ಹರಿಕೃಷ್ಣರ ಜೊತೆ ಸ್ಪರ್ಧೆಗಿಂತ ಹೊಂದಾಣಿಕೆ ಹೆಚ್ಚು

ಚಿತ್ರ ಸಂಗೀತ ನೀಡಲು ಸಾಕಷ್ಟು ಹೋಮ್ ವರ್ಕ್ ಹಾಗೂ ವೇಳೆಯ ಅಗತ್ಯವಿದೆ. ಮಗ ಚಿಕ್ಕವನಿರುವಾಗ ನನಗೆ ಈ ಕಮಿಟ್ ಮೆಂಟ್ ಮಾಡಿಕೊಳ್ಳಲು ವೇಳೆಯ ಅಭಾವವಿತ್ತು. ಜೊತೆಗೆ ಅದಕ್ಕೆ ಬೇಕಾದ ಮಾನಸಿಕ ಸಿದ್ಧತೆಯೂ ಇರಲಿಲ್ಲ. ಆದರೆ ಈಗ ಎಲ್ಲವೂ ಕೂಡಿಬಂದಿವೆ. ಲೂಸ್ ಗಳು ಚಿತ್ರಕ್ಕೆ ಸಂಗೀತ ನೀಡಲು ಆಫರ್ ಬಂತು, ಒಪ್ಪಿಕೊಂಡೆ.
* ನಿಮ್ಮಿಬ್ಬರಲ್ಲಿ ಸ್ಪರ್ಧೆ ಹೆಚ್ಚೂ ಹೊಂದಾಣಿಕೆಯೋ?
ನಮ್ಮಿಬ್ಬರಲ್ಲಿ ವೈಯಕ್ತಿಕವಾಗಿ ಸ್ಪರ್ಧೆ ಎಂಬ ಪದಕ್ಕೆ ಸ್ಥಳವಿಲ್ಲ. ಸಮಾನ ಆಸಕ್ತಿ ಹಾಗೂ ಮನಸ್ಥಿತಿಯ ಇಬ್ಬರೂ ಈಗ ಸಂಗೀತ ನಿರ್ದೇಶನವೆಂಬ ಒಂದೇ ವೃತ್ತಿಯಲ್ಲಿ ಸಾಗುತ್ತಿದ್ದೇವೆ ಅಷ್ಟೇ. ಈ ಮೊದಲು ನಾನು ಗಾಯಕಿ ಹಾಗೂ ಅವರು ಸಂಗೀತ ನಿರ್ದೇಶಕರು ಎಂಬ ಹಣೆಪಟ್ಟಿಯಿಂದ ಸಿನಿಮಾ ಉದ್ಯಮದಲ್ಲಿ ಗುರುತಿಸಿಕೊಂಡಿದ್ದು ಬಿಟ್ಟರೆ ಬೇರೆ ವ್ಯತ್ಯಾಸವೇನಿಲ್ಲ.
ಹರಿಕೃಷ್ಣ ಅವರು ಶಾಸ್ತ್ರೀಯವಾಗಿ ಸಂಗೀತ ಕಲಿತವರಲ್ಲ. ಎಷ್ಟೂ ರಾಗಗಳ ಬಗ್ಗೆ ವಿವರಣೆಯನ್ನು ನನ್ನಿಂದ ಕೇಳಿ ತಿಳಿದುಕೊಳ್ಳುತ್ತಾರೆ. ಸಂಗೀತದ ಜ್ಞಾನ ನನಗೆ ಸಾಕಷ್ಟಿದ್ದರೂ ಸಿನಿಮಾ ಬಗ್ಗೆ ಅವರಿಂದ ಬಹಳಷ್ಟು ಕೇಳಿ ತಿಳಿದುಕೊಂಡಿದ್ದೇನೆ. ಇಬ್ಬರ ಉದ್ದೇಶವೂ ಪ್ರೇಕ್ಷಕರಿಗೆ ಉತ್ತಮ ಸಂಗೀತ ನೀಡುವುದಷ್ಟೇ. ನಮ್ಮಿಬ್ಬರಲ್ಲಿ ಸ್ಪರ್ಧೆ ಎಂಬುದು ಆ ವಿಷಯಕ್ಕೆ ಅನ್ನಬಹುದೇ ಹೊರತೂ ಬೇರೇನಿಲ್ಲ.ನಮ್ಮಿಬ್ಬರಲ್ಲಿ ಸ್ಪರ್ಧೆಗಿಂತ ಹೊಂದಾಣಿಕೆಯೇ ಹೆಚ್ಚು.
