ಅಯೋಧ್ಯೆ ರಾಮಮಂದಿರ ಉದ್ಘಾಟನೆಗಾಗಿ ಲತಾ ಮಂಗೇಶ್ಕರ್ ಭಜನೆಗಳನ್ನು ರೆಕಾರ್ಡ್ ಮಾಡಿದ್ದಾರೆಯೇ..?

ದೇಶದ ಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ನಮ್ಮನ್ನು ಅಗಲಿದ್ದಾರೆ. ಆದರೆ, ಅವರ ಹಾಡುಗಳು ನಮ್ಮ ನಡುವೆ ಓಡಾಡುತ್ತಲೆ, ನಮ್ಮ ಕಿವಿಗಳಿಗೆ ತಂಪು ನೀಡಿವೆ. ಇತ್ತೀಚೆಗೆ ಅವರ ಜನ್ಮ ದಿನದಂದು ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ದೇಶದ ಪ್ರಮುಖ ನಾಯಕರು ನೆನಪಿಸಿಕೊಂಡು ಅವರಿಗೆ ಗೌರವ ಸಲ್ಲಿಸಿದ್ದರು.

ಹಲವಾರು ಭಾರತೀಯ ಭಾಷೆಗಳ ಹಾಡುಗಳಿಗೆ ತಮ್ಮ ಸುಮಧುರ ಧ್ವನಿಯನ್ನು ನೀಡಿ, ಸ್ವರ ಕೋಕಿಲಾ ಎಂಬ ಬಿರುದನ್ನು ಪಡೆದಿರುವ ಅವರು, 6 ಫೆಬ್ರವರಿ 2022 ರಂದು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತಮ್ಮ 92 ನೇ ವಯಸ್ಸಿನಲ್ಲಿ ನಿಧನರಾದರು. ಸಿನಿಮಾ ಹಾಡುಗಳ ಜೊತೆಗೆ ಭಕ್ತಿಗೀತೆಗಳಿಗೂ ದನಿಯಾಗಿದ್ದಾರೆ. ಈಗ ಹೊಸ ಸುದ್ದಿಯಲ್ಲಿ ಅವರು ಅಯೋಧ್ಯಾ ರಾಮ ಮಂದಿರ ಉದ್ಘಾಟನೆಗಾಗಿ ಭಜನೆಗಳನ್ನು ರೆಕಾರ್ಡ್ ಮಾಡಿದ್ದರು ಎಂಬುದು.

Lata Mangeshkar Recorded Bhajans for Ayodhya Ram Temple Inauguration?

ಅಯೋಧ್ಯೆ ರಾಮಮಂದಿರದ ಉದ್ಘಾಟನೆ ಶ್ಲೋಕಗಳಿಗೆ ಲತಾಜಿ ದನಿ!

ಲತಾ ಮಂಗೇಶ್ಕರ್ ಸಂಗೀತವನ್ನು ಆಧ್ಯಾತ್ಮಿಕ ಭಕ್ತಿಯ ರೂಪವೆಂದು ಪರಿಗಣಿಸಿದವರು. 1970 ರ ದಶಕದಲ್ಲಿಅವರು ಹಲವು ಮಜಲುಗಳನ್ನು ದಾಟಿದವರು. ಹಲವರಿಗೆ ಸಾಧ್ಯವಾಗದ ಕಷ್ಟ ಹಾಡುಗಳನ್ನು ಲತಾ ಮಂಗೇಶ್ಕರ್ ಸುಲಭವಾಗಿ ಹಾಡುತ್ತಿದ್ದರು. ಅವರ ಚಲನಚಿತ್ರ ಗೀತೆಗಳ ಜೊತೆಗೆ ಭಕ್ತಿಯ ಹಾಡುಗಳು ಮತ್ತು ಭಜನೆಗಳಿಗೂ ಅಷ್ಟೇ ಸಮಾನನೆ ನೀಡಿದ್ದಾರೆ.

