Lata Mangeshkar: ಲತಾ ಮಂಗೇಶ್ಕರ್ ಅವರ 94ನೇ ಜನ್ಮದಿನ, ಗೌರವ ಸಲ್ಲಿಸಿದ ಪ್ರಧಾನಿ ಮೋದಿ, ಅಮಿತ್ ಶಾ

ಗುರುವಾರ (ಸೆಪ್ಟೆಂಬರ್ 28) ದಿವಂಗತ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರ 94ನೇ ಜನ್ಮದಿನ. ಗಾನ ಕೋಗಿಲೆ ನಮ್ಮನ್ನೆಲ್ಲ ಆಗಲಿ ಹೋದರೂ ಅವರ ಹಾಡುಗಲ ಮೂಲಕ ಸಂಗೀತ ಪ್ರಿಯರ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಅವರ ಜನ್ಮದಿನದ ನೆನಪಿನಲ್ಲಿ ಹಲವು ಗಣ್ಯರು ಗೌರವ ಸಲ್ಲಿದ್ದಾರೆ.

ಲತಾ ಮಂಗೇಶ್ಕರ್ ಅವರು 1940 ರ ದಶಕದಿಂದಲೂ ಸುಮಾರು ಆರು ದಶಕಗಳ ಕಾಲ ಹಿಂದಿ ಚಲನಚಿತ್ರ ಸಂಗೀತವನ್ನು ಆಳಿದ್ದಾರೆ. ಲತಾ ಮಂಗೇಶ್ಕರ್ ವಾರನ್ನು ನೆನಪಿಸಿಕೊಂಡು ಪ್ರಧಾನಿ ನರೇಂದ್ರ ಮೋದಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಭಾರತೀಯ ಸಂಗೀತಕ್ಕೆ ಲತಾ ಮಂಗೇಶ್ಕರ್ ಅವರ ಕೊಡುಗೆಯನ್ನು ಸ್ಮರಿಸಿಕೊಂಡಿರುವ ಪ್ರಧಾನಿ ಮೋದಿ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡಿದ್ದಾರೆ.

Lata Mangeshkar: Narendra Modi, Amit Shah pay tribute to Lata Mangeshkar birth anniversary

ಲತಾ ಮಂಗೇಶ್ಕರ್ ಅವರಿಗೆ ಪ್ರಧಾನಿ ಮೋದಿ ಶ್ರದ್ಧಾಂಜಲಿ

'ಲತಾ ದೀದಿ' ಅವರ ಜನ್ಮ ವಾರ್ಷಿಕೋತ್ಸವದಂದು ಹೃದಯಸ್ಪರ್ಶಿ ಪೋಸ್ಟ್‌ನೊಂದಿಗೆ ಪಿಎಂ ಮೋದಿ ನೆನಪಿಸಿಕೊಂಡಿದ್ದಾರೆ. ಗಾನ ಕೋಗಿಲೆಯ ಹಾಡುಗಳು ಎಂತಹ ಭಾವನೆಗಳನ್ನು ಹುಟ್ಟಿಸಿವೆ ಎಂಬುದನ್ನು ಹಂಚಿಕೊಂಡಿದ್ದಾರೆ. "ಲತಾ ದೀದಿಯನ್ನು ಅವರ ಜನ್ಮ ವಾರ್ಷಿಕೋತ್ಸವದಂದು ಸ್ಮರಿಸುತ್ತಿದ್ದೇವೆ. ಭಾರತೀಯ ಸಂಗೀತಕ್ಕೆ ಅವರ ಕೊಡುಗೆ ದಶಕಗಳವರೆಗೆ ವ್ಯಾಪಿಸಿದ್ದು, ಶಾಶ್ವತ ಪ್ರಭಾವವನ್ನು ಸೃಷ್ಟಿಸಿವೆ. ಅವರ ಭಾವಪೂರ್ಣವಾದ ಹಾಡುಗಳು ಆಳವಾದ ಭಾವನೆಗಳನ್ನು ಹುಟ್ಟುಹಾಕಿವೆ. ನಮ್ಮ ಸಂಸ್ಕೃತಿಯಲ್ಲಿ ಶಾಶ್ವತವಾಗಿ ವಿಶೇಷ ಸ್ಥಾನವನ್ನು ಪಡೆದುಕೊಳ್ಳುತ್ತವೆ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಲತಾ ಮಂಗೇಶ್ಕರ್ ಅವರಿಗೆ ಅಮಿತ್ ಶಾ ಗೌರವ

ಪ್ರಧಾನಿ ಮೋದಿಯಂತೆಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 28 ರ ಗುರುವಾರದಂದು ಖ್ಯಾತ ಗಾಯಕಿಗೆ ಗೌರವ ಸಲ್ಲಿಸಿದ್ದಾರೆ. "ಲತಾ ದೀದಿ ವಿಶ್ವದಲ್ಲಿ ಭಾರತೀಯ ಸಂಗೀತ ಸಂಪ್ರದಾಯವನ್ನು ಶ್ರೀಮಂತಗೊಳಿಸಲು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟರು.ಸಂಗೀತದ ಉತ್ತುಂಗವನ್ನು ತಲುಪಿದ ನಂತರವೂ ಅವರು ಭಾರತೀಯರ ಬೇರುಗಳೊಂದಿಗೆ ಸಂಪರ್ಕ ಹೊಂದಿದ್ದ ಸರಳತೆ ದೇಶವಾಸಿಗಳಿಗೆ ವಿಶೇಷ ಉದಾಹರಣೆಯಾಗಿದೆ. ಭಾರತ ರತ್ನ ಲತಾ ದೀದಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ನಮನಗಳು" ಎಂದು ಅಮಿತ್ ಶಾ ಹೇಳಿದ್ದಾರೆ.

Lata Mangeshkar: Narendra Modi, Amit Shah pay tribute to Lata Mangeshkar birth anniversary

ಮರೆಯಲಾಗದ ಮುತ್ತು ಲತಾ ಮಂಗೇಶ್ಕರ್

ಲತಾ ಮಂಗೇಶ್ಕರ್ ಅವರು ಸೆಪ್ಟೆಂಬರ್ 28, 1929 ರಂದು ಜನಿಸಿದರು. ಚಿಕ್ಕ ವಯಸ್ಸಿನಲ್ಲೇ ಹಾಡು ಹಾಡಲು ಶುರು ಮಾಡಿ ವೃತ್ತಿಜೀವನ ಪ್ರಾರಂಭಿಸಿದರು. ಲತಾ ದೀದಿ ತಮ್ಮ ವೃತ್ತಿಜೀವನದಲ್ಲಿ ಸಾವಿರಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಿಗೆ ದನಿಯಾಗಿದ್ದಾರೆ. 'ಮೆಲೋಡಿ ರಾಣಿ' ಮತ್ತು 'ಭಾರತದ ನೈಟಿಂಗೇಲ್' ಎಂದು ಕರೆಯಲಾಗುತ್ತದೆ. ಭಾರತ ರತ್ನ ಪ್ರಶಸ್ತಿ ಪುರಸ್ಕೃತೆ ಲತಾ ಮಂಗೇಶ್ಕರ್ ಅವರು ಫೆಬ್ರವರಿ 6, 2022 ರಂದು ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದರು.

More from Filmibeat

English summary
Lata Mangeshkar: Narendra Modi, Amit Shah pay tribute to Lata Mangeshkar birth anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X