ಪ್ರೇಮದ ಪೂಜಾರಿಯ ಬೆನ್ನುಬಿದ್ದ ನಾಗಶೇಖರ್

1965 ರಲ್ಲಿ ಡಾ ರಾಜ್ ಕುಮಾರ್ ಹಾಗೂ ಲೀಲಾವತಿ ಅಭಿನಯಿಸಿದ್ದ ಚಿತ್ರ 'ನಾಗಪೂಜಾ'. ಇದರಲ್ಲಿ ಆ ಹಾಡನ್ನು ಹಾಡಿದ್ದು ಜನಪ್ರಿಯ ಗಾಯಕಿ ಎಲ್ ಆರ್ ಈಶ್ವರಿ. ಈ ಗೀತೆಯನ್ನು ರಚಿಸಿದ್ದು ಹೆಸರಾಂತ ಗೀತೆ ರಚನೆಕಾರ ಗೀತಪ್ರಿಯಾ.
ನೇರವಾಗಿ ಗೀತಪ್ರಿಯಾ ಮನೆಗೇ ತೆರಳಿರುವ ನಿರ್ದೇಶಕ ನಾಗಶೇಖರ್, ಆ ಹಾಡನ್ನು ತಮ್ಮ ಮೈನಾ ಚಿತ್ರಕ್ಕೆ ಬಳಸಿಕೊಳ್ಳಲು ಅವರ ಅನುಮತಿ ಕೇಳಿದ್ದಾರೆ. ಅವರು ಅದಕ್ಕೆ ಸಂತೋಷದಿಂದ ಒಪ್ಪಿಗೆ ಕೊಟ್ಟಿದ್ದಾರೆ.
ಮೈನಾಗೆ ಸಂಗೀತ ನೀಡಿತ್ತಿರುವ ಜೆಸ್ಸಿಗಿಫ್ಟ್ ಈ ಪ್ರೇಮದ ಪೂಜಾರಿ ಹಾಡಿಗೆ ಹೊಸ ಟ್ಯೂನ್ ಕಂಡುಹಿಡಿಯಲಿದ್ದಾರೆ. ಮೂಲ ಚಿತ್ರದಲ್ಲಿ ಈ ಹಾಡಿಗೆ ಸ್ವರಸಂಯೋಜನೆ ಮಾಡಿದ್ದು ಟಿಜಿ ಲಿಂಗಪ್ಪ. ಮೈನಾಗಾಗಿ ಈ ಹಾಡನ್ನು ಹಾಡಿಲಿರುವವರು ಶ್ರೇಯಾ ಘೋಶಾಲ್.
ಒಟ್ಟಿನಲ್ಲಿ 'ಹೊಸ ಬಾಟಲಿಯಲ್ಲಿ ಹಳೆಯ ಮದ್ಯ' ಎಂಬ ಗಾದೆಯಂತೆ ಹಳೆಯ ಹಾಡುಗಳು ಹಾಗೂ ಹಳೆಯ ಚಿತ್ರಗಳು ಹೊಸ ರೂಪ ಪಡೆದು ಮತ್ತೆ ಪ್ರೇಕ್ಷಕರೆದುರು ಬರುತ್ತಿವೆ. ಸದ್ಯದಲ್ಲೇ, ಆರತಿ-ಶ್ರೀನಾಥ್ ಜೋಡಿಯ ಚಿತ್ರ 'ಶುಭ ಮಂಗಳ' ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಮತ್ತೆ ಬರಲಿದೆ.
ಮೈನಾದಲ್ಲಿ ಬರಲಿರುವ 'ಓ ಪ್ರೇಮದ ಪೂಜಾರಿ...' ಎಂಬ ಹಾಡು ಹೇಗಿರಬಹುದು ಎಂಬ ಕುತೂಹಲ ಜನರಲ್ಲಿ ಇದೀಗ ಪ್ರಾರಂಭವಾಗಲಿದೆ. ಜೆಸ್ಸಿಗಿಫ್ಟ್ ಸಂಗೀತ ಹಾಗೂ ಶ್ರೇಯಾ ಕಂಠ ಜನರಿಗೆ ಮೋಡಿ ಮಾಡಬಹುದೇ? (ಒನ್ ಇಂಡಿಯಾ ಕನ್ನಡ)


Click it and Unblock the Notifications











