»   » ಧ್ವನಿಸುರುಳಿ ವಿಮರ್ಶೆ: ಸಿಂಪಲ್ ಆಗಿ ಇನ್ನೊಂದ್ ಲವ್ ಸ್ಟೋರಿ

ಧ್ವನಿಸುರುಳಿ ವಿಮರ್ಶೆ: ಸಿಂಪಲ್ ಆಗಿ ಇನ್ನೊಂದ್ ಲವ್ ಸ್ಟೋರಿ

By: ರಾಘವೇಂದ್ರ ಸಿ ವಿ
Subscribe to Filmibeat Kannada

'ಸಿಂಪಲ್ ಆಗಿ ಒಂದು ಲವ್ ಸ್ಟೋರಿ'ಯಲ್ಲಿ ಒನ್ ಸೆಕೆಂಡ್ ಸ್ವರ್ಗ ತೋರಿಸಿದ ನಂತರ 'ಬಹುಪರಾಕ್ ' ಹೇಳಿದ ಸಿಂಪಲ್ ಸುನಿ ಇದೀಗ ಸಿಂಪಲ್ ಆಗಿ ಇನ್ನೊಂದ್ ಲವ್ ಸ್ಟೋರಿ ಹೇಳಲು ಹೊರಟಿದ್ದಾರೆ .

ಪ್ರವೀಣ್ ಮತ್ತು ಮೇಘನಾ ಗಾಂವ್ಕರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದ ಹಾಡುಗಳು ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು ಕೇಳುಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಅಂದಹಾಗೆ ಈ ಚಿತ್ರಕ್ಕೆ ಇಬ್ಬರು ಸಂಗೀತ ನಿರ್ದೇಶಕರು ಭರತ್ ಬಿ ಜೆ ಮತ್ತು ಸಾಯಿ ಕಿರಣ್ ಸಂಗೀತ ಸಂಯೋಜಿಸಿರುವುದು ವಿಶೇಷ. ಮೊದಲ ಬಾರಿಗೆ ಆಶುಬೆದ್ರ ಚಿತ್ರಕ್ಕೆ ಹಣ ಹೂಡಿದ್ದಾರೆ. ಲಹರಿ ಆಡಿಯೋ ಸಂಸ್ಥೆ ಮೂಲಕ ಹಾಡುಗಳು ಹೊರಬಂದಿವೆ.

ಚಿತ್ರದ ಆಲ್ಬಂನಲ್ಲಿ ಒಟ್ಟು ಏಳು (ಒಂದು ರಿಮಿಕ್ಸ್) ಹಾಡುಗಳಿವೆ, ಅದರಲ್ಲಿ ನಮ್ಮ ಆಯ್ಕೆ 1, 2 ಮತ್ತು 4ನೇ ಹಾಡು.

ಸೇವಂತಿಗೆ ಚೆಂಡಿನಂತ
ಕ್ಲಾಸಿಕಾಲ್ ಮತ್ತು ಪಾಶ್ಚಾತ್ಯ ಸಂಗೀತ ಮಿಶ್ರಿತ ಈ ಗೀತೆಯನ್ನು ಭರತ್ ಬಿ ಜೆ ಸಂಯೋಜಿಸಿದ್ದು ಉದಯೋನ್ಮುಖ ಗೀತಸಾಹಿತಿ ಪ್ರಮೋದ್ ಗಣೇಶ್ ಈ ಹಾಡನ್ನು ರಚಿಸಿದ್ದಾರೆ ಹಾಗೇ ಶಶಾಂಕ್ ಶೇಷಗಿರಿ ಮತ್ತು ಮಾನಸ ಹೊಳ್ಳ ಈ ಹಾಡಿಗೆ ದನಿಗೂಡಿಸಿದ್ದಾರೆ. ನಾಯಕ, ನಾಯಕಿಯ ಹಾವಭಾವಗಳ ಪರಿಚಯಿಸುವ ಗೀತೆ ಇದಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ಕಿಸಿ..

ಎಲ್ಲೂ ಮಾರದ ಹೃದಯ

ಬಿ ಜೆ ಭರತ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡು ಮಾಧುರ್ಯ ಪ್ರಧಾನವಾಗಿದ್ದು ಸ್ವತಃ ನಿರ್ದೇಶಕ ಸುನಿ ಪದ ಪೋಣಿಸಿರುವ ಈ ಗೀತೆಗೆ ಚೇತನ್ ಗಂಧರ್ವ ದನಿ ಗೂಡಿಸಿದ್ದಾರೆ . ಈ ಹಾಡು ನಾಯಕ ತನ್ನ ಪ್ರೀತಿಯನ್ನು ನಾಯಕಿಗೆ ವ್ಯಕ್ತಪಡಿಸುವಂತದ್ದಾಗಿದೆ, ಅಲ್ಲದೇ ಈ ಗೀತೆ ಈಗಾಗಲೇ ಕೇಳುಗರ ಪ್ಲೇ ಲಿಸ್ಟ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ.

