ಅಮ್ಮಂದಿರಿಗಾಗಿ ಅನುರಾಧ ಭಟ್ ಹಾಡಿರುವ ಹೊಸ ಹಾಡು ಕೇಳಿ

By Bharath Kumar

ಖ್ಯಾತ ಗಾಯಕಿ ಅನುರಾಧ ಭಟ್ ಹಾಡಿರುವ 'ಅಪ್ಪ ಐ ಲವ್ ಯೂ' ಹಾಡು ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲಾಗಿದೆ. ಅಪ್ಪನ ಕುರಿತು ಮೂಡಿ ಬಂದಿದ್ದ ಈ ಹಾಡು ಎಲ್ಲ ಅಪ್ಪಂದಿರಿಗೂ ಅರ್ಪಣೆ ಮಾಡಲಾಗಿತ್ತು.

ಇದೀಗ 'ಅಸತೋಮ ಸದ್ಗಮಯ' ಚಿತ್ರತಂಡ ಎಲ್ಲ ಅಮ್ಮಂದಿರಿಗಾಗಿ ಒಂದು ವಿಶೇಷವಾದ ಹಾಡನ್ನ ಅರ್ಪಣೆ ಮಾಡಿದೆ. ಈ ಹಾಡನ್ನ ಕೂಡ ಅನುರಾಧ ಭಟ್ ಅವರೇ ಹಾಡಿರುವುದು ವಿಶೇಷ. ಸದ್ಯ, ಈ ಹಾಡಿನ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆಯಾಗಿದ್ದು, ಕೇಳುಗರ ಮೆಚ್ಚುಗೆಗೆ ಪಾತ್ರವಾಗಿದೆ.

ವಹಾಬ್ ಸಲೀಂ ಅವರು ಬರೆದಿರುವ ''ನಾ ತೆರೆದೆ....ತುಂಬಾ ಹಳೆಯ ಪುಟವಾ....''ಎಂಬ ಸಾಲುಗಳು ಈಗ ಸಂಗೀತ ಪ್ರಿಯರ ಕಿವಿಯಲ್ಲಿ ಗುನುಗುತ್ತಿದೆ. ಈ ಅರ್ಥಪೂರ್ಣ ಸಾಲುಗಳಿಗೆ ಗಾಯಕಿ ಅನುರಾಧ ಭಟ್ ಅವರು ಅಷ್ಟೇ ಮುದ್ದಾಗಿ ಜೀವ ತುಂಬಿದ್ದಾರೆ.

Na Therede song from Asathoma Sadgamaya movie

ಅಂದ್ಹಾಗೆ, ಇದು ತಾಯಿ ಮಮತೆ, ಪ್ರೀತಿ, ಆರೈಕೆಯ ಬಗ್ಗೆ ಮೂಡಿಬಂದಿರುವ ಹಾಡು. ಈ ಹಾಡಿಗೆ ಸಾಹಿತ್ಯ ಬರೆದಿರುವ ವಹಾಬ್ ಸಲೀಂ ಅವರೇ ಸಂಗೀತ ಒದಗಿಸಿದ್ದಾರೆ.

ಇನ್ನುಳಿದಂತೆ ರಾಧಿಕಾ ಚೇತನ್, ಕಿರಣ್ ರಾಜ್, 'ಬಿಗ್ ಬಾಸ್' ಖ್ಯಾತಿಯ ಲಾಸ್ಯ, 'ಡ್ರಾಮಾ ಜೂನಿಯರ್ಸ್' ಖ್ಯಾತಿ ಚಿತ್ರಾಲಿ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ರಾಜೇಶ್ ವೇಣೂರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಅಶ್ವಿನ್ ಜೆ ಪಿರೇರಾ ಬಂಡವಾಳ ಹೂಡಿದ್ದಾರೆ. ಕಿಶೋರ್ ಕುಮಾರ್ ಅವರ ಛಾಯಾಗ್ರಾಹಣ ಹಾಗೂ ರವಿಚಂದ್ರನ್ ಅವರ ಸಂಕಲನ ಚಿತ್ರಕ್ಕಿದೆ. ಜೂನ್ 6 ರಂದು 'ಅಸತೋಮ ಸದ್ಗಮಯ' ಸಿನಿಮಾ ರಾಜ್ಯಾದ್ಯಂತ ತೆರೆಕಾಣುತ್ತಿದೆ.

More from Filmibeat

English summary
Here goes the 'Na Therede...' lyrical video from Asathoma Sadgamaya movie. Sung by anuradha bhat. and this song Dedicated to all mothers. Movie releasing on July 6th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X