For Quick Alerts
  ALLOW NOTIFICATIONS  
  For Daily Alerts

  ಅಬ್ದುಲ್ ಆಗಿ ಬದಲಾದ ಯುವನ್ ಶಂಕರ್ ರಾಜ

  By ಜೇಮ್ಸ್ ಮಾರ್ಟಿನ್
  |

  ಭಾರತದ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಪುತ್ರ ಸಂಗೀತಗಾರ ಯುವನ್ ಶಂಕರ್ ರಾಜ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. 35 ವರ್ಷ ವಯಸ್ಸಿನ ಯುವನ್ ಶಂಕರ್ ರಾಜ ಈ ಹಿಂದೆ ಸಾಮಾಜಿಕ ಜಾಲ ತಾಣದಲ್ಲಿ ಮತಾಂತರಗೊಳ್ಳುವ ಬಗ್ಗೆ ಘೋಷಿಸಿದ್ದರು. ಈಗ ಇಸ್ಲಾಂ ಧರ್ಮವನ್ನು ಒಪ್ಪಿಕೊಂಡಿರುವ ಯುವನ್ ಅವರ ಹೆಸರು ಅಬ್ದುಲ್ ಹಲೀಕ್ ಎಂದು ಬದಲಾಗಿದೆ.

  ಇತ್ತೀಚೆಗೆ ರಾಮ್ ಚರಣ್ ತೇಜ, ಕಾಜಲ್ ಅಗರವಾಲ್ ಅಭಿನಯದ ಗೋವಿಂದುಡು ಅಂದರಿವಾಡೆಲೆ ಚಿತ್ರಕ್ಕೆ ಯುವನ್ ನೀಡಿರುವ ಸಂಗೀತ ಜನಮೆಚ್ಚುಗೆ ಗಳಿಸಿದೆ. [ಸಾವಿರ ಚಿತ್ರಗಳ ಸರದಾರ ಇಳಯರಾಜ]

  ಈಗ ಇಸ್ಲಾಂಗೆ ಮತಾಂತರಗೊಂಡಿರುವ ಯುವನ್ ಅವರು ಇನ್ಮುಂದೆ ತಮ್ಮ ಹೆಸರನ್ನು ಚಿತ್ರಗಳ ಟೈಟಲ್ ಕಾರ್ಡ್ ನಲ್ಲಿ ಅಬ್ದುಲ್ ಹಲೀಕ್ ಎಂದೇ ಬಳಸಲಿದ್ದಾರಂತೆ. ಸೂರ್ಯ ಅವರ ಮುಂಬರುವ ಚಿತ್ರ 'ಮಾಸ್' ನಲ್ಲಿ ಯುವನ್ ಹೆಸರು ಅಬ್ದುಲ್ ಹಲೀಕ್ ಎಂದೇ ಕಾಣಿಸಿಕೊಳ್ಳಲಿದೆ. [ಇಳಯರಾಜಗೆ ಪತ್ನಿ ವಿಯೋಗ]

  ಇಳಯರಾಜರಿಂದ ಒಪ್ಪಿಗೆ ಸಿಕ್ಕಿತೇ?

  ಇಳಯರಾಜರಿಂದ ಒಪ್ಪಿಗೆ ಸಿಕ್ಕಿತೇ?

  ನಾನು ಇಸ್ಲಾಂ ಧರ್ಮದ ಹಿಂಬಾಲಕನಾಗಿದ್ದು, ಅದಕ್ಕಾಗಿ ನನಗೆ ಹೆಮ್ಮೆಯಿದೆ ಎಂದು ಬರೆದು ಕೊಂಡಿದ್ದಾರೆ. ಈ ವಿಚಾರದಲ್ಲಿ ನನ್ನ ಮತ್ತು ನನ್ನ ತಂದೆಯ ನಡುವೆ ಭಿನ್ನಾಬಿಪ್ರಾಯವಿಲ್ಲ ಎಂದು ಯುವನ್ ಶಂಕರ್ ರಾಜ್ ಹೇಳಿದ್ದರು.

  ಇಳಯರಾಜರಿಂದ ಒಪ್ಪಿಗೆ ಸಿಕ್ಕಿತೇ?

  ಇಳಯರಾಜರಿಂದ ಒಪ್ಪಿಗೆ ಸಿಕ್ಕಿತೇ?

  ನಾನು ಇಸ್ಲಾಂ ಧರ್ಮದ ಹಿಂಬಾಲಕನಾಗಿದ್ದು, ಅದಕ್ಕಾಗಿ ನನಗೆ ಹೆಮ್ಮೆಯಿದೆ ಎಂದು ಬರೆದು ಕೊಂಡಿದ್ದಾರೆ. ಈ ವಿಚಾರದಲ್ಲಿ ನನ್ನ ಮತ್ತು ನನ್ನ ತಂದೆಯ ನಡುವೆ ಭಿನ್ನಾಬಿಪ್ರಾಯವಿಲ್ಲ ಎಂದು ಯುವನ್ ಶಂಕರ್ ರಾಜ್ ಹೇಳಿದ್ದರು.

