ಹೊಸ ಅಪ್‌ಡೇಟ್ ನೀಡಿದ ತಮಿಳಿನ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ್ ರವಿಚಂದರ್
ಕಳೆದ ವರ್ಷ ಬಿಡುಗಡೆಯಾದ ಸೂಪರ್ ಸ್ಟಾರ್ ರಜನಿಕಾಂತ್ ಅವರ ಜೈಲರ್, ದಳಪತಿ ವಿಜಯ್ ಅವರ ಲಿಯೋ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿರುವ,. ಸದ್ಯದ ಬಹು ಬೇಡಿಕೆಯ ಸ್ಟಾರ್ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್. ಸದ್ಯಕ್ಕೆ ಭಾರತೀಯ ಚಲನಚಿತ್ರೋದ್ಯಮದಲ್ಲಿ ಹೆಚ್ಚು ಬೇಡಿಕೆಯಿರುವ ಸಂಗೀತ ನಿರ್ದೇಶಕರಲ್ಲಿ ಅನಿರುದ್ಧ್ ರವಿಚಂದರ್ ಒಬ್ಬರಾಗಿದ್ದು, ಹೊಸ ವರ್ಷದಲ್ಲಿ ಹೊಸ ಅಪ್‌ಡೇಟ್ ಒಂದನ್ನು ಹಂಚಿಕೊಂಡಿದ್ದಾರೆ.
ಮ್ಯೂಸಿಕ್ ಕಂಪೋಸರ್ ಅನಿರುದ್ಧ್ ರವಿಚಂದರ್ ಮೊದಲ ಬಾರಿಗೆ ಮಲಯಾಳಂ ಚಿತ್ರರಂಗಕ್ಕೆ ಕಾಲಿಡಲು ಸಿದ್ಧರಾಗಿದ್ದಾರೆ. ಪ್ರಸ್ತುತ ತಮ್ಮ 'ಹುಕುಮ್ ವರ್ಲ್ಡ್ ಟೂರ್'ನ ಪ್ರಚಾರದಲ್ಲಿ ನಿರತರಾಗಿರುವ ಅನಿರುದ್ಧ್ ರವಿಚಂದರ್, 2024 ರಲ್ಲಿ ನೇರ ಮಲಯಾಳಂ ಚಲನಚಿತ್ರದಲ್ಲಿ ಕೆಲಸ ಮಾಡುವುದಾಗಿ ಬಹಿರಂಗಪಡಿಸಿದ್ದಾರೆ.

ದೊಡ್ಡ ಪ್ಯಾನ್ ಇಂಡಿಯಾ ಸ್ಟಾರ್ ಜೊತೆಗೆ ಅನಿರುದ್ಧ್ ರವಿಚಂದರ್ ಕೆಲಸ
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು ತಮ್ಮ ನೆಚ್ಚಿನ ನಟರಲ್ಲಿ ಒಬ್ಬರಾದ ದೊಡ್ಡ ಪ್ಯಾನ್ ಇಂಡಿಯನ್ ಸ್ಟಾರ್ ಜೊತೆಗೆ ಕೆಲಸ ಮಾಡುವುದಾಗಿ ತಿಳಿಸಿದ್ದಾರೆ. ಆದರೆ, ಅನಿರುದ್ಧ್ ರವಿಚಂದರ್ ಕೇವಲ ನಟನ ಜೊತೆ ಕೆಲಸ ಮಾಡಲು ಮಾತ್ರ ಉತ್ಸಾಹ ತೋರುತ್ತಿಲ್ಲ... ಬ್ಲಿಗೆ ಆ ಸಿನಿಮಾದ ನಿರ್ದೇಶಕ ಕೂಡ ಇದಕ್ಕೆ ಕಾರಣ ಎನ್ನಲಾಗಿದೆ.
ಇನ್ನು, ತಮ್ಮ ಮೊದಲ ಮಲಯಾಳಂ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಆ ಪ್ಯಾನ್ ಇಂಡಿಯನ್ ಸ್ಟಾರ್ ಯಾರು...? ಆ ನಿರ್ದೇಶಕ ಯಾರು ಎಂಬ ಪ್ರಶ್ನೆಗೆ, "ಪ್ರೊಡಕ್ಷನ್ ಹೌಸ್ ಅವರ ಪ್ರಾಜೆಕ್ಟ್ ಮಾಡುತ್ತಿದ್ದಿ, ಈಗಲೇ ನಾನು ಅಂತಹ ಮಾಹಿತಿಯನ್ನು ಬಹಿರಂಗಪಡಿಸುವುದು ಸರಿಯಲ್ಲ" ಎಂದು ಅನಿರುದ್ಧ್ ರವಿಚಂದರ್ ಹೇಳಿದ್ದಾರೆ.
ಅನಿರುದ್ಧ್ ರವಿಚಂದರ್ ವೃತ್ತಿಜೀವನ
ಅನಿರುದ್ಧ್ ರವಿಚಂದರ್ ತಮಿಳಿನಲ್ಲಿ ಬ್ಯಾಕ್ ಡು ಬ್ಯಾಕ್ ಹಿಟ್ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ಸೂಪರ್ ಸ್ಟಾರ್‌ಗಳ ಜೊತೆಗೆ ಕೆಲಸ ಮಾಡಿದ್ದಾರೆ. ತಮಿಳಿನ ಜೊತೆ ಜೊತೆಗೆ ತೆಲುಗು ಸಿನಿಮಾಗಳಲ್ಲಿಯೂ ತಮ್ಮ ಕೈ ಚಳಕ ತೋರಿಸಿದ್ದಾರೆ. ಅಜ್ಞಾತವಾಸಿ ಮತ್ತು ನಾನಿಯ ಗ್ಯಾಂಗ್ ಲೀಡರ್‌ನಂತಹ ತೆಲುಗು ಸಿನಿಮಾಗೀಗೆ ಸಂಗೀತ ನೀಡಿದ್ದಾರೆ.

