ಯೂ ಟ್ಯೂಬ್ ನಲ್ಲಿ ಟ್ರೆಂಡ್ ಆಯ್ತು ಮೆಹಬೂಬ್ ಸಾಬ್ ಹಾಡು
Recommended Video

'ರಾಂಬೋ' ಸಿನಿಮಾ ಪ್ರತಿ ಹಾಡಿಗಳು ಯೂ ಟ್ಯೂಬ್ ನಲ್ಲಿ ದೊಡ್ಡ ಹಿಟ್ ಆಗಿವೆ. ಈಗ ಸಿನಿಮಾದ ನಾಲ್ಕನೇ ಹಾಡು ಸಹ ರಿಲೀಸ್ ಆಗಿದೆ. ಈ ಹಾಡು ಸಹ ಯೂಟ್ಯೂಬ್ ನಲ್ಲಿ ಇದೀಗ 16ನೇ ಟ್ರೆಂಡಿಂಗ್ ವಿಡಿಯೋ ಆಗಿದೆ.
ಜೀ ಕನ್ನಡ ವಾಹಿನಿಯ 'ಸರಿಗಮಪ ಸೀಸನ್ 13' ಕಾರ್ಯಕ್ರಮದ ಮುಗಿದ ಬಳಿಕ ಅಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ಸಿಕ್ಕಿದೆ. ಈಗ ಕಾರ್ಯಕ್ರಮದ ರನ್ನರ್ ಅಪ್ ಆಗಿದ್ದ ಮೆಹಬೂಬ್ ಸಾಬ್ ಅವರು ಕೂಡ ಕೆಲ ಸಿನಿಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ವಿಶೇಷ ಅಂದರೆ 'ಸರಿಗಮಪ' ಕಾರ್ಯಕ್ರಮದ ತೀರ್ಪುಗಾರರ ಪೈಕಿ ಒಬ್ಬರಾಗಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಮ್ಯೂಸಿಕ್ ನಲ್ಲಿ ಮೆಹಬೂಬ್ ಸಾಬ್ ಈಗ ಹಾಡಿದ್ದಾರೆ.

'ರಾಂಬೋ 2' ಸಿನಿಮಾದ 'ಬಿಟ್ ಹೊಗ್ ಬೇಡ..' ಎಂಬ ಫೀಲಿಂಗ್ ಹಾಡನ್ನು ಮೆಹಬೂಬ್ ಸಾಬ್ ಹಾಡಿದ್ದಾರೆ. ಈ ಹಾಡಿನ ಸಾಹಿತ್ಯವನ್ನು ಸಂತೋಷ್ ನಾಯಕ್ ಮತ್ತು ಗೌಸ್ ಪೀರ್ ಬರೆದಿದ್ದಾರೆ. ಅಂದಹಾಗೆ, 'ರಾಂಬೋ 2' ಸಿನಿಮಾ ಶರಣ್ ಮತ್ತು ಆಶಿಕಾ ರಂಗನಾಥ್ ಅಭಿನಯದ ಹೊಸ ಸಿನಿಮಾವಾಗಿದೆ. ಈ ಚಿತ್ರದ ಹೊರತಾಗಿ ಮೆಹಬೂಬ್ ಸಾಬ್ 'ಕತ್ತಲ ಕೋಣೆ' ಮತ್ತು 'ಸನ್ ಆಫ್ ವಿಷ್ಣುವರ್ಧನ' ಎಂಬ ಸಿನಿಮಾಗಳಲ್ಲಿಯೂ ಹಾಡು ಹಾಡಿದ್ದಾರೆ.


Click it and Unblock the Notifications











