For Quick Alerts
  ALLOW NOTIFICATIONS  
  For Daily Alerts

  'ಲಕ್ಕಿಮ್ಯಾನ್' ಮೆಲೋಡಿ ಟ್ರ್ಯಾಕ್: 'ಮನಸೆಲ್ಲಾ ನೀನೆ' ಎಂದು ಕಾಡುವ ಸಂಚಿತ್ ಹೆಗ್ಡೆ ವಾಯ್ಸ್

  |

  ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ನಟನೆಯ 'ಲಕ್ಕಿಮ್ಯಾನ್' ಸಿನಿಮಾ ಬಹಳ ಕುತೂಹಲ ಕೆರಳಿಸಿದೆ. ಕಾರಣ ಚಿತ್ರದಲ್ಲಿ ದಿವಂಗತ ನಟ ಪುನೀತ್ ರಾಜ್‌ಕುಮಾರ್ ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಸೆಪ್ಟೆಂಬರ್‌ನಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದ್ದು, ಸದ್ಯ ಚಿತ್ರದ ಸಾಂಗ್‌ವೊಂದು ರಿಲೀಸ್ ಆಗಿ ಸದ್ದು ಮಾಡ್ತಿದೆ.

  ತಮಿಳಿನ 'ಓ ಮೈ ಕಡವುಲೇ' ಸಿನಿಮಾದ ರಿಮೇಕ್ 'ಲಕ್ಕಿಮ್ಯಾನ್'. ಪ್ರಭುದೇವಾ ಸಹೋದರ ಎಸ್. ನಾಗೇಂದ್ರ ಪ್ರಸಾದ್ ನಿರ್ದೇಶನದಲ್ಲಿ ಈ ರೊಮ್ಯಾಂಟಿಕ್ ಫ್ಯಾಂಟಸಿ ಸಿನಿಮಾ ಮೂಡಿ ಬಂದಿದೆ. ವಿಶೇಷ ಅಂದರೆ ಚಿತ್ರದ ಹಾಡೊಂದರಲ್ಲಿ ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವಾ ಹಾಗೂ ಕನ್ನಡದ ಮೈಕಲ್ ಜಾಕ್ಸನ್‌ ಪುನೀತ್‌ ರಾಜ್‌ಕುಮಾರ್‌ ಒಟ್ಟಿಗೆ ಡ್ಯಾನ್ಸ್ ಮಾಡಿದ್ದಾರೆ.

  ಕನ್ನಡ ರಾಜ್ಯೋತ್ಸವಕ್ಕೆ ಸಿನಿಮೋತ್ಸವ: 'ಗಂಧದ ಗುಡಿ' ಎದುರು 'ಕ್ರಾಂತಿ'?ಕನ್ನಡ ರಾಜ್ಯೋತ್ಸವಕ್ಕೆ ಸಿನಿಮೋತ್ಸವ: 'ಗಂಧದ ಗುಡಿ' ಎದುರು 'ಕ್ರಾಂತಿ'?

  ಪಿ. ಆರ್ ಮೀನಾಕ್ಷಿ ಸುಂದರಂ ಹಾಗೂ ಆರ್. ಸುಂದರ ಕಾಮರಾಜ್ 'ಲಕ್ಕಿಮ್ಯಾನ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸುಂದರ್‌ ರಾಜ್, ರಂಗಾಯಣ ರಘು, ನಾಗಭೂಷಣ್, ಸುಧಾ ಬೆಳವಾಡಿ, ಸಾಧುಕೋಕಿಲ, ರೋಶನಿ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಸದ್ಯ ಲಿರಿಕಲ್ ಸಾಂಗ್ ರಿಲೀಸ್ ಮಾಡಿ ಗಾನ ಬಜಾನಾ ಶುರು ಮಾಡಿದ್ದಾರೆ.

   'ಮನಸೆಲ್ಲಾ ನೀನೆ' ಸಾಂಗ್

  'ಮನಸೆಲ್ಲಾ ನೀನೆ' ಸಾಂಗ್

  ಸಿನಿಮಾ ರಿಲೀಸ್‌ ಡೇಟ್‌ ಹತ್ತಿರವಾದಂತೆ ಒಂದೊಂದೇ ಸ್ಯಾಂಪಲ್ ರಿಲೀಸ್ ಮಾಡ್ತಿದೆ ಚಿತ್ರತಂಡ. ಚಿತ್ರದ ಮೊದಲ ಸಾಂಗ್ 'ಮನಸೆಲ್ಲಾ ನೀನೆ' ಲಿರಿಕಲ್ ವಿಡಿಯೋ ಸಂಗೀತ ಪ್ರೇಮಿಗಳ ಮನಗೆದ್ದಿದೆ. ವಿ2 ವಿಜಯ್ ವಿಕ್ಕಿ ಮ್ಯೂಸಿಕ್ ಕಂಪೋಸ್ ಮಾಡಿರೋ ಮ್ಯೂಸಿಕ್‌ಗೆ ಧನಂಜಯ ರಾಜನ್ ಸಾಹಿತ್ಯ ಬರೆದಿದ್ದಾರೆ. ನಾಯಕಿ ನಾಯಕಿ ಬೈಕ್ ಹೊರಟಾಗ ಈ ಮಾಂಟೇಜ್ ಸಾಂಗ್ ಬರುತ್ತದೆ.

  ಸಪ್ತ ಸಾಗರದಾಚೆ ಬಹಳ ಎತ್ತರಕ್ಕೆ ಹಾರಲಿದೆ ಭಟ್ಟರ ಹೊಸ 'ಗಾಳಿಪಟ'!ಸಪ್ತ ಸಾಗರದಾಚೆ ಬಹಳ ಎತ್ತರಕ್ಕೆ ಹಾರಲಿದೆ ಭಟ್ಟರ ಹೊಸ 'ಗಾಳಿಪಟ'!

   ಸಂಚಿತ್ ಹೆಗ್ಡೆ ವಾಯ್ಸ್ ಸೂಪರ್

  ಸಂಚಿತ್ ಹೆಗ್ಡೆ ವಾಯ್ಸ್ ಸೂಪರ್

  ಸಂಜಿತ್ ಹೆಗ್ಡ್ ವಾಯ್ಸ್‌ನಲ್ಲಿ 'ಮನಸೆಲ್ಲಾ ನೀನೆ' ಸಾಂಗ್ ಪದೇ ಪದೇ ಗುನುಗುವಂತಿದೆ. ತಮ್ಮ ಮೆಲೋಡಿ ವಾಯ್ಸ್‌ನಿಂದ ಬಹುಭಾಷಾ ಗಾಯಕ ಸಾಂಗ್‌ಗೆ ಮತ್ತಷ್ಟು ಜೀವ ತುಂಬಿದ್ದಾರೆ. ಕನ್ನಡ ಸಿನಿರಸಿಕರು ರಿಪೀಟ್ ಮೋಡ್‌ನಲ್ಲಿ ಸಾಂಗ್ ಕೇಳಿ ಎಂಜಾಯ್ ಮಾಡ್ತಿದ್ದಾರೆ. ಕಲರ್‌ಫುಲ್ ಲೊಕೇಶನ್‌ಗಳಲ್ಲಿ ಛಾಯಾಗ್ರಾಹಕ ಜೀವ ಶಂಕರ್ ಹಾಡನ್ನು ಸೆರೆಹಿಡಿದಿದ್ದಾರೆ. ಅದರ ಝಲಕ್‌ ಅನ್ನು ನೋಡಬಹುದು.

   ರಕ್ಷಿತ್ ಶೆಟ್ಟಿ ಸಾಂಗ್ ರಿಲೀಸ್

  ರಕ್ಷಿತ್ ಶೆಟ್ಟಿ ಸಾಂಗ್ ರಿಲೀಸ್

  ನಟ, ನಿರ್ದೇಶಕ, ನಿರ್ಮಾಪಕ ರಕ್ಷಿತ್ ಶೆಟ್ಟಿ 'ಮನಸೆಲ್ಲಾ ನೀನೆ' ಸಾಂಗ್ ರಿಲೀಸ್ ಮಾಡಿ ತಂಡಕ್ಕೆ ಶುಭ ಕೋರಿದ್ದಾರೆ. "ಅಪ್ಪು ಸರ್ ಹಾಗೂ ಮತ್ತವರ ಔದಾರ್ಯ ಸ್ಮರಿಸುತ್ತಾ ಸಂತಸದಿಂದ ಈ ಮೆಲೋಡಿ ಸಾಂಗ್ ಬಿಡುಗಡೆ ಮಾಡುತ್ತಿದ್ದೀನಿ. ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಮತ್ತು ತಂಡಕ್ಕೆ ಶುಭವಾಗಲಿ" ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.

   ಅಪ್ಪು ಕೊನೆಯ ಸಿನಿಮಾ

  ಅಪ್ಪು ಕೊನೆಯ ಸಿನಿಮಾ

  ಪುನೀತ್‌ ರಾಜ್‌ಕುಮಾರ್‌ ಭೌತಿಕವಾಗಿ ಇಲ್ಲದೇ ಇದ್ದರೂ ಅಭಿಮಾನಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಕೊನೆಯುಸಿರೆಳೆಯುವ ಮುನ್ನ ಅಪ್ಪು 'ಲಕ್ಕಿಮ್ಯಾನ್' ಶೂಟಿಂಗ್ ಮುಗಿಸಿದ್ದರು. 'ಜೇಮ್ಸ್' ಹೀರೊ ಆಗಿ ಕೊನೆಯ ಸಿನಿಮಾ. ಆದರೆ ಇದು ಅಪ್ಪು ನಟನೆಯ ಕೊನೆಯ ಕಮರ್ಷಿಯಲ್ ಸಿನಿಮಾ. 'ಲಕ್ಕಿಮ್ಯಾನ್' ನಂತರ 'ಗಂಧದಗುಡಿ' ಸಿನಿಮಾ ತೆರೆಗೆ ಬರಲಿದೆ.

   ದೇವರಾಗಿ ಪವರ್ ಸ್ಟಾರ್

  ದೇವರಾಗಿ ಪವರ್ ಸ್ಟಾರ್

  ಅಭಿಮಾನಿಗಳು ಈಗಾಗಲೇ ಪುನೀತ್ ರಾಜ್‌ಕುಮಾರ್‌ಗೆ ದೇವರ ಸ್ಥಾನ ಕೊಟ್ಟುಬಿಟ್ಟಿದ್ದಾರೆ. ಮನೆ ಮನಗಳಲ್ಲಿ ಅಪ್ಪು ಫೋಟೊ ಇಟ್ಟು ಪೂಜೆ ಮಾಡುತ್ತಿದ್ದಾರೆ. ವಿಪರ್ಯಾಸ ಅಂದರೆ ಕೊನೆಯ ಚಿತ್ರದಲ್ಲಿ ಪವರ್ ಸ್ಟಾರ್ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮಿಳಿನಲ್ಲಿ ಈ ಪಾತ್ರವನ್ನು ವಿಜಯ್ ಸೇತುಪತಿ ಮಾಡಿದ್ದರು.

  English summary
  Manasella Neene Lyrical Song From Lucky Man Is Out Now. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X