twitter
    For Quick Alerts
    ALLOW NOTIFICATIONS  
    For Daily Alerts

    ಸಂಗೀತ 'ಸಾಗರ'ದಲ್ಲಿ ಲವ್ ಇನ್ ಹುಬ್ಳಿ ಚಿತ್ರತಂಡ

    By Mahesh
    |

    ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಲವ್ ಇನ್ ಹುಬ್ಬಳ್ಳಿ ಜಂಕ್ಷನ್ ಚಿತ್ರತಂಡದಿಂದ ವಾದ್ಯ ಸಂಯೋಜಕರಿಗೆ ಸನ್ಮಾನ ಹಾಗೂ ಕನ್ನಡ ಟೈಮ್ಸ್ ಮೀಡಿಯಾ ಸಂಸ್ಥೆಯ ಸಹಯೋಗದೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲಾಯಿತು.

    ಸಂಗೀತ ಮನಸ್ಸಿಗೆ ಆನಂದವನ್ನು ನೀಡುತ್ತದೆ. ಕೆಟ್ಟದನ್ನು ನಾಶ ಮಾಡುವ ಶಕ್ತಿಯನ್ನೂ ಹೊಂದಿದೆ. ಹೊಸ ಪ್ರಯತ್ನ ಮಾಡುವ ವೇಗದಲ್ಲಿ ಚಿತ್ರಸಂಗೀತ ಮೂಲ ಮಟ್ಟವನ್ನು ಕಳೆದುಕೊಳ್ಳುತ್ತಿದೆ ಎಂದು ಡಾ. ಸಫ್ರ್ರಾಜ್ ಚಂದ್ರಗುತ್ತಿ ಈ ಸಂದರ್ಭದಲ್ಲಿ ಹೇಳಿದರು.

    ಹಿಂದೆ ಸಿನಿಮಾ ಗೀತೆಗಳು ಸಿನಿಮಾ ಸಂಗತಿಗಳನ್ನು ಹೊರತುಪಡಿಸಿ ಹೆಚ್ಚು ಪ್ರಸಿದ್ಧಿಯಾಗುತ್ತಿದ್ದವು ಮತ್ತು ಸದಾ ನೆನಪಿನಲ್ಲಿ ಉಳಿಯುತ್ತಿದ್ದವು. ನಾಡಿನ ಹೆಸರಾಂತ ಸಾಹಿತಿಗಳು ಚಲನಚಿತ್ರದ ಸಂಗೀತಕ್ಕೆ ಪ್ರವೇಶ ಮಾಡಿ ಅದರ ಮೌಲ್ಯವನ್ನು ಹೆಚ್ಚಿಸಿದವು.

    ಟಿ.ಜಿ. ಲಿಂಗಪ್ಪ, ಎಸ್.ಕೆ. ಕರೀಂಖಾನ್, ದೊಡ್ಡರಂಗೇಗೌಡ, ಪಿ. ಲಂಕೇಶ್, ಬರಗೂರು ರಾಮಚಂದ್ರಪ್ಪ, ಡಾ. ಚಂದ್ರಶೇಖರ ಕಂಬಾರ ಇಂತಹ ಅನೇಕರನ್ನು ನಾವು ಹೆಸರಿಸಬಹುದಾಗಿದೆ. ಚಲನಚಿತ್ರದಲ್ಲಿ ಸಂಗೀತವೆಂಬುದು ಆ ಸಿನಿಮಾಕ್ಕೆ ಪೂರಕವಾಗಿರುತ್ತಿತ್ತು.

    Music conductors honoured by Love in Hubli Junction Music Director Chinmaya M.Rao

    ಇತ್ತೀಚಿನ ದಿನಗಳಲ್ಲಿ ಒಂದಕ್ಕೊಂದು ತಾಳಮೇಳವಿಲ್ಲದಂತೆ ಮೂಡಿಬರುತ್ತಿದೆ. ಹಾಗೆಂದ ಮಾತ್ರಕ್ಕೆ ಎಲ್ಲವೂ ಮುಗಿಯಿತು ಎನ್ನುವ ಹತಾಶೆ ಬೇಡ. ಚಿನ್ಮಯ ಎಂ.ರಾವ್‍ರಂತಹ ಸಂಗೀತ ನಿರ್ದೇಶಕರು ಈ ಕಲೆಯನ್ನು ಶಾಸ್ತ್ರೀಯವಾಗಿಯೂ ಅಭ್ಯಾಸ ಮಾಡಿ ಸಿನಿಮಾರಂಗದಲ್ಲಿ ಅಳವಡಿಸುವ ಹೊಸ ಭಾಷ್ಯಕ್ಕೆ ಕೈಹಾಕಿದ್ದಾರೆ. ಅವರ ಪ್ರಯತ್ನಗಳು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

    ವಾದ್ಯಸಂಯೋಜಕರಿಗೆ ಸನ್ಮಾನ: ಲವ್ ಇನ್ ಹುಬ್ಬಳ್ಳಿ ಜಂಕ್ಷನ್ ಚಿತ್ರದ ವಾದ್ಯ ಸಂಯೋಜಕರಾದ ಡೊಮಿನಿಕ್ ಮಾರ್ಟಿನ್ ಕ್ಯಾಲಿಕಟ್, ಹಿರಿಯ ರಿದಂ ವಾದಕ ಅನಿಲ್ ಕುಮಾರ್ ಕೆ. ಅವರನ್ನು ಅಭಿನಂದಿಸಲಾಯಿತು.

