ಫೆಬ್ರವರಿ 1ಕ್ಕೆ ಅನುಕ್ತ: ಈಗ 'ಮಿಂಚುಳು ಸಾಗಿದೆ' ಹಾಡು ನೋಡಿ

ಟ್ರೈಲರ್ ಮೂಲಕವೇ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ 'ಅನುಕ್ತ' ಫೆಬ್ರವರಿ 1 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದಿಗೆ ಪ್ರೇಕ್ಷಕರೆದುರು ಬರ್ತಿರುವ ಅನುಕ್ತ ರಿಲೀಸ್ ಗೂ ಮುಂಚೆ ರೋಚಕತೆ ಹುಟ್ಟಿಸಿದೆ.

ಇದೀಗ, ಅನುಕ್ತ ಚಿತ್ರದ ಬ್ಯೂಟಿಫುಲ್ ಹಾಡಿನ ವಿಡಿಯೋ ವರ್ಷನ್ ರಿಲೀಸ್ ಆಗಿದ್ದು, ಜನರನ್ನ ಸೆಳೆಯುತ್ತಿದೆ. 'ಮಿಂಚುಳು ಸಾಗಿದೆ' ಎಂಬ ಸಿಚುವೇಶನಲ್ ಹಾಡು ಅನುಕ್ತ ಕಥೆಯ ಬಗ್ಗೆ ಕುತೂಹಲ ಮೂಡಿಸುತ್ತಿದೆ.

ಕೀರ್ತನಾ ಭಂಡಾರಿ ಅವರು ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಮಣಿಕ್ಕ ವಿನಯಗಂ ಧ್ವನಿಗೂಡಿಸಿದ್ದಾರೆ. ನೋಬಿಲ್ ಪೌಲ್ ಸಂಗೀತದಲ್ಲಿ ಬಂದಿರುವ ಈ ಹಾಡು ಕೇಳಲು ಕೂಡ ಅಷ್ಟೇ ಸುಮಧುರವಾಗಿದೆ. ಅಂದ್ಹಾಗೆ, ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಒಂದಕ್ಕಿಂತ ಇನ್ನೊಂದು ಇಷ್ಟವಾಗುವಂತಿದೆ.

Minchula Saagide video song released from Anukta

ಇನ್ನುಳಿದಂತೆ ಅನು ಪ್ರಭಾಕರ್, ಸಂಪತ್ ರಾಜ್, ಸಂಗೀತಾ ಭಟ್, ಕಾರ್ತಿಕ್ ಅತ್ತಾವರ್, ಕೆ ಎಸ್ ಶ್ರೀಧರ್ ಸೇರಿದಂತೆ ಹಲವು ಕಲಾವಿದರು ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಅಶ್ವಥ್ ಸ್ಯಾಮ್ಯುಲ್ ಈ ಚಿತ್ರಕ್ಕೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ. ಮನೋಹರ್ ಜೋಶಿ ಛಾಯಾಗ್ರಹಣ, ಎನ್ ಎಂ ವಿಶ್ವ ಅವರ ಸಂಕಲನ, ನವೀನ್ ಶರ್ಮಾ ಮತ್ತು ಕಿರಣ್ ಶೆಟ್ಟಿ ಸಂಭಾಷಣೆ ಬರೆದಿದ್ದು ಹರೀಶ್ ಬಂಗೇರಾ ನಿರ್ಮಾಣ ಮಾಡಿದ್ದಾರೆ.

ಟ್ರೈಲರ್ ಹಾಗೂ ಹಾಡುಗಳ ಮೂಲಕ ಕುತೂಹಲ ಮೂಡಿಸಿರುವ ಅನುಕ್ತ ಚಿತ್ರವನ್ನ ಫೆಬ್ರವರಿ 1 ರಂದು ತೆರೆಮೇಲೆ ನೋಡಬಹುದು.

More from Filmibeat

English summary
Presenting The Official Video of 'Minchula Saagide Song' from the Kannada Movie 'Anukta' rendered by Manikka Vinayagam, Music by Nobin Paul & Lyrics by Keerthan Bhandary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X