»   » ಮಲ್ಲೇಶ್ವರಂನಲ್ಲಿ ಪಬ್ಲಿಕ್ ಟಿವಿ ಸಂಗೀತ ರಸಸಂಜೆ

ಮಲ್ಲೇಶ್ವರಂನಲ್ಲಿ ಪಬ್ಲಿಕ್ ಟಿವಿ ಸಂಗೀತ ರಸಸಂಜೆ

Posted By:
Subscribe to Filmibeat Kannada

ಸುಮಧುರ ಕನ್ನಡ ಚಿತ್ರಗೀತೆಗಳನ್ನು ಆಸ್ವಾದಿಸಲು ಸದಾ ತುಡಿಯುತ್ತಿರುವ ಚಿತ್ರರಸಿಕರಿಗೆ ಶನಿವಾರ (ಫೆ.22) ಮಲ್ಲೇಶ್ವರಂ ಮೈದಾನದಲ್ಲಿ ಸುವರ್ಣಾವಕಾಶ. ಇದನ್ನು ಕಲ್ಪಿಸುತ್ತಿರುವುದು ಕರ್ನಾಟಕದ ಹೆಮ್ಮೆಯ ಸುದ್ದಿ ವಾಹಿನಿ ಪಬ್ಲಿಕ್ ಟಿವಿ.

ಚಿತ್ರರಂಗಕ್ಕೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿಯು ರಾಜ್ಯದ ಹಲವು ನಗರಗಳಲ್ಲಿ "ನಮ್ಮ ಸಿನಿಮಾ - ನಮ್ಮ ಹಾಡು" ಎಂಬ ಸಂಗೀತ ಕಾರ್ಯಕ್ರಮ ನಡೆಸಿದೆ. ಫೆಬ್ರವರಿ 22, 2014ರಂದು ಬೆಂಗಳೂರಿನ ಮಲ್ಲೇಶ್ವರಂ ಮೈದಾನದಲ್ಲಿ ನಮ್ಮ ಸಿನಿಮಾ - ನಮ್ಮ ಹಾಡಿನ ಗ್ರಾಂಡ್ ಫಿನಾಲೆ. ಶನಿವಾರ ಸಂಜೆ 6 ಗಂಟೆಗೆ ಆರಂಭವಾಗುವ ಕಾರ್ಯಕ್ರಮದಲ್ಲಿ ಖ್ಯಾತ ಗಾಯಕ, ಗಾಯಕಿಯರು ಸಮಧುರ ಹಾಡುಗಳಿಂದ ರಂಜಿಸಲಿದ್ದಾರೆ. [ಪಬ್ಲಿಕ್ ಟಿವಿ ಕನ್ನಡ ಚಾನಲ್ ಈಗ ನಂ. 2]

Namma Cinema Namma Haadu by Pubic Tv

ಗಾಯಕರಾದ ಅಪ್ಪಗೆರೆ ತಿಮ್ಮರಾಜು, ಜನ್ನಿ, ಜೋಗಿಲಾಲ ಸಿದ್ದರಾಜು, ಪಿಚ್ಚಳ್ಳಿ ಶ್ರೀನಿವಾಸ್, ಸುನೀತಾ, ಗುರುರಾಜ್ ಹೊಸಕೋಟೆ, ರಾಜ ಗುರುರಾಜ್, ಬದ್ರಿಪ್ರಸಾದ್, ಚಿಂತನ್ ವಿಕಾಸ್, ಸುಪ್ರಿಯಾ ಲೋಹಿತ್, ಶಶಾಂಕ್, ದಿವ್ಯ ಮತ್ತು ನವೀನ್ ಸಜ್ಜು ಸಂಗೀತಕ್ಕೆ ದನಿಗೂಡಿಸಲಿದ್ದಾರೆ.

ಖ್ಯಾತ ಚಿತ್ರತಾರೆಯರಾದ ರಿಯಲ್ ಸ್ಟಾರ್ ಉಪೇಂದ್ರ, ಗೋಲ್ಡನ್ ಸ್ಟಾರ್ ಗಣೇಶ್, ದುನಿಯಾ ವಿಜಿ, ಯಶ್, ಶ್ರುತಿ ಹರಿಹರನ್, ಪ್ರಜ್ಚಲ್ ದೇವರಾಜ್, ಮೇಘನಾ ಗಾಂವ್ಕರ್, ಯಜ್ಞ ಶೆಟ್ಟಿ, ಹರಿಪ್ರಿಯಾ, ಶ್ರುತಿ ಹರಿಹರನ್ ಸೇರಿದಂತೆ ಅನೇಕ ತಾರೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಗೀತ ಸಂಜೆಗೆ ಹೊಸ ಮೆರುಗು ನೀಡಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಉಚಿತ ಪಾಸುಗಳು ಬೆಂಗಳೂರಿನ ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ಟಿ.ದಾಸರಹಳ್ಳಿ, ಜಯನಗರದಲ್ಲಿರುವ ಕಣ್ವಾ ಮಾರ್ಟ್ ಮಳಿಗೆಗಳು ಹಾಗೂ ಪಬ್ಲಿಕ್ ಟಿವಿ ಕಚೇರಿಯಲ್ಲಿ ದೊರೆಯಲಿವೆ. (ಒನ್ಇಂಡಿಯಾ ಕನ್ನಡ)

English summary
Karnataka's pride 24 hour Kannada language news television channel Public TV is hosting a musical programme "Namma cinema Namma Haadu" grand finale at Malleshwaram grounds, Bangalore on 22nd Feb, 2014 at 6 pm. Free passes availabel at Rajajinagar, Malleshwaram, Vijayanagar, T Dasarahalli and Jayanagar's Kanva Mart, also at Publiv Tv office.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada