twitter
    For Quick Alerts
    ALLOW NOTIFICATIONS  
    For Daily Alerts

    ಹುಟ್ಟುಹಬ್ಬ ವಿಶೇಷ : ಮನೋ ಮೂರ್ತಿ ಮನಮಿಡಿಯುವ ಹಾಡುಗಳು

    By Harshitha
    |

    ಸಂಗೀತ ನಿರ್ದೇಶಕ ಮನೋ ಮೂರ್ತಿ ಅಂದ ತಕ್ಷಣ ಕನ್ನಡ ಸಿನಿ ಪ್ರೇಮಿಗಳಿಗೆ ತಕ್ಷಣ ನೆನಪಾಗುವ ಸಿನಿಮಾ 'ಮುಂಗಾರು ಮಳೆ'. ಅದಾಗಲೇ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು 11 ವರ್ಷಗಳಾಗಿದ್ದರೂ, ಮನೋ ಮೂರ್ತಿ ಕರ್ನಾಟಕದ ಮೂಲೆಮೂಲೆಯಲ್ಲೂ ಮನೆ ಮಾತಾಗಿದ್ದು 'ಮುಂಗಾರು ಮಳೆ' ಚಿತ್ರದಿಂದ. ಇಂತಿಪ್ಪ ಮನೋ ಮೂರ್ತಿಗಿಂದು ಹುಟ್ಟುಹಬ್ಬದ ಸಂಭ್ರಮ.

    ಕರ್ನಾಟಕ ಮತ್ತು ಅಮೇರಿಕಾದಲ್ಲಿ ಬರೋಬ್ಬರಿ ಒಂದು ವರ್ಷ ಓಡಿದ 'ಅಮೇರಿಕಾ ಅಮೇರಿಕಾ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮನೋಮೂರ್ತಿ, 'ನೂರು ಜನ್ಮಕು...', 'ಬಾನಲ್ಲಿ ಓಡೋ ಮೇಘ...' ಸೇರಿದಂತೆ ಅನೇಕ ಸೂಪರ್ ಹಿಟ್ ಹಾಡುಗಳ ಹಿಂದಿನ ಸೂತ್ರಧಾರ ಅನ್ನುವುದು ಬೆರಳೆಣಿಕೆಯ ಮಂದಿಗೆ ಮಾತ್ರ ಗೊತ್ತಿರುವ ಸತ್ಯ.

    ಬೆಂಗಳೂರಲ್ಲಿ ಹುಟ್ಟಿ-ಬೆಳೆದು, ಕ್ಯಾಲಿಫೋರ್ನಿಯಾದಲ್ಲಿ ಸಂಗೀತ ಸಂಜೆಗಳನ್ನ ಆಯೋಜಿಸುತ್ತಿದ್ದ ಮನೋ ಮೂರ್ತಿ ಕನ್ನಡ ಚಿತ್ರರಂಗಕ್ಕೆ ನೀಡಿರುವ ಮನಮಿಡಿಯುವ ಹಾಡುಗಳು ಒಂದೆರಡಲ್ಲ. ಮನೋ ಮೂರ್ತಿ ಜನ್ಮದಿನದ ಪ್ರಯುಕ್ತ, ಅವರ ಗಾನ ಸುಧೆಯನ್ನು ಕೇಳುತ್ತಾ, ಅವರ ಜೀವನದ ಕೆಲ ಇಂಟ್ರೆಸ್ಟಿಂಗ್ ಸಂಗತಿಗಳನ್ನ ತಿಳಿದುಕೊಳ್ಳುವುದಕ್ಕೆ ಈ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.

    ಅಪ್ಪಟ ಬೆಂಗಳೂರಿನ ಪ್ರತಿಭೆ ಮನೋ ಮೂರ್ತಿ

    ಕರ್ನಾಟಕ ಮತ್ತು ಅಮೇರಿಕಾದಲ್ಲಿ ಇಂದು ಪ್ರಸಿದ್ಧಿ ಪಡೆದಿರುವ ಮನೋ ಮೂರ್ತಿ ಹುಟ್ಟಿ ಬೆಳೆದದ್ದೆಲ್ಲಾ ಬೆಂಗಳೂರಿನ ಮಲ್ಲೇಶ್ವರಂ ಮತ್ತು ಬಸವನಗುಡಿಯಲ್ಲಿ. ಕ್ಲೂನಿ ಕಾನ್ವೆಂಟ್ ಮತ್ತು ಸಂತ ಜೋಸೆಫರ ಹೈ ಸ್ಕೂಲ್ ನಲ್ಲಿ ಶಾಲೆ ಮುಗಿಸಿರುವ ಮನೋ ಮೂರ್ತಿ, ನ್ಯಾಷಿನಲ್ ಕಾಲೇಜ್ ನ ಪಿಯುಸಿ ವಿದ್ಯಾರ್ಥಿ.

