For Quick Alerts
  ALLOW NOTIFICATIONS  
  For Daily Alerts

  ಹಿಂದು ಧಾರ್ಮಿಕ ಭಾವನೆಗೆ ಧಕ್ಕೆ: ಸನ್ನಿ ಲಿಯೋನ್ ಬಂಧಿಸಲು ಒತ್ತಾಯ

  |

  ಸನ್ನಿ ಲಿಯೋನ್ ಸೊಂಟ ಕುಣಿಸಿರುವ 'ಮಧುಬನ್' ಹಾಡು ವಿವಾದಕ್ಕೆ ಕಾರಣವಾಗಿದೆ. ಸನ್ನಿ ಲಿಯೋನ್ ನರ್ತಿಸಿರುವ 'ಮಧುಬನ್' ಹಾಡು ಹಿಂದು ಭಾವನೆಗಳಿಗೆ ಧಕ್ಕೆ ತರುತ್ತಿದೆ ಹಾಡನ್ನು ಡಿಲೀಟ್ ಮಾಡಬೇಕು ಎಂಬ ಒತ್ತಾಯ ಕೇಳಿ ಬಂದಿತ್ತು. ಇದೀಗ ಹಾಡಿನ ವಿರುದ್ಧ ಆಕ್ರೋಶ ಹೊರಹಾಕಿರುವ ಮಥುರಾ ಅರ್ಚಕರು ಸನ್ನಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.

  ಸನ್ನಿ ಲಿಯೋನ್‌ರ 'ಮಧುಬನ್' ಹಾಡಿನ ವಿರುದ್ಧ ಮಥುರಾದ ಅರ್ಚಕರು ಪ್ರತಿಭಟನೆ ಮಾಡಿದ್ದು, ಠಾಣೆಯಲ್ಲಿ ದೂರು ಸಹ ದಾಖಲಿಸಿದ್ದಾರೆ. 'ಮಧುಬನ್' ಎಂಬುದು ಪವಿತ್ರ ಸ್ಥಳ ಮತ್ತು ರಾಧೆ ಕೃಷ್ಣನ ಭಕ್ತೆ, ನರ್ತಕಿ ಅಲ್ಲ. ಹಾಗಿದ್ದೂ 'ಮಧುಬನ್' ಹಾಡಿನಲ್ಲಿ ಸನ್ನಿ ಲಿಯೋನ್ ಗ್ಲಾಮರಸ್ ಆಗಿ ನರ್ತಿಸುತ್ತಿರುವುದು ರಾಧೆಗೆ, ಮಧುಬನ್‌ಗೆ ಮಾಡಿದ ಅಪಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಾಡನ್ನು ಹಿಂಪಡೆಯುವ ಜೊತೆಗೆ ಸನ್ನಿ ಲಿಯೋನ್ ಹಾಗೂ ಗಾಯಕಿ ಕನ್ನಿಕಾ ಕಪೂರ್ ಬೇಷರತ್ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿಯೂ ಸನ್ನಿ ಲಿಯೋನ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, 'ಅರೆಸ್ಟ್ ಸನ್ನಿ ಲಿಯೋನ್' ಟ್ರೆಂಡ್ ಆಗುತ್ತಿದೆ. ಇದರ ಜೊತೆಗೆ ಮಧ್ಯ ಪ್ರದೇಶದ ಸರ್ಕಾರದ ಗೃಹ ಸಚಿವ ನರೋತ್ತಮ ಮಿಶ್ರಾ ಸಹ ಹಾಡಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ''ಸನ್ನಿ ಲಿಯೋನ್‌ ನರ್ತಿಸಿರುವ ಹಾಡು ಹಿಂದು ಭಾವನೆಗಳಿಗೆ ಧಕ್ಕೆ ತರುತ್ತಿದೆ. ಹಾಡನ್ನು ಹಿಂಪಡೆಯಬೇಕು, ಇಲ್ಲವಾದರೆ ಕಾನೂನು ಕ್ರಮ ಎದುರಿಸಲು ಸಜ್ಜಾಗಿ'' ಎಂದು ಹಾಡನ್ನು ಬಿಡುಗಡೆ ಮಾಡಿದ್ದ ಸಾರೆಗಾಮಾ ಸಂಗೀತ ಸಂಸ್ಥೆಗೆ ಎಚ್ಚರಿಕೆ ನೀಡಿದ್ದರು.

  ಸನ್ನಿ ಲಿಯೋನ್ ಅನ್ನು ಬಂಧಿಸಬೇಕೆಂಬ ಆಗ್ರಹದ ಜೊತೆಗೆ ಆಲಿಯಾ ಭಟ್ ಅನ್ನು ಸಹ ಬಂಧಿಸಬೇಕೆಂದು ಕೆಲವರು ಒತ್ತಾಯಿಸಿದ್ದಾರೆ. ಸಿನಿಮಾ ಒಂದರಲ್ಲಿ ಆಲಿಯಾ ಭಟ್ ಸಹ ರಾಧೆಯ ಕುರಿತಾದ ಹಾಡಿಗೆ ನರ್ತಿಸಿದ್ದಾರೆ. ಆ ಹಾಡನ್ನು ನಿಷೇಧಿಸಿ, ಆಲಿಯಾ ಭಟ್ ಅನ್ನು ಬಂಧಿಸಬೇಕೆಂಬ ಒತ್ತಾಯ ಏಕೆ ಕೇಳಿ ಬರುತ್ತಿಲ್ಲ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.

  ಇದೀಗ ಸಾರೆಗಾಮಾ ಸಂಗೀತ ಸಂಸ್ಥೆಯು ಹಾಡಿನ ಬಗ್ಗೆ ಸ್ಪಷ್ಟನೆ ನೀಡಿದ್ದು, ''ಮಧುಬನ್ ಹಾಡಿನ ಸಾಹಿತ್ಯ ಮತ್ತು ಹೆಸರನ್ನು ನಾವು ಬದಲಾವಣೆ ಮಾಡುತ್ತೇವೆ. ಈಗಿರುವ 'ಮಧುಬನ್' ಹಾಡು ಎಲ್ಲೆಲ್ಲಿ ಪ್ರಸಾರವಾಗುತ್ತಿದೆಯೋ ಆ ವೇದಿಕೆಗಳಲ್ಲಿ ಹೊಸ ಹಾಡನ್ನು ಹಾಕುತ್ತೇವೆ'' ಎಂದು ಹೇಳಿದೆ.

  'ನಾಚೇ ಮಧುಬನ್‌ಮೆ ರಾಧಿಕಾ' ಎಂಬ ಸಾಹಿತ್ಯ ಉಳ್ಳ ಹಾಡಿನಲ್ಲಿ ಸನ್ನಿ ಲಿಯೋನ್ ಮಾದಕವಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡನ್ನು ಕನ್ನಿಕಾ ಕಪೂರ್ ಹಾಡಿದ್ದಾರೆ. ಸಂಗೀತ ನೀಡಿರುವುದು ಶಾರಿಬ್ ಮತ್ತು ತೋಶಿ. ಹಾಡು ಸಾರೆಗಾಮಾ ಯೂಟ್ಯೂಬ್‌ ಚಾನೆಲ್‌ನಲ್ಲಿ ಬಿಡುಗಡೆ ಆಗಿದ್ದು ಈ ವರೆಗೆ 1 ಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ.

  English summary
  As Madhuban song controversy evolve, Arrest Sunny Leone trends on social media. Mathura's priests protest against Sunny Leone and demand her arrest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X