    ಚಿನ್ಮಯ ಎಂ. ರಾವ್ ಸಿನಿಮಾದ ಹಾಡುಗಳನ್ನು ಬರೆದು ಸಂಗೀತ ನಿರ್ದೇಶಿಸಿದ್ದು, ಅದರ ಪ್ರಾತ್ಯಕ್ಷಿಕೆಯನ್ನು ನಡೆಸಿ ಸಂವಾದ ನಡೆಸಿದರು. ಬದಲಾದ ತಂತ್ರಜ್ಞಾನ ವ್ಯವಸ್ಥೆಯಲ್ಲಿ ಈ ಚಿತ್ರದ ಸಂಗೀತ ನಿರ್ದೇಶಕರಾದ ಚಿನ್ಮಯ ರಾವ್ ವಾದ್ಯಸಂಯೋಜನೆಯ ಆರಂಭಿಕ ಹಾಗು ಪ್ರಮುಖ ಹಂತದ ಕೆಲಸಗಳನ್ನು ಮಲೆನಾಡಿನ ಪರಿಸರದಲ್ಲೇ ಮಾಡುತ್ತಿದ್ದಾರೆ. ಕಳೆದ ಹತ್ತು ದಿನಗಳಿಂದ ಈ ಕಾರ್ಯ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಅಂತಿಮವಾಗಿ ಚಿತ್ರತಂಡ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

    Love in Hubli Junction poster
    ಚಿತ್ರದ ಸಂಗೀತ ನಿರ್ದೇಶಕ ಚಿನ್ಮಯ ರಾವ್ ಮಾತನಾಡಿ, ಒಂದು ಚಿತ್ರದ ಸಂಗೀತ ನಿರ್ದೇಶನದಲ್ಲಿ ವಾದ್ಯ ಸಂಯೋಜಕರ ಪಾತ್ರ ಅತ್ಯಂತ ಸವಾಲೆನಿಸುವ ಕ್ರಿಯಾಶೀಲ ಸಂಗತಿಯಾಗಿರುತ್ತದೆ. ಚಿತ್ರದ ಹಾಡುಗಳಿಗೆ ಇಂಪಾದ ರಾಗಸಂಯೋಜನೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ವಾದ್ಯ ಸಂಯೋಜಕರ ಕೆಲಸ. ಭಾರತೀಯ ಚಿತ್ರರಂಗದ ಇತಿಹಾಸದ ಪುಟಗಳನ್ನು ತೆರೆದಾಗ ಎಲ್ಲಾ ಯಶಸ್ವಿ ಸಂಗೀತ ನಿರ್ದೇಶಕರ ಹಿಂದೆ ವಾದ್ಯಸಂಯೋಜಕರ ಪಾತ್ರ ಸಾಕಷ್ಟಿದೆ.

    ಆದರೆ ಹಿನ್ನೆಲೆಯಲ್ಲೇ ಕೆಲಸ ಮಾಡುವ ಕಾಯಕಯೋಗಿಗಳಾದ ವಾದ್ಯಸಂಯೋಜಕರನ್ನು ನಾವು ಗುರುತಿಸುವುದೇ ಇಲ್ಲ. ಇಂತಹ ಒಂದು ಕಾಲಘಟ್ಟದಲ್ಲಿ "ಲವ್ ಇನ್ ಹುಬ್ಬಳ್ಳಿ ಜಂಕ್ಷನ್" ಚಿತ್ರದ ಸಂಗೀತಕ್ಕೆ ವಾದ್ಯ ಸಂಯೋಜನೆ ಮಾಡುತ್ತಿರುವ ಹಿರಿಯ ವಾದ್ಯ ಸಂಯೋಜಕರಾದ ಡೊಮಿನಿಕ್ ಮಾರ್ಟಿನ್ ಹಾಗು ಅನಿಲ್ ಕುಮಾರ್.ಕೆ ಇವರಿಬ್ಬರನ್ನು ಸನ್ಮಾನಿಸುವ ಮೂಲಕ "ಲವ್ ಇನ್ ಹುಬ್ಬಳ್ಳಿ ಜಂಕ್ಷನ್" ಚಿತ್ರ ತಂಡ ಹಾಗು "ಕನ್ನಡ ಟೈಮ್ಸ್" ಸಂಸ್ಥೆ ಹೊಸ ಪರಂಪರೆಯೊಂದಕ್ಕೆ ನಾಂದಿ ಹಾಡುತ್ತಿದೆ ಎಂದರು.