    ಕ್ಯಾಲಿಫೋರ್ನಿಯಾದಲ್ಲಿ ಪದವಿ

    ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ Electrical ಮತ್ತು Electronics ವಿಷಯದಲ್ಲಿ ಪದವಿ ಪಡೆದಿರುವ ಮನೋ ಮೂರ್ತಿ, ಸ್ಟಾನ್ಫೋರ್ಡ್ ವಿಶ್ವವಿದ್ಯಾನಿಲಯದಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದಿದ್ದಾರೆ. ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇವೆ ಆರಂಭಿಸಿದ ಮನೋ ಮೂರ್ತಿ ಕೆಲವೇ ವರ್ಷಗಳ ಅಂತರದಲ್ಲಿ Alantec, Assured AccessTechnology ಮತ್ತು Allegro Systems ಅನ್ನುವ ಮೂರು ಕಂಪನಿಗಳನ್ನ ಸ್ಥಾಪಿಸಿದರು. ಇದೀಗ Attivo Networks ಅನ್ನುವ ಕಂಪನಿಗೆ ಸಹ ಸಂಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮನೋ ಮೂರ್ತಿ.

    ಚಿಕ್ಕವಯಸ್ಸಿಂದಲೇ ಸಂಗೀತ ಪ್ರೇಮಿ

    ರೇಡಿಯೋ ಮತ್ತು ಸಂಗೀತ ಕಾರ್ಯಕ್ರಮಗಳನ್ನ ಮಿಸ್ ಮಾಡದೇ ಕೇಳುತ್ತಿದ್ದ ಮನೋ ಮೂರ್ತಿ ಚಿಕ್ಕವಯಸ್ಸಿನಿಂದಲೂ ಸಂಗೀತ ಪ್ರೇಮಿ. ಅಪ್ಪ-ಅಮ್ಮನಿಂದ 'ಡ್ರಮ್ ಸೆಟ್'ನ ಉಡುಗೊರೆಯಾಗಿ ಪಡೆದ ಮನೋ ಮೂರ್ತಿ, Sonics ಅಂತ ತಂಡ ಕಟ್ಟಿ ಕಾಲೇಜ್ ನಲ್ಲಿ ಸಣ್ಣ-ಪುಟ್ಟ ಕಾರ್ಯಕ್ರಮಗಳನ್ನ ನೀಡುತ್ತಿದ್ದರು. ಕ್ಯಾಲಿಫೋರ್ನಿಯಾಗೆ ತೆರಳಿದ ಮೇಲೆ Jerry Gerber ರಿಂದ ಸಂಗೀತ ಪಾಠ ಕಲಿತು ಅವರದ್ದೇ ಮ್ಯೂಸಿಕ್ ಅಲ್ಬಂ ಕೂಡ ಹೊರತಂದರು. ಇದಲ್ಲದೇ, Berklee College Of Music ನಿಂದ ಮನೋ ಮೂರ್ತಿ ಸಂಗೀತದಲ್ಲಿ ಪದವಿ ಕೂಡ ಪಡೆದಿದ್ದಾರೆ.

    'ಅಮೇರಿಕಾ ಅಮೇರಿಕಾ ಯಾನ'

    ಅಮೇರಿಕಾದಲ್ಲಿ ನಾಗತ್ತಿಹಳ್ಳಿ ಚಂದ್ರಶೇಖರ್ ರನ್ನ ಭೇಟಿ ಮಾಡಿದ ಮನೋ ಮೂರ್ತಿ, ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು 'ಅಮೇರಿಕಾ ಅಮೇರಿಕಾ' ಚಿತ್ರದಿಂದ. ವಿಪರ್ಯಾಸ ಅಂದ್ರೆ, 'ಅಮೇರಿಕಾ ಅಮೇರಿಕಾ' ಹಾಡುಗಳು ಹಿಟ್ ಆದ್ವೇ ಹೊರತು, ಮನೋ ಮೂರ್ತಿ ಪರಿಚಯ ಯಾರಿಗೂ ಆಗಲಿಲ್ಲ. ಆದರೆ, ಇಂದಿಗೂ 'ಅಮೇರಿಕಾ ಅಮೇರಿಕಾ' ಚಿತ್ರದ ಹಾಡುಗಳು ಜನರ ಮನಸ್ಸಲ್ಲಿ ಅಚ್ಚಳಿಯದೇ ಉಳಿದಿದೆ ಅಂದ್ರೆ ಅದಕ್ಕೆ ಕಾರಣ ಮನೋ ಮೂರ್ತಿ.