* ಲೂಸ್ ಗಳು ನಂತರ ಇನ್ಯಾವ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದೀರಿ?
ಲೂಸ್ ಗಳು ಚಿತ್ರಕ್ಕೆ ಈಗಾಗಲೇ ನಾಲ್ಕು ಹಾಡುಗಳನ್ನು ಕಂಪೋಸ್ ಮಾಡಿಯಾಗಿದೆ. ಅದು ಬಿಟ್ಟರೆ ನಾನು ಕಮಿಟ್ ಆಗಿರುವ ಆಗಿರುವ ಇನ್ನೊಂದು ಚಿತ್ರ ಮೀನಾಕ್ಷಿ. ಅದಕ್ಕೆ ರಾಗಸಂಯೋಜನೆ ಕೆಲಸ ನಡೆಯುತ್ತಿದೆ.
* ಮರೆಯಲಾರದ ಘಟನೆ...
ನಾನೀಗ ಹೇಳುವುದನ್ನು ಘಟನೆ ಅನ್ನುವುದಕ್ಕಿಂತ ಕ್ಷಣಗಳನ್ನು ಎಂದು ಹೇಳಲು ಇಷ್ಟಪಡುತ್ತೇನೆ. ದಕ್ಷಿಣ ಭಾರತದ ಖ್ಯಾತ ನಿರ್ದೇಶಕರಾದ ಇಳೆಯರಾಜಾ ಅವರೊಂದಿಗೆ ನಾನು ಕೆಲಸ ಮಾಡಿದ ಅನುಭವ ಹಾಗೂ ಅವರಿಂದ ಕಲಿತ ವಿದ್ಯೆಗಳನ್ನು ನಾನು ಎಂದೂ ಮರೆಯಲಾರೆ. ಜೊತೆಗೆ ನನಗೆ ಸಂಗೀತ ಕಲಿಸಿದ ಎಲ್ಲಾ ಗುರುಗಳನ್ನೂ ನಾನು ಯಾವತ್ತೂ ಮರೆಯಲು ಸಾಧ್ಯವೇ ಇಲ್ಲ.
* ನಿಮ್ಮ ಮುಂದಿನ ಕನಸು?
ನನಗೆ ಸರ್ವಸ್ವವೂ ಆಗಿರುವ ಸಂಗೀತದಲ್ಲಿ ಗಾಯಕಿಯಾಗಿ ಅಥವಾ ಸಂಗೀತ ನಿರ್ದೇಶಕಿಯಾಗಿ ಬರುವ ಎಲ್ಲಾ ಅವಕಾಶಗಳಿಗೆ ಸಂಪೂರ್ಣ ನ್ಯಾಯ ಒದಗಿಸುವುದೇ ನನ್ನ ಕನಸು. ಜೊತೆಗೆ ಸಂಗೀತದಲ್ಲಿ ಸಾಧ್ಯವಾದಷ್ಟೂ ಹೆಚ್ಚು ಹೆಚ್ಚು ತೊಡಗಿಸಿಕೊಂಡು ಬಹಳಷ್ಟನ್ನು ಕಲಿತು ಅದನ್ನೂ ಆದಷ್ಟು ಬಳಸಿಕೊಂಡು ಉತ್ತಮ ಸಂಗೀತವನ್ನು ಸಂಗೀತಪ್ರಿಯರಿಗೆ ಹಾಗೂ ಸಿನಿಮಾಪ್ರಿಯರಿಗೆ ನೀಡುವುದು. ಅದೇ ನನ್ನ ಗುರಿ, ಕನಸು ಎಲ್ಲವೂ...
***


Click it and Unblock the Notifications











