ಕಳಚಿತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮತ್ತೊಂದು ಕೊಂಡಿ: ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ (55) ನಿಧನ

ಸಂಗೀತ ಲೋಕದ ಮತ್ತೊಂದು ಕೊಂಡಿ ಕಳಚಿದೆ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ಅವರು ಜನವರಿ 9 ರಂದು ಕೋಲ್ಕತ್ತಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 55 ವರ್ಷದ ಉಸ್ತಾದ್ ರಶೀದ್ ಖಾನ್ ಅವರು ಪ್ರಾಸ್ಟೇಟ್ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದರು.

ಪ್ರಾಸ್ಟೇಟ್ ಕ್ಯಾನ್ಸರ್ ಖಾಯಿಲೆಯಿಂದ ಕೋಲ್ಕತ್ತಾ ಮೂಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಗೀತ ಮಾಂತ್ರಿಕ ಉಸ್ತಾದ್ ರಶೀದ್ ಖಾನ್ ಚಿಕಿತ್ಸೆ ಫಲಕಾರಿಯಾಗದೇ, ಜನವರಿ 9 ರಂದು ಸುಮಾರು 3:45 ಗಂಟೆಗೆ ನಿಧನರಾಗಿದ್ದಾರೆ. ರಶೀದ್ ಖಾನ್ ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ.

Music maestro Ustad Rashid Khan (55) passes away after battling cancer for over 4 years

ಕ್ಯಾನ್ಸರ್ ವಿರುದ್ಧ ಹೋರಾಡಿ ಹಾಡು ನಿಲ್ಲಿಸಿದ ಗಾಯಕ

ರಾಂಪುರ ಸಹಸ್ವಾನ್ ಗಾಯಕಿಯ ಕೊನೆಯ ಜೀವಂತ ದಂತಕಥೆ (ಹಾಡುವಿಕೆಯ ಶೈಲಿ), ರಶೀದ್ ಖಾನ್ ಅವರು ತಮ್ಮ ಅಧಿಕೃತ ವೆಬ್‌ಸೈಟ್‌ನಲ್ಲಿ ವಿವರಿಸಿದಂತೆ ಸಂಗೀತ ಸಾಮ್ರಾಟ್ ಮಿಯಾನ್ ತಾನ್ಸೆನ್ ಅವರ 31 ನೇ ತಲೆಮಾರಿನವರು. 'ವಿಲಂಬಿತ್ ಖಯಾಲ್' ಗಾಯನದಲ್ಲಿನ ಪಾಂಡಿತ್ಯಕ್ಕೆ ಹೆಸರುವಾಸಿಯಾದ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಲಕ್ಷಾಂತರ ಹಿಂದೂಸ್ತಾನಿ ಗಾಯನ ಶಾಸ್ತ್ರೀಯ ಸಂಗೀತ ಪ್ರೇಮಿಗಳನ್ನು ರಂಜಿಸಿದ್ದರು. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಹಾಡು ನಿಲ್ಲಿಸಿದ್ದಾರೆ.

ರಶೀದ್ ಖಾನ್ ಬಾಲ್ಯ ಮತ್ತು ಜೀವನ

ಉತ್ತರ ಪ್ರದೇಶದ ಬದಯೂನ್‌ನಲ್ಲಿ ಜನಿಸಿದ ರಶೀದ್ ಖಾನ್ ಅವರ ಆರಂಭಿಕ ತರಬೇತಿ ಅವರ ಅಜ್ಜ ಉಸ್ತಾದ್ ನಿಸ್ಸಾರ್ ಹುಸೇನ್ ಖಾನ್ ಅವರಿಂದ ಪ್ರಾರಂಭವಾಗಿತ್ತು. ಏಪ್ರಿಲ್ 1980 ರಲ್ಲಿ, ನಿಸ್ಸಾರ್ ಹುಸೇನ್ ಖಾನ್ ತನ್ನ ಅಜ್ಜನೊಂದಿಗೆ 10 ನೇ ವಯಸ್ಸಿನಲ್ಲಿ ಕೋಲ್ಕತ್ತಾಗೆ ಸ್ಥಳಾಂತರಗೊಂಡರು.

Music maestro Ustad Rashid Khan (55) passes away after battling cancer for over 4 years

ಕೇವಲ 11 ವರ್ಷದವರಾಗಿದ್ದಾಗಲೇ ಸಂಗೀತ ಕಛೇರಿ ನಡೆಸಿದ ಕೀರ್ತಿ ಅವರದ್ದು, 1994 ರ ಹೊತ್ತಿಗೆ ಅವರು ಸಂಗೀತಗಾರರಾಗಿ ಮನ್ನಣೆ ಗಳಿಸಿದ್ದರು. ಬಾಲ್ಯದಿಂದಲೂ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಿಂದ ಆಳವಾಗಿ ಪ್ರಭಾವಿತರಾದ ರಶೀದ್ ಖಾನ್ ಅವರು ತಮ್ಮ ಅಜ್ಜ ಇನಾಯತ್ ಹುಸೇನ್ ಖಾನ್ ಅವರ ಮಾರ್ಗದರ್ಶನದಲ್ಲಿ ಸಂಗೀತ ಪಾಠಗಳನ್ನು ಪ್ರಾರಂಭಿಸಿದರು.

