ಮ್ಯೂಸಿಕ್ ಡೈರೆಕ್ಟರ್ ಆದ ರಿಯಾಲಿಟಿ ಶೋ ಕೀ ಬೋರ್ಡ್ ಪ್ಲೇಯರ್

ರಿಯಾಲಿಟಿ ಶೋಗಳಲ್ಲಿ ಕೀ ಬೋರ್ಡ್ ನುಡಿಸುತ್ತಿದ್ದ ಪ್ರತಿಭೆ ಆಕಾಶ್ ಪರ್ವ ಇದೀಗ ಒಂದು ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಚಿತ್ರದ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ.

ಆಕಾಶ್ ಪರ್ವ ಬಗ್ಗೆ ಈ ಹಿಂದೆ 'ಫಿಲ್ಮಿಬೀಟ್ ಕನ್ನಡ' ಒಂದು ವಿಶೇಷ ಲೇಖನ ಪ್ರಕಟ ಮಾಡಿತ್ತು. ಇದೀಗ ಆಕಾಶ್ ಒಂದು ಸಿನಿಮಾಗೆ ಸಂಗೀತ ನೀಡಿದ್ದಾರೆ. 'ಲೈಟಾಗಿ ಲವ್ವಾಗಿದೆ' ಸಿನಿಮಾಗೆ ಆಕಾಶ್ ಪರ್ವ ಮ್ಯೂಸಿಕ್ ಮಾಡಿದ್ದಾರೆ. ಈ ಸಿನಿಮಾದ ಟೈಟಲ್ ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ನಟ ಪುನೀತ್ ರಾಜ್ ಕುಮಾರ್ ಸಿನಿಮಾದ ಹಾಡಿನ ಬಗ್ಗೆ ಒಳ್ಳೆ ಮಾತುಗಳನ್ನು ಹಾಡಿದ್ದಾರೆ.

ಟಿ ಸೀರಿಸ್ ಹಾಗೂ ಲಹರಿ ಯೂ ಟ್ಯೂಬ್ ಚಾನಲ್ ನಲ್ಲಿ ಹಾಡು ಬಿಡುಗಡೆಯಾಗಿದೆ. ನಾಲ್ಕು ದಿನದಲ್ಲಿ 1 ಲಕ್ಷದ 40 ಸಾವಿರಕ್ಕೂ ಅಧಿಕ ಹಿಟ್ಸ್ ಹಾಡಿಗೆ ಸಿಕ್ಕಿದೆ. ಹಾಡಿಗೆ ಸಂಜಯ್ ಕುಮಾರ್ ಗಂಗಾವತಿ ಸಾಹಿತ್ಯ ಬರೆದಿದ್ದಾರೆ. ಆಕಾಶ್ ಪರ್ವ ಹಾಗೂ ಐಶ್ವರ್ಯ ರಂಗರಾಜನ್ ಹಾಡಿದ್ದಾರೆ.

Light Aagi Love Ayithu kannada song got positive response

ಹಾಡು ಉತ್ತರ ಕರ್ನಾಟಕದ ಶೈಲಿಯಲ್ಲಿ ಇದೆ. ಸರಿಗಮಪ ಸೀಸನ್ 11ರ ವಿಜೇತ ಚೆನ್ನಪ್ಪ ಹಾಗೂ ದಿವ್ಯ ಚಿತ್ರದಲ್ಲಿ ನಟಿಸಿದ್ದಾರೆ. ಗುರುರಜ್ ಗದಾಡಿ ಚಿತ್ರದ ನಿರ್ದೇಶನ ಮಾಡಿದ್ದಾರೆ. ಪ್ರಜ್ವಲ್ ಸಿನಿ ಕ್ರಿಯೇಷನ್ಸ್ ನಲ್ಲಿ ಚಿತ್ರದ ನಿರ್ಮಾಣ ಆಗಿದೆ.

Light Aagi Love Ayithu kannada song got positive response

ಆಕಾಶ್ ಪರ್ವ ಕಿರುತೆರೆ ಕಾರ್ಯಕ್ರಮಗಳು

ತನ್ನ 22ನೇ ವಯಸ್ಸಿನಲ್ಲಿಯೇ ಬಹುತೇಕ ಕನ್ನಡ ವಾಹಿನಿಗಳ ರಿಯಾಲಿಟಿ ಶೋ ಗಳಲ್ಲಿ ಆಕಾಶ್ ಕೆಲಸ ಮಾಡಿದ್ದರು. 'ಫ್ರೆಶ್ ವಾಯ್ಸ್ ಆಫ್ ಕರ್ನಾಟಕ', 'ನೋಡಿ ಸ್ವಾಮಿ ನಾವ್ ಹಾಡೊದೇ ಹೀಗೆ', 'ಮಧುರ ಮಧುರವೀ ಮಂಜುಳ ಗಾನ', 'ಸ್ಟಾರ್ ಸಿಂಗರ್', 'ಸಿಂಪಲ್ಲಾಗ್ ಒಂದ್ ಸಿಂಗಿಂಗ್ ಶೋ', 'ಎದೆ ತುಂಬಿ ಹಾಡುವೆನು', ಜೀ ಕನ್ನಡ ವಾಹಿನಿಯ 'ಸ ರಿ ಗ ಮ ಪ ಸೀಸನ್ 10, 11, 12, 13 ಹಾಗೂ 14, 'ಕನ್ನಡ ಕೋಗಿಲೆ' ಆಕಾಶ್ ಅವರ ಪ್ರಮುಖ ರಿಯಾಲಿಟಿ ಶೋಗಳಾಗಿವೆ.

More from Filmibeat

English summary
Light Aagi Love Ayithu kannada song got positive response
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X