ಧ್ರುವಾ ಸರ್ಜಾಗೆ ಪ್ರಪಂಚದಲ್ಲಿ ಬೇರೆ ಹುಡ್ಗೀರು ಇರುವುದನ್ನೇ ಮರೆಸಿಬಿಟ್ಟಿದ್ದಾಳೆ ಈ ಮುದ್ದು ಹುಡ್ಗಿ

ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಹಾವಳಿ ಜೋರಾಗಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಯೂಟ್ಯೂಬ್ ಯಾವುದೇ ಪೇಜ್ ತೆಗೆದರೂ ಲಕ್ಷ ಲಕ್ಷ ರೀಲ್ಸ್ ಕಣ್ಣಿಗೆ ರಾಚುತ್ತವೆ. ಕೆಲವೇ ಕ್ಷಣಗಳಲ್ಲಿ ಸಖತ್ ಮಜಾ ಕೊಡುವ ಸಾಕಷ್ಟು ರೀಲ್ಸ್ ಸಿಗುತ್ತವೆ. ನೋಡ್ತಾ ನೋಡ್ತಾ ಕೆಲವರಿಗೆ ಟೈಂ ಹೋಗೋದೇ ಗೊತ್ತಾಗಲ್ಲ.

ಚಿಕ್ಕ ಮಕ್ಕಳಿಂದ ಮುದುಕರವರೆಗೆ ರೀಲ್ಸ್ ಮಾಯೆಗೆ ಮರುಳಾಗಿರುವವರಿಗೆ ಲೆಕ್ಕವಿಲ್ಲ. ಸಿನಿಮಾ, ಕಿರುತೆರೆ ನಟ-ನಟಿಯರು ಕೂಡ ರೀಲ್ಸ್ ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ನಟಿಯರೇ ಹೆಚ್ಚು ರೀಲ್ಸ್ ಮಾಡಿ ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ನಟ ಧ್ರುವ ಸರ್ಜಾ ಮಾಡಿರುವ ಸ್ಪೆಷಲ್ ಇನ್‌ಸ್ಟಾ ರೀಲ್ಸ್ ಸಖತ್ ವೈರಲ್ ಆಗಿದೆ.

Martin Actor Dhruva sarjas cute reels with his daughter Rudrakshi goes viral

ಮಗಳು ರುದ್ರಾಕ್ಷಿ ಜೊತೆ ಧ್ರುವ ಸರ್ಜಾ ರೀಲ್ಸ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕ್ಯೂಟ್ ವೀಡಿಯೋಗೆ ಸಖತ್ ಲೈಕ್ಸ್, ಕಾಮೆಂಟ್ಸ್ ಸಿಕ್ಕಿದೆ. ದಿಯಾ ಚಿತ್ರದಲ್ಲಿ ನಾಯಕ ರೋಹಿತ್‌ ನಾಯಕಿ ದಿಯಾಗೆ ಹೇಳುವ ಡೈಲಾಗ್‌ ಝಲಕ್‌ ಇದು. ಮಗಳನ್ನು ನೋಡುತ್ತಾ ಧ್ರುವ ಸರ್ಜಾ ಡೈಲಾಗ್‌ಗೆ ಲಿಪ್‌ಸಿಂಕ್ ಮಾಡಿದ್ದು ಸೊಗಸಾಗಿದೆ. ಧ್ರುವ ಸಿನಿಮಾ ಸೂಪರ್ ಹಿಟ್ ಡೈಲಾಗ್‌ಗಳ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ಸ್ವತಃ ಧ್ರುವ ಮಾಡಿರುವ ರೀಲ್ಸ್ ಸದ್ದು ಮಾಡುತ್ತಿರುವುದು ವಿಶೇಷ.

ಇತ್ತೀಚೆಗೆ ಅಯೋಧ್ಯೆ ರಾಮಮಂದಿರ ಲೋಕಾರ್ಪಣೆ ದಿನವೇ ಧ್ರುವ ಸರ್ಜಾ ತಮ್ಮ ಮಕ್ಕಳ ನಾಮಕರಣ ಮಾಡಿದ್ದರು. ಮಗಳಿಗೆ ರುದ್ರಾಕ್ಷಿ ಡಿ ಸರ್ಜಾ ಎಂದು ಮಗನಿಗೆ ಹಯಗ್ರೀವ ಡಿ ಸರ್ಜಾ ಎಂದು ಹೆಸರಿಟ್ಟಿದ್ದರು. ದೇವರಿಗೆ ಸಂಬಂಧಿಸಿದ ಹೆಸರುಗಳನ್ನೇ ಆಕ್ಷನ್ ಪ್ರಿನ್ಸ್ ಮಕ್ಕಳಿಗೆ ಆಯ್ಕೆ ಮಾಡಿಕೊಂಡಿದ್ದರು. ಶಿವನಿಗೆ ಪ್ರಿಯವಾದದ್ದರು ರುದ್ರಾಕ್ಷಿ. ಇನ್ನು ವಿಷ್ಣುವಿನ ಒಂದು ಅವತಾರದ ಹೆಸರು ಹಯಗ್ರೀವ.

