For Quick Alerts
  ALLOW NOTIFICATIONS  
  For Daily Alerts

  ಪ್ರಭುದೇವ 'ಮುಕ್ಕಾಲ ಮುಕಾಬುಲಾ': ಯೂಟ್ಯೂಬ್ ದಾಖಲೆ ಧೂಳಿಪಟ.!

  |
  ಒಂದೇ ದಿನದಲ್ಲಿ ಯೂಟ್ಯೂಬ್ ನಲ್ಲಿ 33 ಮಿಲಿಯನ್ ವೀಕ್ಷಣೆ | PRABHUDEVA | STREET DANCE | FILMIBETA KANNADA

  ಪ್ರಭುದೇವ ಎಂದ ಕೂಡಲೆ ತಮಿಳು ಸಿನಿ ಪ್ರಿಯರಿಗೆ ಥಟ್ ಅಂತ ನೆನಪಾಗುವುದು 'ಮುಕ್ಕಾಲ ಮುಕಾಬುಲಾ'. 1994 ರಲ್ಲಿ ತೆರೆಕಂಡ ತಮಿಳಿನ 'ಕಾದಲನ್' ಚಿತ್ರದ ಹಾಡು 'ಮುಕ್ಕಾಲ ಮುಕಾಬುಲಾ'. ಎ.ಆರ್.ರೆಹಮಾನ್ ಸಂಯೋಜಿಸಿದ ಸಂಗೀತಕ್ಕೆ ಅಂದು ಪ್ರಭುದೇವ ಮತ್ತು ನಗ್ಮಾ 'ಮುಕ್ಕಾಲ ಮುಕಾಬುಲಾ' ಅಂತ ಕುಣಿಯುತ್ತಿದ್ದರೆ, ಸಿನಿ ಪ್ರಿಯರು ಎದ್ದು ನಿಂತು ಸ್ಟೆಪ್ ಹಾಕುತ್ತಿದ್ದರು. ಅಷ್ಟರಮಟ್ಟಿಗೆ 'ಮುಕ್ಕಾಲ ಮುಕಾಬುಲಾ' ಚಾರ್ಟ್ ಬಸ್ಟರ್ ಆಗಿತ್ತು.

  ಅಂದಕಾಲತ್ತಿಲ್ ಸೂಪರ್ ಹಿಟ್ ಸಾಂಗ್ 'ಮುಕ್ಕಾಲ ಮುಕಾಬುಲಾ' ಬಗ್ಗೆ ನಾವು ಇಷ್ಟೆಲ್ಲಾ ಹೇಳುತ್ತಿರುವುದಕ್ಕೆ ಒಂದು ಕಾರಣ ಇದೆ. ಅಂದು 'ಮುಕ್ಕಾಲ ಮುಕಾಬುಲಾ' ಅಂತ ಪ್ರಭುದೇವ ಹೇಗೆ ಹೆಜ್ಜೆ ಹಾಕಿದ್ರೋ, ಹಾಗೇ ಇಂದು ಬಾಲಿವುಡ್ ನಟ ವರುಣ್ ಧವನ್ ಮತ್ತು ಶ್ರದ್ಧಾ ಕಪೂರ್ ಜೊತೆಗೆ ಪ್ರಭುದೇವ ಡ್ಯಾನ್ಸ್ ಮಾಡಿದ್ದಾರೆ.

  ಹಿಂದಿ ಸಿನಿಮಾ 'ಸ್ಟ್ರೀಟ್ ಡ್ಯಾನ್ಸರ್-3D' ಚಿತ್ರದಲ್ಲಿ 'ಮುಕ್ಕಾಲ ಮುಕಾಬುಲಾ' ಹಾಡನ್ನು ರೀಮಿಕ್ಸ್ ಮಾಡಲಾಗಿದ್ದು ಪ್ರಭುದೇವ, ವರುಣ್ ಧವನ್ ಮತ್ತು ಶ್ರದ್ಧಾ ಕಪೂರ್ ತಮ್ಮ ಡ್ಯಾನ್ಸ್ ಮೂಲಕ ಕಿಚ್ಚು ಹಚ್ಚಿಸಿದ್ದಾರೆ.

  ವಿಡಿಯೋ: ಡ್ಯಾನ್ಸ್ ಕಿಂಗ್ ಪ್ರಭುದೇವ ಜೊತೆ 'ಮಿಲ್ಕಿ ಬ್ಯೂಟಿ'ಯ ಝಲಕ್ ವಿಡಿಯೋ: ಡ್ಯಾನ್ಸ್ ಕಿಂಗ್ ಪ್ರಭುದೇವ ಜೊತೆ 'ಮಿಲ್ಕಿ ಬ್ಯೂಟಿ'ಯ ಝಲಕ್

  'ಸ್ಟ್ರೀಟ್ ಡ್ಯಾನ್ಸರ್-3D' ಚಿತ್ರದ 'ಮುಕ್ಕಾಲ ಮುಕಾಬುಲಾ' ಹಾಡು ಬಿಡುಗಡೆ ಆಗಿದ್ದು, ಒಂದೇ ದಿನದಲ್ಲಿ ಯೂಟ್ಯೂಬ್ ನಲ್ಲಿ 33 ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ ಹೊಸ ದಾಖಲೆ ನಿರ್ಮಿಸಿದೆ.

  ರೆಮೋ ಡಿಸೋಜಾ ನಿರ್ದೇಶನದ 'ಸ್ಟ್ರೀಟ್ ಡ್ಯಾನ್ಸರ್-3D' ಚಿತ್ರದಲ್ಲಿ ವರುಣ್ ಧವನ್, ಶ್ರದ್ಧಾ ಕಪೂರ್ ಜೊತೆಗೆ ಪ್ರಭುದೇವ ಮತ್ತು ನೋರಾ ಫತೇಹಿ ಕೂಡ ನಟಿಸಿದ್ದಾರೆ. ನೃತ್ಯ ಸ್ಪರ್ಧೆಯೇ ಈ ಸಿನಿಮಾದ ಜೀವಾಳವಾಗಿದ್ದು, ಮುಂದಿನ ವರ್ಷ ತೆರೆಗೆ ಬರಲಿದೆ.

  English summary
  Muqabla song from Street Dancer 3D is trending in Youtube.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X