For Quick Alerts
  ALLOW NOTIFICATIONS  
  For Daily Alerts

  ಖ್ಯಾತ ಗಾಯಕ ಲಕ್ಕಿ ಅಲಿ ಸಾವಿನ ವದಂತಿ ತಳ್ಳಿಹಾಕಿ ಸತ್ಯ ಬಿಚ್ಚಿಟ್ಟ ಸ್ನೇಹಿತೆ

  |

  ಬಾಲಿವುಡ್ ನ ಖ್ಯಾತ ಗಾಯಕ ಲಕ್ಕಿ ಸಾವಿನ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೋವಿಡ್ ನಿಂದ ಖ್ಯಾತ ಗಾಯಕ ಲಕ್ಕಿ ಅಲಿ ನಿಧನ ಹೊಂದಿದ್ದಾರೆ ಎಂದು ಬಹುತೇಕರು ಅಂದುಕೊಂಡಿದ್ದಾರೆ. ಈ ಸುದ್ದಿ ಹಬ್ಬುತ್ತಿದ್ದಂತೆ ಅನೇಕರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ಸೂಚಿಸಲು ಪ್ರಾರಂಭಿಸಿದ್ದಾರೆ.

  ಖ್ಯಾತ ಗಾಯಕನ ಬಗ್ಗೆ ಎಲ್ಲರೂ ಭಾವುಕ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ. ಸಾವಿನ ಸುದ್ದಿ ವೈರಲ್ ಆಗುತ್ತಿದ್ದಂತೆ ಸ್ನೇಹಿತೆ ಮತ್ತು ನಟಿ ನಫಿಸಾ ಅಲಿ ಟ್ವೀಟ್ ಮಾಡಿ ವದಂತಿಯನ್ನು ತಳ್ಳಿಹಾಕಿದ್ದಾರೆ. ಲಕ್ಕಿ ಅಲಿ ಆರೋಗ್ಯವಾಗಿದ್ದಾರೆ ಎಂದು ಹೇಳಿದ್ದಾರೆ.

  ನಟಿ ದೀಪಿಕಾ ಪಡುಕೋಣೆಗೂ ಕೊರೊನಾ: ಇಡೀ ಕುಟುಂಬಕ್ಕೆ ತಗುಲಿದ ಸೋಂಕು?ನಟಿ ದೀಪಿಕಾ ಪಡುಕೋಣೆಗೂ ಕೊರೊನಾ: ಇಡೀ ಕುಟುಂಬಕ್ಕೆ ತಗುಲಿದ ಸೋಂಕು?

  ಲಕ್ಕಿ ಅಲಿಗೆ ಕೊರೊನಾ ಬಂದಿಲ್ಲ, ಆರೋಗ್ಯವಾಗಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಟ್ವೀಟ್ ಮಾಡಿರುವ ನಫಿಸಾ, 'ಲಕ್ಕಿ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಇಂದು ಮಧ್ಯಾಹ್ನ ಅವರ ಜೊತೆ ಮಾತನಾಡಿದ್ದೇವೆ. ಅವರು ಕುಟುಂಬದೊಂದಿಗೆ ಫಾರ್ಮ್ ಹೌಸ್ ನಲ್ಲಿದ್ದಾರೆ. ಅವರಿಗೆ ಕೊರೊನಾ ಬಂದಿಲ್ಲ' ಎಂದು ಹೇಳುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸುದ್ದಿ ಬ್ರೇಕ್ ಹಾಕಿದ್ದಾರೆ.

  ಲಕ್ಕಿ ಅಲಿ ಸದ್ಯ ಬೆಂಗಳೂರಿನಲ್ಲಿದ್ದಾರೆ. ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ನಫಿಸಾ, ನಾನು ಇಂದು ಎರಡು ಮೂರು ಬಾರಿ ಲಕ್ಕಿ ಜೊತ ಮಾತನಾಡಿದ್ದೇನೆ. ಅವರಿಗೆ ಕೋವಿಡ್ ಇಲ್ಲ. ಅವರು ಸಂಗೀತ ಮತ್ತು ಬೇರೆ ಬೇರೆ ಯೋಜನೆಗಳಲ್ಲಿ ಬ್ಯುಸಿಯಾಗಿದ್ದಾರೆ. ವರ್ಚುಲ್ ಸಂಗೀತ ಕಛೇರಿಗಳ ಬಗ್ಗೆ ಮಾತನಾಡುತ್ತದ್ದೇವೆ' ಎಂದಿದ್ದಾರೆ.

  90ರ ದಶಕದಲ್ಲಿ ಪಾಪ್ ಸ್ಟಾರ್ ಆಗಿ ಗುರುತಿಸಿಕೊಂಡಿದ್ದ ಲಿಕ್ಕಿ ಅಲಿ ಕಳೆದ ಅವರ ಅವರ ವಿಡಿಯೋ ವೈರಲ್ ಆದ ಬಳಿಕ ಎಲ್ಲರಿಗೂ ಚಿರಪರಿಚರಾಗಿದ್ದರು. ಬಾಲಿವುಡ್ ನ ಪ್ರಸಿದ್ಧ ಸಿನಿಮಾಗಳಿಗೆ ಲಕ್ಕಿ ಅಲಿ ಧ್ವನಿ ನೀಡಿದ್ದಾರೆ. ಸಾಕಷ್ಟು ಆಲ್ಬಮ್ ಸಾಂಗ್ ಗಳ ಮೂಲಕ ಖ್ಯಾತಿಗಳಿಸಿದ್ದಾರೆ.

  English summary
  Nafisa Ali clarifies about rumors of singer Lucky Ali death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X