ಇನ್ನು ಧ್ರುವ ಸರ್ಜಾ ಸಿನಿಮಾಗಳ ವಿಚಾರಕ್ಕೆ ಬಂದರೆ ಸದ್ಯ ಎರಡು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ಎ. ಪಿ ಅರ್ಜುನ್ ನಿರ್ದೇಶನದ 'ಮಾರ್ಟಿನ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗುತ್ತಿದೆ. ಇನ್ನು ಜೋಗಿ ಪ್ರೇಮ್ ನಿರ್ದೇಶನದಲ್ಲಿ 'KD' ಚಿತ್ರೀಕರಣ ನಡೀತಿದೆ. 'ಮಾರ್ಟಿನ್' ಚಿತ್ರದ ಅಪ್‌ಡೇಟ್ ಕೇಳಿ ಕೇಳಿ ಅಭಿಮಾನಿಗಳು ಸುಸ್ತಾಗಿದ್ದಾರೆ.

ಟೀಸರ್‌ನಿಂದಲೇ 'ಮಾರ್ಟಿನ್' ಸಿನಿಮಾ ಬಹಳ ಕುತೂಹಲ ಮೂಡಿಸಿತ್ತು. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು ಕೊನೆ ಶೆಡ್ಯೂಲ್ ಶುರುವಾಗುತ್ತಿದೆ. ಎರಡು ಹಾಡುಗಳನ್ನು ಸೆರೆ ಹಿಡಿಯುವುದು ಬಾಕಿಯಿದ್ದು ಇದೇ ಶನಿವಾರದಿಂದ ಚಿತ್ರೀಕರಣ ನಡೆಸಲು ಸಿದ್ಧತೆ ನಡೆಸಿದೆ. ಮುರಳಿ ಮಾಸ್ಟರ್ ಹಾಗೂ ಇಮ್ರಾನ್ ಸರ್ದಾರಿಯಾ ಹಾಡುಗಳಿಗೆ ಕೊರಿಯೋಗ್ರಫಿ ಮಾಡಲಿದ್ದಾರೆ.

ಈ ತಿಂಗಳಲ್ಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ವರ್ಕ್‌ ಆರಂಭಿಸಲು ತೀರ್ಮಾನಿಸಲಾಗಿದೆ. ಎಲ್ಲಾ ಫೈನಲ್ ಆಗುತ್ತಿದ್ದಂತೆ ರಿಲೀಸ್ ಡೇಟ್ ಘೋಷಣೆ ಆಗಲಿದೆ. ಕನ್ನಡ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಗಳಿಗೆ ಸಿನಿಮಾ ಡಬ್ ಆಗುತ್ತಿದೆ. ಈಗಾಗಲೇ ಚಿತ್ರದ ರೈಟ್ಸ್‌ ಭರ್ಜರಿ ಬೆಲೆಗೆ ಮಾರಾಟವಾಗಿದೆ. ಬರೀ ಆಡಿಯೋ ರೈಟ್ಸ್ 9 ಕೋಟಿಗೆ ಬಿಕರಿಯಾಗಿ ದಾಖಲೆ ಬರೆದಿತ್ತು.

'ಮಾರ್ಟಿನ್' ಚಿತ್ರದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ಮಿಂಚಿದ್ದಾರೆ. ಅನ್ವೇಶಿ ಜೈನ್, ಸುಕೃತಾ ವಾಗ್ಲೆ, ಅಚ್ಯುತ್‌ ಕುಮಾರ್ ತಾರಾಗಣದಲ್ಲಿದ್ದಾರೆ. ಅರ್ಜುನ್ ಸರ್ಜಾ ಚಿತ್ರದಲ್ಲಿ ಕಥೆ ಬರೆದಿದ್ದಾರೆ. ಮಣಿಶರ್ಮಾ ಸಾಂಗ್ಸ್‌ಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದರೆ ರವಿಬಸ್ರೂರು ಬಿಜಿಎಂ ಇದೆ.

'ಮಾರ್ಟಿನ್' ಹಾಗೂ 'KD' ಬಳಿಕ ನರ್ತನ್ ನಿರ್ದೇಶನದಲ್ಲಿ ಧ್ರುವ ಸರ್ಜಾ ನಟಿಸುತ್ತಾರೆ ಎನ್ನಲಾಗ್ತಿದೆ. ಆ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡುತ್ತದೆ ಎನ್ನುವ ಊಹಾಪೋಹ ಕೂಡ ಇದೆ.

More from Filmibeat

English summary
Dhruva sarja shares a cute reels on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X