ಇನ್ನು, ಅನಿರುದ್ಧ್ ರವಿಚಂದರ್ ಅವರ ಸಂಗೀತ ತಮಿಳು, ತೆಲುಗು, ಹಿಂದಿ ಸೇರಿ ಎಲ್ಲಾ ಭಾಷೆಯ ಚಿತ್ರರಂಗದಲ್ಲಿಯೂ ಕಮಾಲ್ ಮಾಡಲಿದೆ ಎಂಬುದಕ್ಕೆ ಉದಾಹರಣೆಯಾಗಿ ಶಾರುಖ್ ಖಾನ್ ಅಭಿನಯದ 'ಜವಾನ್' ಸಿನಿಮಾ ಸಾಕ್ಷಿಯಾಗಿದೆ. ಈಗ ಅನಿರುದ್ಧ್ ರವಿಚಂದರ್ ಮಲಯಾಲಂ ಸಿನಿ ರಂಗದಲ್ಲಿ ತಮ್ಮ ಮಾಂತ್ರಿಕತೆಯನ್ನು ಹರಡಲು ಹೊರಟಿದ್ದಾರೆ.
ಅನಿರುದ್ಧ್ ರವಿಚಂದರ್ ಅವರ ಚೊಚ್ಚಲ ಚಿತ್ರ ಧನುಶ್ ನಟನೆ '3' ನಿಂದ ಸಕತ್ ಫೇಮಸ್ ಆದ 'ಕೊಲವೆರಿ ಡಿ' ಹಾಡು ಇಂದಿಗೂ ಜನ ಗುನುಗುತ್ತಿದ್ದಾರೆ. ಅಂದಿನಿಂದ, ಅವರು ರಜನಿಕಾಂತ್, ಕಮಲ್ ಹಾಸನ್, ಧನುಷ್, ವಿಜಯ್ ಥಲಪತಿ, ವಿಜಯ್ ಸೇತುಪತಿ, ಶಾರುಖ್ ಖಾನ್ ಅವರಂತಹವರ ಜೊತೆ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಅನಿರುದ್ಧ್ ರವಿಚಂದರ್, ಜೂನಿಯರ್ ಎನ್‌ಟಿಆರ್ ಅವರೊಂದಿಗೆ 'ದೇವರ' ಚಿತ್ರಕ್ಕಾಗಿ ಕೆಲಸ ಮಾಡುತ್ತಿದ್ದಾರೆ.
'ಹುಕುಮ್ ವರ್ಲ್ಡ್ ಟೂರ್'
ಸಿನಿಮಾಗಳ ಹೊರತಾಗಿ, ಅನಿರುದ್ಧ್ ರವಿಚಂದರ್ ಪ್ರಸ್ತುತ ತಮ್ಮ 'ಹುಕುಂ ವರ್ಲ್ಡ್ ಟೂರ್'ಗೆ ವ್ಯಾಪಕ ಪ್ರಚಾರ ಮಾಡುತ್ತಿದ್ದಾರೆ. ಇದು ಫೆಬ್ರವರಿ 10 ರಂದು ದುಬೈನಲ್ಲಿ ನಡೆಯಲಿದೆ. ಅವರ ಕೊನೆಯ ಪ್ರವಾಸವು USA ನಲ್ಲಿ ನಡೆದಿತ್ತು. ಜೊತೆಗೆ ಭಾರೀ ಯಶಸ್ಸನ್ನು ಕಂಡಿತ್ತು.


Click it and Unblock the Notifications










