twitter
    For Quick Alerts
    ALLOW NOTIFICATIONS  
    For Daily Alerts

    3ನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿ ಮುಡಿಗೇರಿಸಿಕೊಂಡ ಬೆಂಗಳೂರಿನ ಸಂಗೀತ ನಿರ್ದೇಶಕ ರಿಕ್ಕಿ ಕೇಜ್

    |

    ಬೆಂಗಳೂರು ಮೂಲದ ಹೆಸರಾಂತ ಸಂಗೀತ ನಿರ್ದೇಶಕ ರಿಕ್ಕಿ ಕೇಜ್ ತಮ್ಮ ಮೂರನೇ ಬಾರಿಗೆ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ನಿನ್ನೆ ( ಫೆಬ್ರವರಿ 5 ) ಲಾಸ್ ಏಂಜೆಲಸ್‌ನಲ್ಲಿ ನಡೆದ 65ನೇ ವಾರ್ಷಿಕ ಗ್ರ್ಯಾಮಿ ಪ್ರಶಸ್ತಿ ಕಾರ್ಯಕ್ರಮದಲ್ಲಿ 'ಡಿವೈನ್ ಟೈಡ್ಸ್' ಎಂಬ ಎಂಬ ಆಲ್ಬಮ್‌ಗಾಗಿ ರಿಕ್ಕಿ ಕೇಜ್ ಅವರಿಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.

    ಸ್ವೆವಾರ್ಡ್ ಕೋಪ್‌ಲ್ಯಾಂಡ್ ಜತೆಗೂಡಿ ರಚಿಸಿದ್ದ ಈ ಡಿವೈನ್ ಟೈಡ್ಸ್ ಎಂಬ ಮ್ಯೂಸಿಕ್ ಆಲ್ಬಮ್‌ನಲ್ಲಿ 9 ಹಾಡುಗಳು ಹಾಗೂ 8 ಮ್ಯೂಸಿಕ್ ವಿಡಿಯೊಗಳಿದ್ದು, ಈ ಆಲ್ಬಮ್‌ಗೆ ಇದೀಗ ಸಂಗೀತ ಲೋಕದ ಅತಿದೊಡ್ಡ ಪ್ರಶಸ್ತಿ ಸಂದಿದೆ.

    ಅಭಿನಯ ನಟಿಸುತ್ತಿದ್ದ ಪಾತ್ರಕ್ಕೆ ಸಂಗೀತ ಅನಿಲ್ ಗ್ರ್ಯಾಂಡ್ ಎಂಟ್ರಿ: ಈಗ ಕಥೆಯೊಂದು ಶುರುವಾಗಿದೆ! ಅಭಿನಯ ನಟಿಸುತ್ತಿದ್ದ ಪಾತ್ರಕ್ಕೆ ಸಂಗೀತ ಅನಿಲ್ ಗ್ರ್ಯಾಂಡ್ ಎಂಟ್ರಿ: ಈಗ ಕಥೆಯೊಂದು ಶುರುವಾಗಿದೆ!

    2015ರಲ್ಲಿ ರಿಕ್ಕಿ ಕೇಜ್ ಸಂಯೋಜಿಸಿದ್ದ ವೈಂಡ್ಸ್ ಆಫ್ ಸಂಸಾರ ಎಂಬ ಆಲ್ಬಮ್‌ಗೆ ಗ್ರ್ಯಾಮಿ ಪ್ರಶಸ್ತಿ ಲಭಿಸಿತ್ತು. ಇದು ರಿಕ್ಕಿ ಕೇಜ್ ಪಡೆದ ತನ್ನ ವೃತ್ತಿ ಬದುಕಿನ ಮೊದಲ ಗ್ರ್ಯಾಮಿ ಪ್ರಶಸ್ತಿಯಾಗಿದೆ. ಬಳಿಕ 2022ರಲ್ಲಿ ರಿಕ್ಕಿ ಕೇಜ್ ಬೆಸ್ಟ್ ಆಫ್ ನ್ಯೂ ಏಜ್ ಆಲ್ಬಮ್ ಅಡಿಯಲ್ಲಿ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿದ್ದರು. ಇದೀಗ ಈ ಬಾರಿಯೂ ಸಹ ಗ್ರ್ಯಾಮಿ ಪ್ರಶಸ್ತಿಯನ್ನು ಗೆದ್ದಿರುವ ರಿಕ್ಕಿ ಕೇಜ್ ಮೂರು ಬಾರಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದ ಭಾರತೀಯ ಎನಿಸಿಕೊಂಡಿದ್ದಾರೆ.

    Music composer Ricky Kej won his 3rd Grammy Award

    1981ರ ಆಗಸ್ಟ್ 5ರಂದು ಜನಿಸಿದ್ದ ರಿಕ್ಕಿ ಕೇಜ್ ಮೂಲತಃ ಪಂಜಾಬಿ ಕುಟುಂಬಕ್ಕೆ ಸೇರಿದವರಾಗಿದ್ದು, ತಮಗೆ ಎಂಟು ವರ್ಷ ವಯಸ್ಸಾಗಿದ್ದಾಗ ತಮ್ಮ ಕುಟುಂಬದ ಜತೆ ಬೆಂಗಳೂರಿಗೆ ಸ್ಥಳಾಂತರಗೊಂಡರು ಹಾಗೂ ಇಲ್ಲಿಯೇ ನೆಲೆಗೊಂಡರು. ಬಿಷಾಪ್ ಕಾಟನ್ ಬಾಲಕರ ಶಾಲೆಯಲ್ಲಿ ತನ್ನ ಶಾಲಾ ವಿದ್ಯಾಭ್ಯಾಸವನ್ನು ಮಾಡಿದ ರಿಕ್ಕಿ ಕೇಜ್ ಆಕ್ಸ್‌ಫರ್ಡ್ ಡೆಂಟಲ್ ಕಾಲೇಜಿನಲ್ಲಿ ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಮುಗಿಸಿದರು. ಬಳಿಕ ತಮ್ಮ ನೆಚ್ಚಿನ ಸಂಗೀತಾಭ್ಯಾಸದ ಕಡೆ ಮುಖ ಮಾಡಿದರು.

    English summary
    Music composer Ricky Kej won his 3rd Grammy Award . Read on
    Monday, February 6, 2023, 12:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X