Don't Miss!
- Sports
IND vs NZ 3rd T20: ಕಿವೀಸ್ ವಿರುದ್ಧ ಶತಕ ಬಾರಿಸಿ ವಿರಾಟ್ ಕೊಹ್ಲಿ ದಾಖಲೆ ಮುರಿದ ಶುಭ್ಮನ್ ಗಿಲ್
- News
ಗ್ರಾಮಗಳು ವೃದ್ಧಾಶ್ರಮಗಳಾಗಿವೆ, ಉಡುಪಿಯಲ್ಲಿ ಐಟಿ ಪಾರ್ಕ್ ನಿರ್ಮಿಸಿ: ಕೇಂದ್ರ ಸರ್ಕಾರಕ್ಕೆ ಪೇಜಾವರ ಶ್ರೀ ಒತ್ತಾಯ
- Lifestyle
ಗರುಡ ಪುರಾಣ ಪ್ರಕಾರ ಈ 9 ಬಗೆಯ ವ್ಯಕ್ತಿಗಳ ಮನೆಯಲ್ಲಿ ಆಹಾರ ತಿನ್ನಲೇಬಾರದು
- Automobiles
ಹೊಸ ಇನೋವಾ ಹೈಕ್ರಾಸ್ ಬಲದೊಂದಿಗೆ ಮಾರಾಟದಲ್ಲಿ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸಿದ ಟೊಯೊಟಾ
- Technology
ಚೀನಾದಲ್ಲಿ ಸೌಂಡ್ ಮಾಡಿದ್ದ ಈ ಡಿವೈಸ್ ಇದೀಗ ಜಾಗತಿಕ ಮಾರುಕಟ್ಟೆಗೆ ಎಂಟ್ರಿ!
- Finance
Union Budget 2023: ಹೊಸ ತೆರಿಗೆ ಪದ್ಧತಿಯಡಿಯಲ್ಲಿ ತೆರಿಗೆ ಲೆಕ್ಕಾಚಾರ ಹೇಗೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೆಜಿಎಫ್ ಹಾಡು ಬಳಕೆ ವಿವಾದ: ಕಾಂಗ್ರೆಸ್ಗೆ ಮತ್ತೆ ನೊಟೀಸ್
ಹೊಂಬಾಳೆ ನಿರ್ಮಾಣ ಸಂಸ್ಥೆಯ 'ಕಾಂತಾರ' ಸಿನಿಮಾದ 'ವರಾಹ ರೂಪಂ' ಹಾಡಿನ ವಿರುದ್ಧ ಕೃತಿಚೌರ್ಯ ಪ್ರಕರಣ ದಾಖಲಾಗಿ ವಿಚಾರಣೆ ನಡೆಯುತ್ತಿದೆ. ಇನ್ನೊಂದೆಡೆ, 'ಕೆಜಿಎಫ್' ಸಿನಿಮಾದ ಹಾಡನ್ನು ಅನಧಿಕೃತವಾಗಿ ಬಳಸಿಕೊಳ್ಳಲಾಗಿದೆ ಎಂದು ಹೊಂಬಾಳೆಯ 'ಸ್ನೇಹಿತ' ಸಂಸ್ಥೆಯೊಂದು ಕಾಂಗ್ರೆಸ್ ಪಕ್ಷದ ವಿರುದ್ಧ ಕೃತಿಚೌರ್ಯದ ಪ್ರಕರಣ ದಾಖಲಿಸಿದೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ 'ಭಾರತ್ ಜೋಡೊ' ಯಾತ್ರೆಯನ್ನು ಕಾಂಗ್ರೆಸ್ ಕೈಗೊಂಡಿದ್ದು, ರಾಹುಲ್ ಗಾಂಧಿ ಅವರ ವಿಡಿಯೋಕ್ಕೆ ಹಿನ್ನೆಲೆಯಾಗಿ ಕೆಜಿಎಫ್ 2 ಸಿನಿಮಾದ 'ಧೀರ ಧೀರ' ಹಾಡನ್ನು ಬಳಸಲಾಗಿತ್ತು. ಇದನ್ನು ವಿರೋಧಿಸಿ, ಹಾಡಿನ ಹಿಂದಿ ಹಕ್ಕುಗಳನ್ನು ಹೊಂದಿರುವ ಕೆಟಿಆರ್ ಸಂಸ್ಥೆಯು ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಹಾಡನ್ನು ತೆಗೆಯುವಂತೆ ಸೂಚಿಸುವಂತೆ ಕೇಳಿತ್ತು.
ಅದರಂತೆ ನ್ಯಾಯಾಲಯವು ಸಹ ಕಾಂಗ್ರೆಸ್ ಪಕ್ಷ ಹಾಗೂ ಅದರ ಸಾಮಾಜಿಕ ಜಾಲತಾಣ ವಿಭಾಗಕ್ಕೆ ನೊಟೀಸ್ ನೀಡಿ, ಹಾಡನ್ನು ತೆಗೆಯುವಂತೆ ಸೂಚಿಸಿತ್ತು. ಆದರೆ ಹಾಡನ್ನು ಪೂರ್ಣವಾಗಿ ತೆಗೆಯಲಾಗಿರಲಿಲ್ಲ ಇದಕ್ಕೆ ಕೆಟಿಆರ್ ಸಂಸ್ಥೆಯು ಮತ್ತೆ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದೆ.
ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಹಾಗೂ ಇತರೆ ಮುಖಂಡರಿಗೆ, ಪಕ್ಷಕ್ಕೆ, ಐಟಿ ವಿಭಾಗಕ್ಕೆ ಮತ್ತೆ ನೊಟೀಸ್ ಜಾರಿ ಮಾಡಿದೆ. 'ಕಾಂಗ್ರೆಸ್ ಪಕ್ಷವು ನ್ಯಾಯಾಲಯದ ಆದೇಶ ಪಾಲಿಸಿಲ್ಲ. 'ಕೆಜಿಎಫ್ 2' ಸಿನಿಮಾದ ಮುದ್ರಿತ ಸಂಗೀತ ತೆಗೆದಿಲ್ಲ ಬದಲಿಗೆ ಇನ್ನೂ ಹೆಚ್ಚುವರಿಯಾಗಿ ಬಳಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಹಾಗೆ ನೋಡಿದರೆ ಈ ಹಾಡನ್ನು ಅಸಂಖ್ಯ ಮಂದಿ ರೀಲ್ಸ್ಗಳಿಗೆ, ವಿಡಿಯೋಗಳಿಗೆ ಹಿನ್ನೆಲೆಯಾಗಿ ಬಳಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತ್ರವೇ ಕೇಸು ದಾಖಲಿಸಲಾಗಿದೆ. ಕೇಸು ದಾಖಲಿಸಿರುವ ಎಂಆರ್ಟಿ ಸಂಸ್ಥೆಯು ಬೆಂಗಳೂರಿನ ಮೂಲದ್ದೇ ಆಗಿದೆ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳ ಹಲವು ಆಡಿಯೋಗಳ ಹಕ್ಕುಗಳನ್ನು ಹೊಂದಿದೆ. 'ಕೆಜಿಎಫ್' ಸಿನಿಮಾದ ಕನ್ನಡ ಹಾಡುಗಳು ಹಾಗೂ ಸಂಗೀತದ ಹಕ್ಕು ಲಹರಿ ಖರೀದಿಸಿದ್ದರೆ ಹಿಂದಿಯ ಹಕ್ಕುಗಳನ್ನು ಎಂಆರ್ಟಿ ಖರೀದಿಸಿದೆ.