twitter
    For Quick Alerts
    ALLOW NOTIFICATIONS  
    For Daily Alerts

    ವಿಕಲಚೇತನ ಹಾಡು ಹಕ್ಕಿಗಳಿಗೆ ಸುವರ್ಣ ಅವಕಾಶ

    By Rajendra
    |

    ಹಾಡೊಂದ ಹಾಡುವೆ ನೀ ಕೇಳು ಮಗುವೆ...ಈ ಹಾಡಿನ ಹಿಂದೆ ತಕ್ಷಣ ನೆನಪಿಗೆ ಬರುವುದು ಗಾನ ಕೋಗಿಲೆ ಪಿ.ಬಿ.ಶ್ರೀನಿವಾಸ್. ಪಿ.ಬಿ.ಎಸ್ ನಮ್ಮೊಂದಿಗೆ ಇಲ್ಲದೆ ಇದ್ರೂ ಅವ್ರ ಮಧುರ ಹಾಡುಗಳ ನೆನಪು ಪದೇ ಪದೇ ಬರುತ್ತದೆ. ಆದ್ರೆ ಈಗ ಪಿ.ಬಿ.ಎಸ್ ಹಾಡುಗಳನ್ನು ಮತ್ತೆ ಮೆಲುಕು ಹಾಕಲು ಅವಕಾಶ ಸಿಕ್ಕಿದೆ.

    ಸೆಪ್ಟಂಬರ್ 22 ರಂದು ಪಿ.ಬಿ.ಎಸ್ ಹಾಡುಗಳು ಮತ್ತೆ ಎಲ್ಲರ ಮನ ಕಲುಕಲಿದೆ. ದೃಷ್ಟಿ ಹಾಗೂ ಅಂಗ ವಿಕಲ ಚೇತನರಿಗೆ ಸಮರ್ಥನಂ ಸಂಸ್ಥೆಯ ಸಹಯೋಗದೊಂದಿಗೆ ದೂರದರ್ಶನ ಓಪನ್ ಸಿಂಗಿಂಗ್ ಕಾಂಪಿಟೇಷನ್ ನಡೆಸಲಿದೆ. "ಮಧುರ ಮಧುರ ವೀ ಮಂಜುಳ ಗಾನ"ದ ವಿಶೇಷ ಸಂಚಿಕೆಯನ್ನು ಚಂದನ ಸಮರ್ಥನಂ ಟ್ರಸ್ಟ್ ಸಹಯೋಗದೊಂದಿಗೆ ನಡೆಸಲಿದೆ.

    Singing competition
    ಈ ಹಾಡುಗಾರಿಗೆ ಸ್ಪರ್ಧೆಯಲ್ಲಿ ವಯಸ್ಸಿನ ಅಭ್ಯಂತರವಿಲ್ಲದೆ ಎಲ್ಲಾ ದೃಷ್ಟಿ ಹಾಗೂ ಅಂಗ ವಿಕಲಚೇತನರು ಪಾಲ್ಗೊಳ್ಳಲು ಅವಕಾಶವಿದೆ. ಸಮರ್ಥನಂ ಈ ಹಿಂದೆ ಇಂತಹ ಸ್ಪರ್ಧೆಗಳನ್ನು ನಡೆಸಿ, ಸ್ಥಳೀಯ ಅವಕಾಶ ವಂಚಿತ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ವಿಶೇಷ ಪಾತ್ರವಹಿಸಿತ್ತು. ಈ ಸ್ಪರ್ಧೆಯಲ್ಲಿ ಹಾಡುಗಾರಿಕೆಯ ಜೊತೆಯಲ್ಲಿ ನೃತ್ಯ ಹಾಗೂ ಪಿ.ಬಿ.ಎಸ್ ಗೋಲ್ಡನ್ ಕಲೆಕ್ಷನ್ ಹಾಡುಗಳ ಅನಾವರಣವಾಗಲಿದೆ.