ತುಸು ಪ್ರೀತಿಯ

ಭಾರತದ ಬಹುಬೇಡಿಕೆಯ ಇತ್ತೀಚಿಗೆ ಕನ್ನಡದ ಕೇಳುಗರಿಗೆ ಆಪ್ತ ಗಾಯಕರಾಗಿರುವ ಸೋನು ನಿಗಮ್ ಮತ್ತು ಪಲಕ್ ಮಚ್ಹಲ್ ಹಾಡಿರುವ ಈ ಗೀತೆಯನ್ನು ಈ ಚಿತ್ರದ ಮತ್ತೋರ್ವ ಸಂಗೀತ ನಿರ್ದೇಶಕ ಸಾಯಿ ಕಿರಣ್ ಸಂಯೋಜಿಸಿದ್ದಾರೆ. ಈ ಚಿತ್ರದ ಮತ್ತೊಂದು ಮಾಧುರ್ಯ ಪ್ರಧಾನ ಯುಗಳ ಗೀತೆ ಇದಾಗಿದೆ.

ನಾನೇ ಬರೆದ ನನ್ನ ಕಥೆಗೆ

ನಿರ್ದೇಶಕ ಸುನಿ ಬರೆದಿರುವ ಈ ಹಾಡು ಚಿತ್ರದ ಒಂದು ವಿರಹ ಗೀತೆ. ಕಳೆದು ಹೋದ ಪ್ರೀತಿಯ ಮೇಲಿರುವ ಈ ಹಾಡನ್ನು ಕನ್ನಡದ ಖ್ಯಾತ ಗಾಯಕರಾದ ರಾಜೇಶ್ ಕೃಷ್ಣನ್ ಮತ್ತು ಅನುರಾಧ ಭಟ್ ಹಾಡಿದ್ದು ಸಾಯಿ ಕಿರಣ್ ಅವರ ಸಂಯೋಜನೆ ಇದೆ.

ಸಿಂಪಲ್ ಆಗಿ ಇನ್ನೊಂದ್ ಲವ್ ಸ್ಟೋರಿ

ಸಂಗೀತ ನಿರ್ದೇಶಕ ಬಿ ಜೆ ಭರತ್ ಪಾಶ್ಚಾತ್ಯ ಸಂಗೀತ ವಾದ್ಯಗಳನ್ನು ಅಳವಡಿಸಿಕೊಂಡು ತಯಾರಿಸಿರುವ ಈ ಚಿತ್ರದಲ್ಲಿ ಸಿಂಪಲ್ ಆಗಿರುವ ಶೀರ್ಷಿಕೆ ಗೀತೆ. ಇದನ್ನು ಸ್ವತಃ ಭರತ್ ಅವರೇ ಹಾಡಿದ್ದಾರೆ. ಹಾಡಿಗೆ ಸುನಿ ಅವರ ಸಾಹಿತ್ಯವಿದೆ.

ನಾನೇ ಬರೆದ ನನ್ನ ಕಥೆಗೆ

ಇದು ಅನುರಾಧ ಭಟ್ ಜೊತೆ ಅರವಿಂದ್ ಎಂಬ ಹೊಸ ಗಾಯಕ ಹಾಡಿರುವ ಇನ್ನೊಂದು ವರ್ಶನ್ ಹಾಡು. ಈ ಹಾಡನ್ನು ಸಾಯಿ ಕಿರಣ್ ಸಂಯೋಜಿಸಿದ್ದಾರೆ. ಸುನಿ ಅವರ ಸಾಹಿತ್ಯವಿದೆ.

ಎಲ್ಲೂ ಮಾರದ ಹೃದಯ ( ರಿಮಿಕ್ಸ್ )

ಈ ಗೀತೆ ಎಲ್ಲೂ ಮಾರದ ಹೃದಯ ಹಾಡಿನ ರಿಮಿಕ್ಸ್ ವರ್ಶನ್. ಸಂಗೀತ ನೀಡಿದವರು ಭರತ್.

English summary
Music review of Simple Suni directed Simpallagi Innondu Love Story. Bharath B J and Sai Kiran has composed the music for this movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada