»   » 'ಮುಗುಳುನಗೆ' ಸಿನಿಮಾದ ಮತ್ತೊಂದು ಮಜಬೂತಾದ ಹಾಡು ಕೇಳಿ

'ಮುಗುಳುನಗೆ' ಸಿನಿಮಾದ ಮತ್ತೊಂದು ಮಜಬೂತಾದ ಹಾಡು ಕೇಳಿ

Posted By:
Subscribe to Filmibeat Kannada

'ಮುಗುಳುನಗೆ' ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಗಿದೆ. 'ಜೀ ಕನ್ನಡ' ವಾಹಿನಿಯ ಸರಿಗಮಪ ಗ್ರಾಂಡ್ ಫಿನಾಲೆಯಲ್ಲಿ 'ಮುಗುಳುನಗೆ'ಯ ಈ ಸ್ಪೆಷಲ್ ಹಾಡನ್ನು ರಿಲೀಸ್ ಮಾಡಲಾಗಿತ್ತು.

'ಮುಗುಳುನಗೆ' ಸಿನಿಮಾದ ಮತ್ತೊಂದು ಹಾಡು ಬಿಡುಗಡೆ ಆಯ್ತು

'ಅಮರ ಹಳೆ ನೆನಪು...' ಎಂಬ ಈ ಹಾಡನ್ನು ಯೋಗರಾಜ್ ಭಟ್ ಬರೆದಿದ್ದಾರೆ. ಹಾಡಿಗೆ ಹರಿಕೃಷ್ಣ ಸಂಗೀತ ನೀಡಿದ್ದು, ವಿಜಯ ಪ್ರಕಾಶ್ ತಮ್ಮ ಸ್ಟೈಲ್ ನಲ್ಲಿ ಸಖತ್ ಆಗಿ ಈ ಹಾಡನ್ನು ಹಾಡಿದ್ದಾರೆ. ವಿಶೇಷ ಅಂದರೆ ಈ ಹಾಡಿನಲ್ಲಿ ಗಣೇಶ್ ಜೊತೆಗೆ ನಟ ಜಗ್ಗೇಶ್ ಅವರು ಹೆಜ್ಜೆ ಹಾಕಿದ್ದಾರೆ.

'ಮುಗುಳುನಗೆ' ಟೈಟಲ್ ಹಾಡು ರಿಲೀಸ್ ಮಾಡಿದ ಪವರ್ ಸ್ಟಾರ್

'Mugulu Nage' Movie 5th Song Released

ಇಡೀ ಸಿನಿಮಾದ ಹಾಡುಗಳ ಪೈಕಿ ಈ ಹಾಡು ತುಂಬ ಡಿಫರೆಂಟ್ ಆಗಿದೆ. ಭಟ್ಟರು ಮತ್ತೆ ತಮ್ಮ ತರಲೆ ಪದಗಳ ಮೂಲಕ ವೇದಾಂತ ಹೇಳಿದ್ದಾರೆ. ಸದ್ಯ ಒಂದೊಂದೇ ಹಾಡುಗಳ ಮೂಲಕ ದಿನೇ ದಿನೇ 'ಮುಗುಳುನಗೆ' ಚಿತ್ರದ ಸದ್ದು ಜೋರಾಗಿದ್ದು, ಸಿನಿಮಾ ಆಗಸ್ಟ್ ಕೊನೆಯ ವಾರದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. 'ಮುಗುಳು ನಗೆ' ಚಿತ್ರದ ಈ ಹಾಡು ಕೇಳುವುದಕ್ಕೆ ಈ ಲಿಂಕ್ ಕ್ಲಿಕ್ಕಿಸಿ.

English summary
'Mugulu Nage' Kannada Movie 5th Song Released
Please Wait while comments are loading...