    ಈ ವಿಶೇಷ ಸಂಚಿಕೆಯಲ್ಲಿ 22 ಸೋಲೊ ಹಾಗೂ ಡ್ಯುಯೆಟ್ ಹಾಡುಗಳು ಮತ್ತು 4 ಡ್ಯಾನ್ಸ್ ಸೀಕ್ವೆನ್ಸ್ ಗಳು ಸೇರಿಕೊಂಡಿದೆ. ಗುರುರಾಜ್ ಮ್ಯೂಸಿಕ್ ಗ್ರೂಪ್ ಹಿನ್ನೆಲೆ ಸಂಗೀತವನ್ನು ನೀಡಲಿದೆ. ದಯಾನಂದ್ ಸಾಗರ್ ಕಾಲೇಜು ಆಡಿಟೋರಿಯಂನಲ್ಲಿ ಈ ಸ್ಪರ್ಧೆ ನಡೆಯಲಿದೆ. ನೀವು ರೆಡಿನಾ..?

    ಈ ವಿಶೇಷ ಸಂಚಿಕೆಯ ಆಯ್ಕೆ ಪ್ರಕ್ರಿಯೆ ಸಮರ್ಥನಂ ಟ್ರಸ್ಟ್ ನ ಹೆಚ್‍ಎಸ್‍ಆರ್ ಲೇ ಔಟ್ ನಲ್ಲಿ ಆಗಸ್ಟ್ 18ರಂದು ನಡೆಯಲಿದೆ. ಪಿ.ಬಿ.ಎಸ್ ಹಾಡುಗಳ ಅಭಿಮಾನಿ ಹಾಗೂ ಸಮರ್ಥನಂ ಟ್ರಸ್ಟ್ ನ ಫೌಂಡರ್ ಮ್ಯಾನೇಜಿಂಗ್ ಟ್ರಸ್ಟಿ ಜಿ.ಕೆ. ಮಹಾಂತೇಶ್ ಈ ಸ್ಪರ್ಧೆಯ ಬಗ್ಗೆ ಹಲವು ಕನಸುಗಳನ್ನು ಇಟ್ಟುಕೊಂಡಿದ್ದಾರೆ.

    "ಪಿ.ಬಿ. ಶ್ರೀನಿವಾಸ್ ಅವರಂತಹ ಮಹಾನ್ ಗಾಯಕನಿಗೆ ಗೌರವ ನೀಡುವುದಕ್ಕಾಗಿ ಇಂತಹ ಸ್ಪರ್ಧೆಗಳನ್ನು ನಡೆಸುತ್ತಾ ಇರೋದು ಖುಷಿ ಕೊಡುತ್ತಿದೆ. ವಿಕಲ ಚೇತನರ ಪ್ರತಿಭಾ ಪ್ರದರ್ಶನಕ್ಕೆ ದೊಡ್ಡ ವೇದಿಕೆ. ದೃಷ್ಟಿ ಹಾಗೂ ಅಂಗ ವಿಕಲಚೇತನರ ಬದುಕು ಬದಲಾಯಿಸುವ ಕಾರ್ಯಕ್ರಮ ಇದಾಗಲಿ" ಅನ್ನೋದು ಮಹಾಂತೇಶ್ ಆಶಯ.

