twitter
    For Quick Alerts
    ALLOW NOTIFICATIONS  
    For Daily Alerts

    'ಜೋಶ್'ನಲ್ಲಿ ಅಂತ್ಯಾಕ್ಷರಿ ಆಡಿ ಆಕರ್ಷಕ ಬಹುಮಾನ ಗೆಲ್ಲಿ

    |

    ಜನಪ್ರಿಯ 'ಡೈಲಿಹಂಟ್' ಸುದ್ದಿ ವೇದಿಕೆಯ ವಿಡಿಯೋ app ಆದ ಜೋಶ್ ಭಾರತದ ದೊಡ್ಡ ಸಂಗೀತ ಚಾಲೆಂಜ್ ಅನ್ನು ಆಯೋಜಿಸಿದೆ. ಸಂಗೀತ ಪ್ರೇಮಿಗಳು, ಹಾಡುಗಾರರು ಅಂತ್ಯಾಕ್ಷರಿ ಆಡುವ ಅವಕಾಶವನ್ನು ಜೋಶ್ ಆಪ್‌ ಒದಗಿಸಿದೆ.

    ಜೂನ್ 21 ವಿಶ್ವ ಸಂಗೀತ ದಿನವಾಗಿದ್ದು, ಇದರ ಅಂಗವಾಗಿ ಜನಪ್ರಿಯ ಜೋಶ್ ಆಪ್ ಆನ್‌ಲೈನ್ ಅಂತ್ಯಾಕ್ಷರಿಯನ್ನು ಹೊತ್ತು ತಂದಿದೆ. ಒಂದು ವಾರದ ವರೆಗೆ ಈ ಆನ್‌ಲೈನ್ ಅಂತ್ಯಾಕ್ಷರಿ ಆಟ ನಡೆಯಲಿದ್ದು, ಪ್ರತಿಯೊಂದು ದಿನಕ್ಕೂ ಭಿನ್ನ ಅಕ್ಷರದಿಂದ ಪ್ರಾರಂಭವಾಗುವ ಹಾಡುಗಳನ್ನು ಹಾಡಬೇಕಾಗುತ್ತದೆ. ಅಕ್ಷರಗಳನ್ನು ಸಂಗೀತ ರಂಗದ ಸೆಲೆಬ್ರಿಟಿಗಳು ನೀಡಲಿದ್ದಾರೆ.

    ಈ ಆನ್‌ಲೈನ್ ಅಂತ್ಯಾಕ್ಷರಿಯ ಅತಿಥಿಗಳಾಗಿ ಮಿಕಾ ಸಿಂಗ್, ಸಲೀಮ್ ಸುಲೈಮಾನ್, ಸುಖಬೀರ್, ನೇಹಾ ಬಾಸಿನ್, ಅಂಕಿತಾ ತಿವಾರಿ, ನೀತಿ ಮೋಹನ್ ಮತ್ತು ಶಾನ್‌ ಇರಲಿದ್ದಾರೆ. ಇವರುಗಳು ಆ ದಿನ ನೀಡುವ ಅಕ್ಷರಗಳಿಗೆ ಹೊಂದಿಕೆ ಆಗುವ ಹಾಡುಗಳನ್ನು ಹಾಡಬೇಕಾಗುತ್ತದೆ. ಅಥವಾ ಹಾಡಿಗೆ ಲಿಪ್ ಸಿಂಕ್ ಮಾಡಿದರೂ ಸಾಕು.

    Lets Play Antakshari Josh Announce Indias Biggest Music Challenge

    ಈ ಆನ್‌ಲೈನ್ ಅಂತ್ಯಾಕ್ಷರಿಯನ್ನು ಹಾಸ್ಯ ಕಲಾವಿದೆ, ಸ್ವತಃ ಗಾಯಕಿಯೂ ಆಗಿರುವ ಸುಗಂಧ ಮಿಶ್ರಾ ನಿರೂಪಿಸಲಿದ್ದಾರೆ. ತಮ್ಮ ಚಿನುಕುರುಳಿಯಂಥಹಾ ಮಾತುಗಳಿಂದ, ಹಾಸ್ಯದಿಂದ ಆಟದ ಮಜವನ್ನು ಹೆಚ್ಚು ಮಾಡಲಿದ್ದಾರೆ ಸುಗಂಧ.

    ಆಡುವುದು ಹೇಗೆ?

    ಆನ್‌ಲೈನ್ ಅಂತ್ಯಾಕ್ಷರಿಯಲ್ಲಿ ಭಾಗವಹಿಸುವುದು ಬಹಳ ಸುಲಭ. ಜೋಶ್‌ ಆಪ್‌ಗೆ ಲಾಗಿನ್‌ ಆಗಿ. ಮ್ಯೂಸಿಕ್‌ ಚಾಲೆಂಜ್‌ನ ಅತಿಥಿಗಳು ಆ ದಿನದ ಅಕ್ಷರವನ್ನು ತಮ್ಮ ಹಾಗೂ ಜೋಶ್‌ನ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಾರೆ. ಆ ದಿನದ ಅಕ್ಷರ ಅಥವಾ ಸಂದರ್ಭಕ್ಕೆ ಸೂಕ್ತವಾಗುವ ಹಾಡನ್ನು ಹಾಡಿ ಅದರ ವಿಡಿಯೋ ಮಾಡಿ ಜೋಶ್ ಆಪ್‌ನಲ್ಲಿ ಅಪ್‌ಲೋಡ್ ಮಾಡಬೇಕು. ಇಬ್ಬರು ಸೇರಿ ಡ್ಯುಯೆಟ್ ಸಹ ಮಾಡಬಹುದು. ಗೆದ್ದವರಿಗೆ ಆಕರ್ಷಕ ನಗದು ಬಹುಮಾನ ನೀಡಲಾಗುವುದು. ಇತರೆ ಬಹುಮಾನಗಳೂ ಇವೆ.

    ಜೂನ್ 21 ರಂದು ಆರಂಭವಾಗಿರುವ ಜೋಶ್ ಆನ್‌ಲೈನ್ ಅಂತ್ಯಾಕ್ಷರಿ ಆಟವು ಜೂನ್ 27ಕ್ಕೆ ಅಂತ್ಯವಾಗಲಿದೆ.

    English summary
    Josh announce India's biggest music challenge 'Lets Play Antakshari'. This music challenge will end on June 27.
    Monday, June 21, 2021, 21:52
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X