'ಮಜ್ಜಿಗೆ ಹುಳಿ' ರುಚಿ ನೋಡಿದ ಗುರುಕಿರಣ್
'ಮಜ್ಜಿಗೆ ಹುಳಿ' ಕನ್ನಡ ಸಿನಿಮಾದ ಹಾಡು ನಿನ್ನೆ ಬಿಡುಗಡೆಯಾಗಿದೆ. ಈ ಸಿನಿಮಾದ ಟೈಟಲ್ ಸಾಂಗ್ ಇದಾಗಿದ್ದು, ಹಾಡು ಕೇಳಲು ಫನ್ನಿಯಾಗಿದೆ.
ವೆಜ್ ಹಾಗೂ ನಾನ್ ವೆಜ್ ಉದಾಹರಣೆ ಮೂಲಕ ಹಾಡನ್ನು ಬರೆದು ಕೇಳುಗರಿಗೆ ನೀಡಿದ್ದಾರೆ. ಹಾಡಿನ ವಿಶೇಷ ಅಂದರೆ, ಗುರುಕಿರಣ್ ಧ್ವನಿ ನೀಡಿರುವುದು. ಗುರು ಹಾಡಿದ ಮಜ್ಜಿಗೆ ಹುಳಿ ಹಾಡು ಇದೀಗ ಯೂಟ್ಯೂಬ್ ನ ಲಹರಿ ಚಾನಲ್ ನಲ್ಲಿ ರಿಲೀಸ್ ಆಗಿದೆ.

ದೀಕ್ಷಿತ್ ಸಿನಿಮಾದ ನಾಯಕಿಯಾಗಿದ್ದಾರೆ. ರೂಪಿಕಾ ನಾಯಕಿಯಾಗಿದ್ದಾರೆ. ಉಳಿದಂತೆ, ಸುಚೇಂದ್ರ ಪ್ರಸಾದ್, ರಮೇಶ್ ಭಟ್ ಸಿನಿಮಾ ತಾರ ಬಳಗದಲ್ಲಿ ಇದ್ದಾರೆ. ನಿರ್ದೇಶಕ ರವೀಂದ್ರ ಕೊಟಕಿ ಅವರೇ ಈ ಹಾಡನ್ನು ಬರೆದಿದ್ದಾರೆ.
ಎಮ್ ಸಂಜೀವ್ ರಾವ್ ಸಂಗೀತ ನೀಡಿದ್ದಾರೆ. ರಾಮಚಂದ್ರ ಎಸ್ ಸಿನಿಮಾಗೆ ಬಂಡವಾಳ ಹಾಕಿದ್ದಾರೆ.
More from Filmibeat
English summary
Majjige Huli kannada movie song release


Click it and Unblock the Notifications











