ವಿಜಯ್ ಸೇತುಪತಿ ಸಿನಿಮಾದ ಮೇಲೆ ದೂರು ನೀಡಿದ ಇಳಯರಾಜ

ಜನಪ್ರಿಯ ಸಂಗೀತ ನಿರ್ದೇಶಕ ಇಳಯರಾಜ, ವಿಜಯ್ ಸೇತುಪತಿ ನಟಿಸುತ್ತಿರುವ ಹೊಸ ಸಿನಿಮಾ 'ಕಡೈಸಿ ವಿವಸಾಯಿ' ಸಿನಿಮಾದ ವಿರುದ್ಧ ಸಂಗೀತ ನಿರ್ದೇಶಕರ ಸಂಘಕ್ಕೆ ದೂರು ದಾಖಲಿಸಿದ್ದಾರೆ.

'ಕಡೈಸಿ ವಿವಾಸಾಯಿ' ಚಿತ್ರತಂಡವು ನನ್ನ ಗಮನಕ್ಕೆ ತರದೆ ನಾನು ನೀಡಿದ್ದ ಹಿನ್ನೆಲೆ ಸಂಗೀತವನ್ನು ಕೈಬಿಟ್ಟಿದೆ. ಅಲ್ಲದೆ ನನಗೆ ಮಾಹಿತಿ ನೀಡದೆ ಬೇರೆ ಸಂಗೀತ ನಿರ್ದೇಶಕರನ್ನು ತೆಗೆದುಕೊಂಡಿದೆ ಎಂದು ಇಳಯರಾಜ ದೂರಿದ್ದಾರೆ.

'ಕಡೈಸಿ ವಿವಸಾಯಿ' ಸಿನಿಮಾಕ್ಕೆ ಇಳಯರಾಜ ಸಂಗೀತ ನೀಡಿದ್ದರು. ಆದರೆ ಅವರು ನೀಡಿದ್ದ ಸಂಗೀತ ಸಿನಿಮಾದ ನಿರ್ದೇಶಕ ಎಂ ಮಣಿಕಂಠನ್‌ಗೆ ಇಷ್ಟವಾಗಿಲ್ಲ. ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವಂತೆ ನಿರ್ದೇಶಕ ಸೂಚಿಸಿದ್ದಾರೆ. ಆದರೆ ಇದಕ್ಕೆ ಇಳಯರಾಜ ಒಪ್ಪಿಲ್ಲ. ಹಾಗಾಗಿ ಅವರು ನೀಡಿದ ಹಿನ್ನೆಲೆ ಸಂಗೀತವನ್ನು ಕೈಬಿಟ್ಟು, ಸಂತೋಷ್ ನಾರಾಯಣ್ ಹಾಗೂ ರಿಚರ್ಡ್ ಹಾರ್ವಿ ಅವರಿಂದ ಹಿನ್ನೆಲೆ ಸಂಗೀತ ಕೊಡಿಸಿದ್ದಾರೆ. ಇದು ಇಳಯರಾಜ ಆಕ್ರೋಶಕ್ಕೆ ಕಾರಣವಾಗಿದೆ.

Music Director Ilaiyaraja Files Complaint Against Kadaisi Vivasayi Movie

'ಕಡೈಸಿ ವಿವಸಾಯಿ' ಸಿನಿಮಾವು ಕೃಷಿ ಕುರಿತ ಸಿನಿಮಾ ಆಗಿದ್ದು, ಸಿನಿಮಾವನ್ನು ಅಲಿರಾಜ ಸುಭಾಸ್ಕರನ್ ನಿರ್ಮಾಣ ಮಾಡಿದ್ದಾರೆ. ಸಿನಿಮಾದಲ್ಲಿ ನಲ್ಲಂದಿ, ಯೋಗಿ ಬಾಬು, ಮುನೀಶ್ವರನ್ ಹಾಗೂ ಇತರರು ನಟಿಸಿದ್ದಾರೆ. ಸಿನಿಮಾದಲ್ಲಿ ವಿಜಯ್ ಸೇತುಪತಿ ಸಹ ನಟಿಸಿದ್ದಾರೆ. ಸಿನಿಮಾ 2018 ರಲ್ಲಿಯೇ ಘೋಷಣೆ ಆಗಿದೆ. ಸಿನಿಮಾದ ಚಿತ್ರೀಕರಣ, ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿದಿದ್ದು, ಮುಂದಿನ ತಿಂಗಳು ಬಿಡಗುಡೆ ಆಗಲಿದೆ.

More from Filmibeat

English summary
Music director Ilaiyaraja files complaint against Kadaisi Vivasayi movie. He alleged that movie team dropped background music given by him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X