  ಟ್ವಿಟ್ಟರ್ ನಿಂದ ಹೊರಬಿದ್ದ ಯುವನ್ ರಾಜ

  ಟ್ವಿಟ್ಟರ್ ನಿಂದ ಹೊರಬಿದ್ದ ಯುವನ್ ರಾಜ

  ಯುವನ್ I follow Islam and I'm proud about it. Alhamdhulillah ಎಂದು ಟ್ವೀಟ್ ಮಾಡಿ ಅಭಿಮಾನಿಗಳನ್ನು ಇನ್ನಷ್ಟು ಕೆರಳಿಸಿತ್ತು

  ಶಂಕರ್ ರಾಜ ಅವರು ಅಭಿಮಾನಿಗಳ ಕೋಪಕ್ಕೆ ತುತ್ತಾಗಿದ್ದಾರೆ. ಅಭಿಮಾನಿಗಳ ಚುಚ್ಚು ನುಡಿಗೆ, ಖಾರವಾದ ಪ್ರತಿಕ್ರಿಯೆಗೆ ಬೇಸತ್ತು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಖಾತೆಯನ್ನು ಶಂಕರ್ ರಾಜ ನಿಷ್ಕ್ರಿಯಗೊಳಿಸಿದ್ದಾರೆ.

  ಪ್ರತಿ ದಿನ ನಮಾಜ್ ಮಾಡುವ ಯುವನ್

  ಪ್ರತಿ ದಿನ ನಮಾಜ್ ಮಾಡುವ ಯುವನ್

  ಕಳೆದ ಒಂದು ವರ್ಷದಿಂದ ಕಟ್ಟಾ ಇಸ್ಲಾಂ ಧರ್ಮ ಪಾಲಕ ನಂತೆ ದಿನಕ್ಕೆ ಐದು ಬಾರಿ ನಮಾಜು ಮಾಡಿ ಅಲ್ಲಾಹ್ ನನ್ನು ಪ್ರಾರ್ಥಿಸುತ್ತಿದ್ದ ಯುವನ್ ಶಂಕರ್ ರಾಜ ಅವರಿಗೆ ಕಾಲಿವುಡ್ ನ ಕೆಲವು ನಟರ ಸಹಕಾರ ಕೂಡಾ ಸಿಕ್ಕಿತ್ತು.

  ಇಸ್ಲಾಂ ಧರ್ಮವನ್ನು ಪಾಲಿಸುತ್ತಾ ಬಂದಿರುವ ಯುವನ್ ಅವರು ಮತಾಂತರಗೊಳ್ಳುವುದು ಒಂದು ಕೊನೆ ಪ್ರಕ್ರಿಯೆಯಷ್ಟೇ ಈಗಾಗಲೇ ಮನಸ್ಸು, ಆಚರಣೆಯಲ್ಲಿ ಇಸ್ಲಾಂ ತನವನ್ನು ಮೈಗೂಡಿಸಿಕೊಂಡಿದ್ದಾರೆ

  ಯುವನ್ ಶಂಕರಿಗೆ ರೆಹಮಾನ್ ಪ್ರೇರಣೆ?

  ಯುವನ್ ಶಂಕರಿಗೆ ರೆಹಮಾನ್ ಪ್ರೇರಣೆ?

  ಆಸ್ಕರ್ ಪ್ರಶಸ್ತಿ ವಿಜೇತ, ಖ್ಯಾತ ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರು ಯುವನ್ ಶಂಕರ್ ರಾಜ ಹಿಂದೂ ಧರ್ಮದಿಂದ ಇಸ್ಲಾಂಗೆ ಮತಾಂತರಗೊಳ್ಳಲು ಪ್ರೇರಣೆಯಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅದರೆ, ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ಇಬ್ಬರಿಂದ ಬಂದಿಲ್ಲ. ಸಂಗೀತಗಾರ ದಿಲೀಪ್ ಕುಮಾರ್ ಆಗಿದ್ದವರು ಈಗ ರೆಹಮಾನ್ ಆಗಿ ಬದಲಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಅದರೆ, ರೆಹಮಾನ್ ಅಕ್ಕನ ಮಕ್ಕಳು(ಜಿವಿ ಪ್ರಕಾಶ್) ಹಿಂದೂ ಧರ್ಮವನ್ನೇ ಪಾಲಿಸುತ್ತಿದ್ದಾರೆ.

  ಮತಾಂತರಗೊಳ್ಳಲು ಕಾರಣವೇನು?

  ಮತಾಂತರಗೊಳ್ಳಲು ಕಾರಣವೇನು?

  ಕನ್ನಡ ಸೇರಿದಂತೆ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನೀಡಿರುವ ಯುವನ್ ಶಂಕರ್ ರಾಜ, ತನ್ನ ತಾಯಿ ಅಕ್ಟೋಬರ್ 2011ರಲ್ಲಿ ನಿಧನ ಹೊಂದಿದ ನಂತರ ಸ್ವಲ್ಪ ಮಟ್ಟಿನ ಖಿನ್ನತೆಯಿಂದ ಬಳಲುತ್ತಿದ್ದರು.

  ಈ ಸಮಯದಲ್ಲಿ ಇಸ್ಲಾಂ ಧಾರ್ಮಿಕ ಮುಖಂಡರನ್ನು ಭೇಟಿಯಾಗಿದ್ದಾರೆ. ಇಸ್ಲಾಂ ಧರ್ಮದಿಂದ ಮನಕ್ಕೆ ಶಾಂತಿ ಸಿಗುವ ಭರವಸೆ ಸಿಕ್ಕಿದ್ದರಿಂದ ಯುವನ್ ಶಂಕರ್ ರಾಜ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವ ನಿರ್ಧಾರಕ್ಕೆ ಬಂದರು ಎನ್ನಲಾಗಿದೆ.
  English summary
  Predominant South Indian Music director Illaiyaraaja's son Yuvan Shankar Raja has officially converted to Islam religion a few days ago.Yuvan has now changed his name to Abdul Haliq, which will be used in forthcoming Maass starring Suriya.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X