ಮೇಘನಾ ರಾಜ್ ಅವರ ಬಿಸಿ ಬಿಸಿ ಹಾಡು ಬಂದೇಬಿಟ್ಟಿದೆ
ನಟಿ ಮೇಘನಾ ರಾಜ್ ಒಂದು ಹಾಟ್ ಸಾಂಗ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ 'ಫಿಲ್ಮಿ ಬೀಟ್ ಕನ್ನಡ' ದಲ್ಲಿ ಓದಿದ್ರಿ. ಅದೇ ರೀತಿ ಇದೀಗ 'ದಯವಿಟ್ಟು ಗಮನಿಸಿ' ಚಿತ್ರದ ಆ ಹಾಡು ರಿಲೀಸ್ ಆಗಿದೆ.
ಅನೂಪ್ ಸೀಳಿನ್ ಸಂಗೀತದಲ್ಲಿ ಬಂದ ಈ ಹಾಡು ಕೇಳುಗರಿಗೆ ಹೊಸ ಫೀಲ್ ನೀಡುತ್ತಿದೆ. 'ಅಸಾದುಲ್ಲಾ..' ಎಂಬ ಈ ಡಿಫರೆಂಟ್ ಹಾಡನ್ನು ಅರಸು ಅಂತಾರೆ ಬರೆದಿದ್ದಾರೆ. ಮೇಘನಾ ರಾಜ್ ಲುಕ್ ಸಖತ್ ಹಾಟ್ ಆಗಿ ಇದ್ದು, ಬಾರ್ ನಲ್ಲಿ ಹಾಡು ಹೇಳುವ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಈ ರೀತಿಯ ಒಂದು ಹಾಡಿನಲ್ಲಿ ಮೇಘನಾ ರಾಜ್ ಕಾಣಿಸಿಕೊಂಡಿದ್ದಾರೆ.

ಅಂದಹಾಗೆ, ಗಾಯಕಿ ಅಪೂರ್ವ ಶ್ರೀಧರ್ ಹಾಡನ್ನು ಹಾಡಿದ್ದು, ರೋಹಿತ್ ಪದಕಿ ನಿರ್ದೇಶನ ಚಿತ್ರಕ್ಕಿದೆ. 'ದಯವಿಟ್ಟು ಗಮನಿಸಿ' ಸಿನಿಮಾದ ಎರಡು ಹಾಡು ಈಗಾಗಲೇ ದೊಡ್ಡ ಮಟ್ಟದಲ್ಲಿ ರೆಸ್ಪಾನ್ಸ್ ಪಡೆದುಕೊಂಡಿದೆ. ಈಗ ಈ ವಿಭಿನ್ನ ಹಾಡು ಸಹ ಕೇಳುಗರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದಿದೆ. ಮೇಘನಾ ರಾಜ್ ರವರ ಈ ಸ್ಪೆಷಲ್ ಸಾಂಗ್ ನೋಡುವುದಕ್ಕೆ ಈ ಲಿಂಕ್ ಕ್ಲಿಂಕ್ ಮಾಡಿ.
More from Filmibeat
English summary
Kannada Actress Meghana Raj's 'Dayavittu gamanisi' movie hot is song out. Watch song here.


Click it and Unblock the Notifications











