ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಎದೆ ನೋವು: ಆಸ್ಪತ್ರೆಗೆ ದಾಖಲು
ಸಂಗೀತ ಪ್ರಿಯರಿಗೆ ಮತ್ತು ಕನ್ನಡ ಸಿನಿ ಪ್ರಿಯರಿಗೆ ಶಾಕಿಂಗ್ ನ್ಯೂಸ್ ವೊಂದು ಸಿಕ್ಕಿದೆ. ಗ್ಯಾಸ್ಟ್ರಿಕ್ ಮತ್ತು ಕಾರ್ಡಿಯಾಕ್ ಸಮಸ್ಯೆಯಿಂದ ಬಳಲುತ್ತಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮೈಸೂರಿನ ನಿವಾಸದಲ್ಲಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಕಳೆದ ಭಾನುವಾರ ತೀವ್ರ ಎದೆ ನೋವು, ಬೆನ್ನು ನೋವು, ತಲೆ ನೋವು, ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ಅರ್ಜುನ್ ಜನ್ಯ ದಾಖಲಾದರು.

ಮೈಸೂರಿನ ಹೊರವಲಯದಲ್ಲಿ ಐಷಾರಾಮಿ ವಿಲ್ಲಾವೊಂದನ್ನು ಅರ್ಜುನ್ ಜನ್ಯ ಖರೀದಿ ಮಾಡಿದ್ದಾರೆ. ಆಗಾಗ ಮೈಸೂರಿಗೆ ಬಂದು ಹೋಗುತ್ತಿರುವ ಅರ್ಜುನ್ ಜನ್ಯ, ಕಳೆದ ಭಾನುವಾರ ಕೂಡ ಮೈಸೂರಿನ ತಮ್ಮ ವಿಲ್ಲಾದಲ್ಲಿ ತಂಗಿದ್ದರು. ಇದ್ದಕ್ಕಿದ್ದಂತೆ ಅರ್ಜುನ್ ಜನ್ಯಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಸಂಗೀತ ನಿರ್ದೇಶಕರ ಪೈಕಿ ಅರ್ಜುನ್ ಜನ್ಯ ಕೂಡ ಒಬ್ಬರು. 'ಬಿರುಗಾಳಿ', 'ಕೆಂಪೇಗೌಡ', 'ರಾಂಬೋ', 'ಅಲೆಮಾರಿ', 'ಲಕ್ಕಿ', 'ಭಜರಂಗಿ', 'ಸ್ವೀಟಿ ನನ್ ಜೋಡಿ', 'ಅಧ್ಯಕ್ಷ', 'ಮಾಣಿಕ್ಯ', 'ವಜ್ರಕಾಯ', 'ಮುಕುಂದ ಮುರಾರಿ', 'ಚಕ್ರವರ್ತಿ' ಸೇರಿದಂತೆ ಹಲವು ಹಿಟ್ ಸಿನಿಮಾಗಳಿಗೆ ಹಿಟ್ ಹಾಡುಗಳನ್ನು ನೀಡಿದ ಖ್ಯಾತಿ ಅರ್ಜುನ್ ಜನ್ಯ ಅವರಿಗೆ ಸಲ್ಲಬೇಕು.
ಸದ್ಯ 'ಕೋಟಿಗೊಬ್ಬ-3', 'ಮದಗಜ', 'ರಾಬರ್ಟ್' ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿರುವ ಅರ್ಜುನ್ ಜನ್ಯ ಖಾಸಗಿ ವಾಹಿನಿಯ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ದಾರೆ.


Click it and Unblock the Notifications











