ಬಿಡುಗಡೆಗೂ ಮುನ್ನವೇ ನಿರಾಸೆ ಮೂಡಿಸಿದ ವಿಜಯ್ ಲಿಯೋ ಸಿನಿಮಾದ ಫಸ್ಟ್ ಹಾಡು

Leo first single to out on June 22nd on the ocassion of Vijay birthday

ನಟ ದಳಪತಿ ವಿಜಯ್ ತಮ್ಮ ಬೀಸ್ಟ್ ಚಿತ್ರದ ಹೀನಾಯ ಸೋಲಿನ ಬಳಿಕ ಈ ವರ್ಷ ವಾರಿಸು ಮೂಲಕ ಮತ್ತೊಮ್ಮೆ ಸಿನಿ ರಸಿಕರ ಎದುರು ಬಂದಿದ್ದರು. ಆದರೆ ಈ ಚಿತ್ರ ನಿರೀಕ್ಷಿಸಿದ ಯಶಸ್ಸನ್ನು ಸಾಧಿಸುವಲ್ಲಿ ಯಶಸ್ವಿಯಾಗಿರಲಿಲ್ಲ. ಚಿತ್ರ ಒಳ್ಳೆಯ ಕಲೆಕ್ಷನ್ ಮಾಡಿದರೂ ಸಹ ಎಲ್ಲಾ ವರ್ಗದ ಪ್ರೇಕ್ಷಕರನ್ನು ಮೆಚ್ಚುಸುವಲ್ಲಿ ವಿಫಲವಾಗಿತ್ತು. ಮಿಶ್ರ ಪ್ರತಿಕ್ರಿಯೆ ಚಿತ್ರಕ್ಕೆ ವ್ಯಕ್ತವಾಗಿತ್ತು.

ಹೀಗೆ ತನ್ನ ಸ್ಟಾರ್‌ಡಂಗೆ ತಕ್ಕನಾದ ಗೆಲುವಿಗಾಗಿ ಕಾಯುತ್ತಿರುವ ವಿಜಯ್ ಇದೀಗ ತಮ್ಮ ಈ ಹಿಂದಿನ ಮಾಸ್ಟರ್ ಚಿತ್ರದ ಡೈರೆಕ್ಟರ್ ಲೋಕೇಶ್ ಕನಕರಾಜ್ ಜತೆ ಮತ್ತೊಮ್ಮೆ ಕೈಜೋಡಿಸಿದ್ದಾರೆ. ಹೌದು, ಕಳೆದ ವರ್ಷ ಇಂಡಸ್ಟ್ರಿ ಹಿಟ್ ಸಿನಿಮಾ ವಿಕ್ರಮ್ ಅನ್ನು ನಿರ್ದೇಶಿಸಿದ್ದ ಲೋಕೇಶ್ ಕನಕರಾಜ್ ತಮ್ಮ ಮುಂದಿನ ಪ್ರಾಜೆಕ್ಟ್ ಆದ ಲಿಯೋವನ್ನು ಕೈಗೆತ್ತಿಕೊಂಡಿದ್ದು, ಈ ಚಿತ್ರದಲ್ಲಿ ವಿಜಯ್ ನಾಯಕನಾಗಿ ನಟಿಸುತ್ತಿದ್ದಾರೆ.

ಇನ್ನು ಈ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದ್ದು, ಚಿತ್ರವನ್ನು ಅಕ್ಟೋಬರ್ 19ಕ್ಕೆ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಈ ಹಿಂದೆ ಮಾಸ್ಟರ್ ರೀತಿಯ ಸಾಧಾರಣ ಕಥೆಯನ್ನೊಳಗೊಂಡ ಚಿತ್ರದ ಮೂಲಕವೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ವಿಜಯ್ ಹಾಗೂ ನಿರ್ದೇಶಕ ಲೋಕೇಶ್ ಕನಕರಾಜ್ ಕಾಂಬಿನೇಶನ್ ಈ ಬಾರಿ 200 ಕೋಟಿ ಬಜೆಟ್‌ನೊಂದಿಗೆ ಬರುತ್ತಿದ್ದು, ಬಾಕ್ಸ್ ಆಫೀಸ್ ಧೂಳ್ ಎಬ್ಬಿಸುವ ನಿರೀಕ್ಷೆ ಇದೆ.

ಇನ್ನು ಅಕ್ಟೋಬರ್ ತಿಂಗಳಿನಲ್ಲಿ ಬಿಡುಗಡೆಯಾಗಲಿರುವ ಚಿತ್ರದ ಪ್ರಚಾರ ಕಾರ್ಯವನ್ನು ಚಿತ್ರತಂಡ ಈಗಾಗಲೇ ಆರಂಭಿಸಿದೆ. ಚಿತ್ರತಂಡ ಚಿತ್ರದ ಮೊದಲ ಹಾಡನ್ನು ಬಿಡುಗಡೆಗೊಳಿಸಲು ಮುಂದಾಗಿದ್ದು, ದಳಪತಿ ವಿಜಯ್ ಹುಟ್ಟುಹಬ್ಬದ ಪ್ರಯುಕ್ತ ರಿವೀಲ್ ಮಾಡಲಿದೆ.

ಈ ಹಾಡು ಜೂನ್ 22ರಂದು ಬಿಡುಗಡೆಯಾಗಲಿದ್ದು ಹಾಡಿನ ಲಿರಿಕ್ಸ್, ಮ್ಯೂಸಿಕ್ ಅಷ್ಟಕ್ಕಷ್ಟೇ ಎಂಬ ಅಭಿಪ್ರಾಯಗಳನ್ನು ಹಾಡಿನ ವಿಶೇಷ ಟೀಸರ್ ವೀಕ್ಷಿಸಿದ ಸಿನಿ ರಸಿಕರು ವ್ಯಕ್ತಪಡಿಸಿದ್ದಾರೆ. ಹೌದು, ಇಂದು ಸಂಜೆ ಲಿಯೊ ಚಿತ್ರದ ನಾ ರೆಡಿ ಹಾಡಿನ ಅರ್ಧನಿಮಿಷದ ವಿಡಿಯೊ ತುಣುಕಿದೆ.

ಹೀಗೆ ಈ ವಿಶೇಷ ಟೀಸರ್ ಕಂಡು ಸಿನಿ ರಸಿಕರು ಬೇಸರ ವ್ಯಕ್ತಪಡಿಸಿದ್ದು, ಟೀಸರ್ ಮೂಲಕ ನಿರಾಸೆ ಮೂಡಿಸಿರುವ ಚಿತ್ರತಂಡ ಸಂಪೂರ್ಣ ಹಾಡಿನಲ್ಲಿ ಗೆಲ್ಲಲಿದೆಯಾ ಎಂಬ ಪ್ರಶ್ನೆ ಹೊರಹಾಕಿದ್ದಾರೆ.

More from Filmibeat

English summary
Leo first single to out on June 22nd on the ocassion of Vijay birthday
Read more about: vijay music ವಿಜಯ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X