ಲದೆ ನನಗೂ ಆರೋಗ್ಯ ತುಸು ಸರಿಯಿಲ್ಲ. ನನಗೆ ಕೋವಿಡ್ ಆಗಿಲ್ಲವಾದರೂ ತುಸು ಕೆಮ್ಮು ಹಾಗೂ ನೆಗಡಿ ಆಗಿದೆ. ವಾತಾವರಣದ ಬದಲಾವಣೆಯಿಂದಾಗಿ ಹೀಗಾಗಿದೆ ಹಾಗಾಗಿ ನಾನು ಅಕ್ಕನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೊಟ್ಟಿಗೆ ದೂರವಾಣಿ ಮೂಲಕ ಸಂಪರ್ಕದಲ್ಲಿದ್ದೇನೆ'' ಎಂದಿದ್ದಾರೆ.

ನಿನ್ನೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ್ದ ಲತಾ ಮಂಗೇಶ್ಕರ್ ಅವರ ಮತ್ತೊಬ್ಬ ಸಹೋದರಿ ಉಷಾ ಮಂಗೇಶ್ಕರ್, ''ಅಕ್ಕನನ್ನು ನೋಡಲು ನಮ್ಮನ್ನು ಬಿಡುತ್ತಿಲ್ಲ. ಆದರೆ ಅಲ್ಲಿ (ಆಸ್ಪತ್ರೆಯಲ್ಲಿ) ಸಾಕಷ್ಟು ವೈದ್ಯರು ಮತ್ತು ದಾದಿಯರು ಅಕ್ಕನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂಬ ವಿಶ್ವಾಸವಿದೆ'' ಎಂದಿದ್ದಾರೆ. ಮುಂದುವರೆದು, ''ಅಕ್ಕ ಯಾವಾಗ ಡಿಸ್‌ಚಾರ್ಜ್ ಆಗಲಿದ್ದಾರೆ ಎಂದು ವೈದ್ಯರು ಹೇಳಿಲ್ಲ ಬದಲಿಗೆ ಅವರ ವಯಸ್ಸು ಹೆಚ್ಚಾಗಿರುವ ಕಾರಣ ಹೆಚ್ಚು ದಿನ ಆಸ್ಪತ್ರೆಯಲ್ಲಿ ಇರಬೇಕಾಗುತ್ತದೆ ಎಂದಿದ್ದಾರೆ'' ಎಂದು ಉಶಾ ಮಾಹಿತಿ ನೀಡಿದ್ದರು.

ಲತಾ ಮಂಗೇಶ್ಕರ್‌ಗೆ ಉಶಾ ಮಂಗೇಶ್ಕರ್, ಆಶಾ ಭೋಂಸ್ಲೆ ಮತ್ತು ಮೀನ ಖಡಿಕಾರ್ ಎಂಬ ಸಹೋದರಿಯರಿದ್ದಾರೆ. ಇವರಲ್ಲಿ ಆಶಾ ಭೋಂಸ್ಲೆ ಸಹ ಭಾರತದ ಅತ್ಯುತ್ತಮ ಗಾಯಕಿಯರಲ್ಲಿ ಒಬ್ಬರು. 92 ವರ್ಷ ವಯಸ್ಸಿನ ಲತಾ ಮಂಗೇಶ್ಕರ್ ಭಾರತ ಸಿನಿಮಾರಂಗದ ಅತ್ಯಂತ ಹಿರಿಯ ಗಾಯಕಿ. 1942ನೇ ವರ್ಷದಿಂದಲೇ ಲತಾ ಮಂಗೇಶ್ಕರ್ ಸಿನಿಮಾಗಳಲ್ಲಿ ಹಾಡಲು ಪ್ರಾರಂಭಿಸಿದ್ದರು. ಭಾರತ ಸ್ವಾತಂತ್ರ್ಯಗೊಂಡಾಗ ಪ್ರಥಮ ಸ್ವಾತಂತ್ರ್ಯೋತ್ಸವದಲ್ಲಿಯೂ ಲತಾ ಮಂಗೇಶ್ಕರ್ ಹಾಡು ಹಾಡಿ ಸಭಿಕರನ್ನು ಮಂತ್ರಮುಗ್ಧಗೊಳಿಸಿದ್ದರು. 1942ರಿಂದ ಈ ವರೆಗೆ ಸಾವಿರಾರು ಹಾಡುಗಳನ್ನು ಲತಾ ಮಂಗೇಶ್ಕರ್ ಹಾಡಿದ್ದಾರೆ. 1967ರಲ್ಲಿ ಬಿಡುಗಡೆ ಆಗಿದ್ದ ಕನ್ನಡ ಸಿನಿಮಾ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಸಿನಿಮಾದಲ್ಲಿ ಎರಡು ಹಾಡುಗಳನ್ನು ಲತಾ ಮಂಗೇಶ್ಕರ್ ಹಾಡಿರುವುದು ವಿಶೇಷ.

More from Filmibeat

English summary
Singer Lata Mangeshkar admitted to private hospital in Mumbai as she suffer from COVID 19. Doctors treating her in ICU she has pneumonia along with COVID 19.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X