For Quick Alerts
  ALLOW NOTIFICATIONS  
  For Daily Alerts

  ಪ್ರೇಮದ ಪೂಜಾರಿಯ ಬೆನ್ನುಬಿದ್ದ ನಾಗಶೇಖರ್

  |

  ಸಂಜು ವೆಡ್ಸ್ ಗೀತಾ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ನಾಗಶೇಖರ್ ಕೈಗೆತ್ತಿಕೊಂಡಿರುವ ಚಿತ್ರ 'ಮೈನಾ' ಈ ಚಿತ್ರಕ್ಕೆ ಒಂದು ಹಳೆಯ ಹಾಡನ್ನು ಬಳಸಿಕೊಳ್ಳಲು ನಿರ್ಧರಿಸಿದ್ದಾರೆ ನಾಗಶೇಖರ್. ಅದು, 'ನಾಗಪೂಜಾ' ಚಿತ್ರದ 'ಓ ಪ್ರೇಮದ ಪೂಜಾರಿ...' ಎಂಬ ಹಾಡು.

  1965 ರಲ್ಲಿ ಡಾ ರಾಜ್ ಕುಮಾರ್ ಹಾಗೂ ಲೀಲಾವತಿ ಅಭಿನಯಿಸಿದ್ದ ಚಿತ್ರ 'ನಾಗಪೂಜಾ'. ಇದರಲ್ಲಿ ಆ ಹಾಡನ್ನು ಹಾಡಿದ್ದು ಜನಪ್ರಿಯ ಗಾಯಕಿ ಎಲ್ ಆರ್ ಈಶ್ವರಿ. ಈ ಗೀತೆಯನ್ನು ರಚಿಸಿದ್ದು ಹೆಸರಾಂತ ಗೀತೆ ರಚನೆಕಾರ ಗೀತಪ್ರಿಯಾ.

  ನೇರವಾಗಿ ಗೀತಪ್ರಿಯಾ ಮನೆಗೇ ತೆರಳಿರುವ ನಿರ್ದೇಶಕ ನಾಗಶೇಖರ್, ಆ ಹಾಡನ್ನು ತಮ್ಮ ಮೈನಾ ಚಿತ್ರಕ್ಕೆ ಬಳಸಿಕೊಳ್ಳಲು ಅವರ ಅನುಮತಿ ಕೇಳಿದ್ದಾರೆ. ಅವರು ಅದಕ್ಕೆ ಸಂತೋಷದಿಂದ ಒಪ್ಪಿಗೆ ಕೊಟ್ಟಿದ್ದಾರೆ.

  ಮೈನಾಗೆ ಸಂಗೀತ ನೀಡಿತ್ತಿರುವ ಜೆಸ್ಸಿಗಿಫ್ಟ್ ಈ ಪ್ರೇಮದ ಪೂಜಾರಿ ಹಾಡಿಗೆ ಹೊಸ ಟ್ಯೂನ್ ಕಂಡುಹಿಡಿಯಲಿದ್ದಾರೆ. ಮೂಲ ಚಿತ್ರದಲ್ಲಿ ಈ ಹಾಡಿಗೆ ಸ್ವರಸಂಯೋಜನೆ ಮಾಡಿದ್ದು ಟಿಜಿ ಲಿಂಗಪ್ಪ. ಮೈನಾಗಾಗಿ ಈ ಹಾಡನ್ನು ಹಾಡಿಲಿರುವವರು ಶ್ರೇಯಾ ಘೋಶಾಲ್.

  ಒಟ್ಟಿನಲ್ಲಿ 'ಹೊಸ ಬಾಟಲಿಯಲ್ಲಿ ಹಳೆಯ ಮದ್ಯ' ಎಂಬ ಗಾದೆಯಂತೆ ಹಳೆಯ ಹಾಡುಗಳು ಹಾಗೂ ಹಳೆಯ ಚಿತ್ರಗಳು ಹೊಸ ರೂಪ ಪಡೆದು ಮತ್ತೆ ಪ್ರೇಕ್ಷಕರೆದುರು ಬರುತ್ತಿವೆ. ಸದ್ಯದಲ್ಲೇ, ಆರತಿ-ಶ್ರೀನಾಥ್ ಜೋಡಿಯ ಚಿತ್ರ 'ಶುಭ ಮಂಗಳ' ಅಲ್ಪಸ್ವಲ್ಪ ಬದಲಾವಣೆಯೊಂದಿಗೆ ಮತ್ತೆ ಬರಲಿದೆ.

  ಮೈನಾದಲ್ಲಿ ಬರಲಿರುವ 'ಓ ಪ್ರೇಮದ ಪೂಜಾರಿ...' ಎಂಬ ಹಾಡು ಹೇಗಿರಬಹುದು ಎಂಬ ಕುತೂಹಲ ಜನರಲ್ಲಿ ಇದೀಗ ಪ್ರಾರಂಭವಾಗಲಿದೆ. ಜೆಸ್ಸಿಗಿಫ್ಟ್ ಸಂಗೀತ ಹಾಗೂ ಶ್ರೇಯಾ ಕಂಠ ಜನರಿಗೆ ಮೋಡಿ ಮಾಡಬಹುದೇ? (ಒನ್ ಇಂಡಿಯಾ ಕನ್ನಡ)

  English summary
  Nagashekhar Maina Movie remaking a song from old movie Dr Rajkumar and Leelavathi starer 'Nagapooja'. The Song is 'O Premada Poojari...'. Geetapriya wrote this song and TG Lingappa Music for this. Now, this new version will have Jassie Gift Music and Shreya Goshal voice

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X