    ಆರು ವರ್ಷಗಳ ನಂತ್ರ ಪುನರಾಗಮನ

    'ಅಮೇರಿಕಾ ಅಮೇರಿಕಾ' ಚಿತ್ರದ ನಂತ್ರ ಬರೋಬ್ಬರಿ ಆರು ವರ್ಷಗಳ ಕಾಲ ಗ್ಯಾಪ್ ತೆಗೆದುಕೊಂಡು ಮನೋ ಮೂರ್ತಿ ಮತ್ತೆ ಸಂಗೀತ ನೀಡಿದ್ದು 'ನನ್ನ ಪ್ರೀತಿಯ ಹುಡುಗಿ' ಚಿತ್ರಕ್ಕಾಗಿ. ಅದ್ರಲ್ಲಿನ 'ಕಾರ್ ಕಾರ್ ಎಲ್ನೋಡಿ ಕಾರ್....' ಅಂದಿನ ಸೂಪರ್ ಹಿಟ್ ಸಾಂಗ್ ಆಗಿ ಯುವಕರ ಸುಪ್ರಭಾತವಾಗಿತ್ತು.

    ಅಮೃತಧಾರೆ - ಮುಂಗಾರು ಮಳೆ ಸುರಿಸಿದ್ದು ಇವರೇ...

    'ಅಮೃತಧಾರೆ' ಮತ್ತು ಬ್ಲಾಕ್ ಬಸ್ಟರ್ 'ಮುಂಗಾರು ಮಳೆ' ಚಿತ್ರದಲ್ಲಿ ಮನಮಿಡಿಯುವ ಹಾಡುಗಳನ್ನ ಸಂಯೋಜಿಸಿದ ಮನೋ ಮೂರ್ತಿ ಸ್ಯಾಂಡಲ್ ವುಡ್ ನಲ್ಲಿ ಬಹು ಬೇಡಿಕೆ ಗಿಟ್ಟಿಸಿಕೊಂಡರು. 'ಮುಂಗಾರು ಮಳೆ' ಆದ್ಮೇಲೆ ಅನೇಕ ಆಫರ್ ಗಳು ಬಂದರೂ, ಕ್ಯಾಲಿಫೋರ್ನಿಯಾದಲ್ಲಿ ಬಿಜಿಯಾಗಿದ್ದ ಮೂರ್ತಿ ತಮಗಿಷ್ಟವಾದ ಚಿತ್ರಕಥೆಗಳಿಗೆ ಮಾತ್ರ ಸಂಗೀತ ನೀಡಿದ್ದಾರೆ.

    'ಅಭಿನೇತ್ರಿ'ಗೆ ಸಂಗೀತ ನಿರ್ದೇಶಕ

    'ಮಿಲನ', 'ಚೆಲುವಿನ ಚಿತ್ತಾರ', 'ಈ ಬಂಧನ', 'ಮೊಗ್ಗಿನ ಮನಸ್ಸು', 'ಮನಸಾರೆ', ಸೇರಿದಂತೆ ಸೂಪರ್ ಹಿಟ್ ಚಿತ್ರಗಳ ಹಿಂದಿನ ರೂವಾರಿಯಾಗಿರುವ ಮನೋ ಮೂರ್ತಿ ಸದ್ಯ ಪೂಜಾ ಗಾಂಧಿ ನಿರ್ಮಿಸಿ ನಟಿಸಿರುವ 'ಅಭಿನೇತ್ರಿ' ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಬೆರಳೆಣಿಕೆ ಸಿನಿಮಾಗಳನ್ನ ಮಾಡಿದರೂ, ಕ್ಲಾಲಿಟಿ ಹಾಡುಗಳನ್ನ ನೀಡುವ ಮನೋ ಮೂರ್ತಿಗೆ ಮತ್ತೊಮ್ಮೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

    English summary
    Hit Music Director Mano Murthy of Mungaru Male fame celebrates his birthday today (Jan 13). On this Occasion, here is a report on his musical journey.
    Tuesday, January 13, 2015, 18:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X