    Music Director Chinmaya M.Rao

    ನಿರ್ದೇಶಕ ಮುತ್ತುರಾಜ್ ಮಾತನಾಡಿ: ಈ ಸಿನಿಮಾ ಪ್ರೀತಿಯ ಜೊತೆಯಲ್ಲಿ ಒಂದು ಸಂದೇಶವನ್ನೂ ಸಹ ನೀಡುತ್ತದೆ. ನಮ್ಮ ಪ್ರಯತ್ನಕ್ಕೆ ಅನೇಕ ಹೊಸಪ್ರತಿಭೆಗಳು ಕೈಜೋಡಿಸಿವೆ. ಪೂಜ್ಯ ಶ್ರೀಗಳೂ ಸಹ ಸಹಕರಿಸಿದ್ದಾರೆ. ಕೇರಳದ ಪ್ರಸಿದ್ಧ ವಾದ್ಯ ಸಂಯೋಜಕರು ನಮ್ಮ ಸಿನಿಮಾಕ್ಕೆ ಕೆಲಸ ಮಾಡಿರುವುದು ಒಂದು ಹೆಗ್ಗಳಿಕೆ. ಪ್ರಸಿದ್ಧರಾದವರನ್ನು ಬಳಸಿ ಸಿನಿಮಾ ಮಾಡುವುದು ದೊಡ್ಡ ಮಾತಲ್ಲ. ಸಿದ್ಧಿಗೊಂಡವರನ್ನು ಪ್ರಸಿದ್ಧಿಗೆ ತರುವ ಕೆಲಸ ಆಗಬೇಕು ಎಂದರು.

    ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಹುಬ್ಬಳ್ಳಿಯ ರಾಜ ವಿದ್ಯಾಶ್ರಮದ ಷಡಕ್ಷರಿದೇವರು, ಸಂಗೀತ ಮತ್ತು ಕಲೆ ಒಂದು ಕಾಲದಲ್ಲಿ ರಾಜಾಶ್ರಯದಲ್ಲಿತ್ತು. ಇತ್ತೀಚಿನ ದಿನಗಳಲ್ಲಿ ಈ ಕ್ಷೇತ್ರದಲ್ಲಿ ಹೊಸ ಪ್ರಯೋಗಗಳು ನಡೆಯುತ್ತಿವೆ. ಯುವಜನರು ಸಿನಿಮಾ ಜಗತ್ತಿಗೆ ತೆರೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

    Love in Hubli Junction team

    ಎಲ್ಲಾ ಕ್ಷೇತ್ರಗಳಲ್ಲಿಯೂ ಯಶಸ್ವಿಯಾಗುವಲ್ಲಿ ನಾವು ಪ್ರೋತ್ಸಾಹ ನೀಡಬೇಕು. ಬದುಕು ರೂಪುಗೊಳ್ಳುವುದು ಅನುಭವದ ಮೇಲೆ. ಅನುಭವ ನಿರಂತರ ಕಲಿಕೆಯಿಂದ ಬರುತ್ತದೆ. ಇಂದು ಸಿನಿಮಾ ಪ್ರಪಂಚ ಸಂದೇಶವನ್ನು ನೀಡುವಲ್ಲಿ ಸೋಲುತ್ತಿದೆ. ಪ್ರಯೋಗ ಮತ್ತು ಪ್ರಯತ್ನಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಬಹುಮುಖ್ಯವಾದುದು ಎಂದರು.

    ನಾಯಕನಟ ರಂಜಿತ್ ಹುಬ್ಬಳ್ಳಿ, ನಾಯಕಿ ಆರ್ಯ ರಾವ್, ಗಾಯಕಿ ಸಹನಾ ಜಿ. ಭಟ್, ಬಿ. ವಿ. ರವೀಂದ್ರನಾಥ, ಶೀಲ ಸಿ. ರಾವ್, ರಾಜು ಭಾಗವತ್, ಹಿರಿಯ ಜ್ಯೋತಿಷಿ ನೀಲಕಂಠರಾವ್, ಜಿ.ಟಿ. ಶ್ರೀಧರಶರ್ಮ, ಸೋಮೇಶ್ ಬೆಳಕೊಪ್ಪ, ಗುರುನಾಥ ಶಾಸ್ತ್ರಿ ಹುಬ್ಬಳ್ಳಿ, ಚಂದ್ರಕಾಂತ ಹಿರೇಮಠ, ಬಿ.ವಿ. ರವೀಂದ್ರನಾಥ್ ಇತರರು ಹಾಜರಿದ್ದರು.

    English summary
    This is first time in Film Music Industry honoring Music conductors by a Music Director in between a film Music Work ! A new history made by Music Director Chinmaya M.Rao. Calicut Musician Dominic Martin wished Music Director Chinmaya Rao after he was honored. Love in Hubli Junction movie team was present at Sagara, Karnataka.
    Monday, December 15, 2014, 12:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X