    ಈ ವಿಶೇಷ ಸ್ಪರ್ಧೆಯ ರಿಜಿಸ್ಟ್ರೇಶನ್ ಈಗಾಗಲೇ ಆರಂಭವಾಗಿದೆ. ರಿಜಿಸ್ಟ್ರೇಷನ್ ಅನ್ನು 500 ಸ್ಪರ್ಧಿಗಳಿಗೆ ಮಾತ್ರ ಮೀಸಲು ಮಾಡಲಾಗಿದೆ. ಈ 500 ಸ್ಪರ್ಧಿಗಳ ಪೈಕಿ 2 ಸ್ಪರ್ಧೆಗಳಿಗೆ ತಲಾ 26 ಸ್ಪರ್ಧಿಗಳ 2 ತಂಡವನ್ನು ಅಯ್ಕೆ ಮಾಡಲಾಗುತ್ತದೆ. ಆಯ್ಕೆ ಪ್ರಕ್ರಿಯೆ ಬೆಳಗ್ಗೆ 9 ರಿಂದ ಮಧ್ಯಾಹ್ನದ ತನಕ ಮತ್ತು ಅಪರಾಹ್ನ 3 ಗಂಟೆಯಿಂದ ಮತ್ತೊಂದು 26 ಸ್ಪರ್ಧಿಗಳ ತಂಡದ ಆಯ್ಕೆ ನಡೆಯಲಿದೆ.

    ಆಯ್ಕೆ ಪ್ರಕ್ರಿಯೆಯಲ್ಲಿ ದೂರದರ್ಶನ ಚಂದನದ ಹೆಚ್ಚುವರಿ ಡೈರೆಕ್ಟರ್ ಜನರಲ್ ಮಹೇಶ್ ಜೋಷಿ, ಸಮರ್ಥನಂ ಟ್ರಸ್ಟ್ ನ ಫೌಂಡರ್ ಮ್ಯಾನೇಜಿಂಗ್ ಟ್ರಸ್ಟಿ ಜಿ.ಕೆ.ಮಹಾಂತೇಶ್ ಜೊತೆಗೆ ಖ್ಯಾತನಾಮ ಹಾಡುಗಾರರು ತೀರ್ಪುಗಾರರಾಗಿ ಆಗಮಿಸಲಿದ್ದಾರೆ. ಪ್ರತಿಭೆಗೆ ಮಾನ್ಯತೆ ಇರುವ ಈ ಶೋ ಗ್ರ್ಯಾಂಡ್ ಗಾಲಾ ಸೆರೆಮನಿ ಮೂಲಕ ಅಂತ್ಯಗೊಳ್ಳಲಿದೆ.

    ಮಧುರ ಮಧುರವೀ ಮಂಜುಳಗಾನ 8 ಎಪಿಸೋಡ್ ಗಳ ಮೂಲಕ ಟೆಲಿಕಾಸ್ಟ್ ಆಗಲಿದೆ. ಸೆಪ್ಟಂಬರ್ ತಿಂಗಳ ಅಂತ್ಯದಲ್ಲಿ ಎಪಿಸೋಡ್ ಗಳು ಪ್ರಸಾರಗೊಳ್ಳುವ ನಿರೀಕ್ಷೆ ಇದೆ. ಪ್ರತಿಭಾನ್ವಿತ ವಿಕಲಚೇತನರು ತಮ್ಮ ಹಾಡುಗಾರಿಕೆಯ ಕನಸನನ್ನು ನನಸು ಮಾಡಿಕೊಳ್ಳಲು 8095643973/8095521048/9886995822/ 080-25721444 ಸಂಖ್ಯೆಗಳನ್ನು ಸಂಪರ್ಕಿಸಬಹುದು. ಈ ಕಾರ್ಯಕ್ರಮವನ್ನು ಪ್ರೋತ್ಸಾಹಿಸಲು ಬಯಸುವವರು 9449864699 ಅಥವಾ [email protected] ನ್ನು ಸಂಪರ್ಕಿಸಬಹುದು. (ಒನ್ಇಂಡಿಯಾ ಕನ್ನಡ)

    English summary
    Haadondu haaduve … Remember this golden track of old from the legendary PB Srinivas? Wherever PBS is, he will be hearing this on September 22, 2013, from his special fans, truly special. Await an open Kannada singing competition to be held exclusively for the visually impaired. Doordarshan chain association with Samarthanam Trust for the Disabled will be hosting this unique format show called Madhura Madhuravee Manjula Gana as a tribute to PB Srinivas.
    Tuesday, August 6, 2013, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X