ಸಂಗೀತ ಕ್ಷೇತ್ರದಲ್ಲಿ, ರಾಂಪುರ-ಸಹಸ್ವಾನ್ ಗಾಯಕಿ ಗ್ವಾಲಿಯರ್ ಘರಾನಾ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ಉಸ್ತಾದ್ ಅಮೀರ್ ಖಾನ್ ಮತ್ತು ಪಂಡಿತ್ ಭೀಮಸೇನ್ ಜೋಶಿಯಂತಹ ಮೇಷ್ಟ್ರುಗಳಿಂದ ಆಳವಾಗಿ ಪ್ರಭಾವಿತರಾಗಿದ್ದಾರೆ. ಅವರ ಗುರು ನಿಸ್ಸಾರ್ ಹುಸೇನ್ ಅವರಂತೆ ತರಾನಾ ಕಲೆಯಲ್ಲಿ ಪ್ರವೀಣರಾದ ಅವರು ತಮ್ಮ ನಿರೂಪಣೆಯನ್ನು ವಿಶಿಷ್ಟವಾದ ವೈಯಕ್ತಿಕ ಸ್ಪರ್ಶ ತುಂಬಿದರು.

ಹಿಂದೂಸ್ತಾನಿ ಗಾಯನದಲ್ಲಿ ಮಿಂಚುತ್ತಿರುವಾಗಲೇ, ರಶೀದ್ ಖಾನ್ ಹಿನ್ನೆಲೆ ಸಂಗೀತದಲ್ಲಿ ತಮ್ಮ ಪ್ರಾವೀಣ್ಯತೆಯನ್ನು ಪ್ರದರ್ಶಿಸಿದ್ದಾರೆ. ಬಾಲಿವುಡ್ ಸಿನಿಮಾಗಳಾದ "ಮೈ ನೇಮ್ ಈಸ್ ಖಾನ್," "ಜಬ್ ವಿ ಮೆಟ್," "ಇಸಾಕ್," "ಮಂಟೋ," "ಮೌಸಮ್," "ಬಾಪಿ ಬಾರಿ ಜಾ", "ಕಾದಂಬರಿ," ಮತ್ತು "ಮಿತಿನ್ ಮಾಸಿನಂತಹ ಬ್ಲಾಕ್‌ಬಸ್ಟರ್‌ ಸಿನಿಮಾಗಳಿಗೆ ಕೊಡುಗೆ ನೀಡಿದ್ದಾರೆ.

ರಶೀದ್ ಖಾನ್ ಅವರು, ಸೂಫಿಯಂತಹ ಪ್ರಕಾರಗಳೊಂದಿಗೆ ಹಿಂದೂಸ್ತಾನಿ ಗಾಯನವನ್ನು ಸಂಯೋಜಿಸಿ ಹೊಸ ಶೈಲಿಯ ಸಂಗೀತಕ್ಕೆ ನಾಂದಿ ಹಾಡಿದವರು ಪಾಶ್ಚಿಮಾತ್ಯ ವಾದ್ಯಗಾರರ ಐಕಾನ್ ಲೂಯಿಸ್ ಬ್ಯಾಂಕ್ಸ್‌ ಜೊತೆಗೆ ಕೆಲಸ ಮಾಡಿದ್ದರು. ಖ್ಯಾತ ಸಿತಾರ್ ಕಲಾವಿದ ಶಾಹಿದ್ ಪರ್ವೇಜ್ ಅವರೊಂದಿಗೆ 'ಜುಗಲ್ಬಂದಿ' ಮಾಡಿದ್ದರು.

ನೂರಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ರಶೀದ್ ಖಾನ್ ಅವರಿಗೆ ಪದ್ಮಶ್ರೀ ಮತ್ತು ಪದ್ಮಭೂಷಣ ಪ್ರಶಸ್ತಿಗಳಲ್ಲದೆ, 2012 ರಲ್ಲಿ ಪಶ್ಚಿಮ ಬಂಗಾಳ ಸರ್ಕಾರದ ರಾಜ್ಯ ಗೌರವವಾದ ಬಂಗಭೂಷಣವನ್ನು ನೀಡಿ ಗೌರವಿಸಿದೆ.

More from Filmibeat

English summary
Music maestro Ustad Rashid Khan dies at 55.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X