ಲತಾ ಮಂಗೇಶ್ಕರ್ ನಿಧನದ ಮೊದಲು, ಗಾಯಕಿ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯನ್ನು ಸಂಭ್ರಮಿಸಲು ಕೆಲವು ಭಜನೆಗಳು ಮತ್ತು ಶ್ಲೋಕಗಳನ್ನು ರೆಕಾರ್ಡ್ ಮಾಡಿರಬಹುದು ಎಂಬ ವರದಿಯಿದೆ. 'ಬಾಲಿವುಡ್ ಹಂಗಾಮಾ' ಎಂಬ ಮನರಂಜನಾ ಪೋರ್ಟಲ್ ವರದಿ ಮಾಡಿರುವಂತೆ ಮೂಲಗಳ ಪ್ರಕಾರ, ಲತಾ ಮಂಗೇಶ್ಕರ್ ಹಲವು ಭಜನೆಗಳನ್ನು ರೆಕಾರ್ಡ್ ಮಾಡಿದ್ದಾರೆ. ತಮಗೆ ಆರೋಗ್ಯ ಸಮಸ್ಯೆಗಳಿದ್ದರೂ ಕೂಡ ರಾಮ ಭಜನೆಗಳನ್ನು ರೆಕಾರ್ಡ್ ಮಾಡಿದ್ದಾರೆ. ಇದು ಲತಾ ಮಂಗೇಶ್ಕರ್ ಅವರ ಕೊನೆಯ ಧ್ವನಿಮುದ್ರಣಗಳು ಎನ್ನಲಾಗಿದೆ.

Lata Mangeshkar Recorded Bhajans for Ayodhya Ram Temple Inauguration?

"ನಿಲ್ಲಲು ಸಾಧ್ಯವಾಗದಿದ್ದರೂ ಲರಾ ಮಂಗೇಶ್ಕರ್ ಸಂಗೀತ ನಿರ್ದೇಶಕ ಮಯೂರೇಶ್ ಪೈ ಅವರನ್ನು ಕರೆಸಿದ್ದರು. ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುವಾಗ ಶುಭ ಸಂಭ್ರಮಕ್ಕಾಗಿ ಕೆಲವು ಆಯ್ದ ರಾಮ ಭಜನೆಗಳು, ಶ್ಲೋಕಗಳು ಮತ್ತು ಪಠಣಗಳನ್ನು ರೆಕಾರ್ಡ್ ಮಾಡಲು ಬಯಸುವುದಾಗಿ ಹೇಳಿದ್ದರು. 2024 ರ ಜನವರಿಯಲ್ಲಿ ನಡೆಯಲಿರುವ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಲ್ಲಿ ಹಾಡಬೇಕೆಂದು ಅವರು ಬಯಸಿದ್ದರು" ಎಂದು ಮೂಲವು ಖ್ಯಾತ ಗಾಯಕಿಯ ಆಸೆಯನ್ನು ತಿಳಿಸಿದೆ.

ಲತಾ ಮಂಗೇಶ್ಕರ್ ನಿಧನ

ಬಹು ಅಂಗಾಂಗ ವೈಫಲ್ಯದಿಂದ ಲತಾ ಮಂಗೇಶ್ಕರ್ ಅವರು ಫೆಬ್ರವರಿ 6, 2022 ರಂದು 92 ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾದರು. ಆಕೆಯ ನಿಧನವು ಭಾರತೀಯ ಚಲನಚಿತ್ರೋದ್ಯಮದ ಒಂದು ಯುಗವೇ ಅಂತ್ಯವಾದಂತೆ. ಅವರ ಸಹೋದರಿ ಆಶಾ ಭೋಂಸ್ಲೆ ಕೂಡ ಚಿತ್ರರಂಗದಲ್ಲಿ ಹೆಸರು ಗಳಿಸಿದ್ದಾರೆ.

ಅಯೋಧ್ಯಾ ರಾಮಮಂದಿರ ಉದ್ಘಾಟನೆ

ಹಲವು ವರ್ಷಗಳ ಕಾಯುವಿಕೆಯ ನಂತ ಅಯೋಧ್ಯೆಯಲ್ಲಿ ಮುಂದಿನ ವರ್ಷ ಜನವರಿ 22 ರಿಂದ 24 ರ ನಡುವೆ ಶ್ರೀರಾಮ ಮಂದಿರದ ಉದ್ಘಾಟನೆಯನ್ನು ಪ್ರಧಾನ ಮಂತ್ರಿಯವರು ನೆರವೆರಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಜನವರಿಯಲ್ಲಿ ರಾಮ ಮಂದಿರ ಉದ್ಘಾಟನೆ ಅಥವಾ ಪ್ರಾಣ ಪ್ರತಿಷ್ಠಾ ಸಮಾರಂಭಕ್ಕೆ ಕೆಲವೇ ತಿಂಗಳುಗಳು ಬಾಕಿಯಿದೆ. ಉದ್ಘಾಟನೆಯ ಮೊದಲು ಸುಮಾರು 1.5 ಲಕ್ಷ ಜನರು ರಾಮಮಂದಿರಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.

More from Filmibeat

English summary
Lata Mangeshkar recorded bhajans for ayodhya ram temple inauguration?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X