ವಿಡಿಯೋ: ಮನಸ್ಸಿಗೆ ಖುಷಿ ಕೊಡುವ ಮಹಿರಾ ಚಿತ್ರದ 'ನನ್ನೆಲ್ಲಾ ಕನಸು'
ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಸದ್ಯ ಯಜಮಾನ ಚಿತ್ರದ್ದೇ ಹವಾ, ಅಬ್ಬರ, ಆರ್ಭಟ. ಈ ದೊಡ್ಡ ಸದ್ದಿನ ನಡುವೆಯೂ ಇಲ್ಲೊಂದು ಮುದ್ದಾದ ಹಾಡು ಸಂಗೀತ ಪ್ರಿಯರ ಬಾಯಲ್ಲಿ ಗುನುಗುನು ಅಂತಿದೆ.
ವಿಶೇಷ ಅಂದ್ರೆ ಈ ಚಿತ್ರದ ಆಡಿಯೋ ಬಿಡುಗಡೆ ಮಾಡಿದ್ದು ಸ್ವತಃ ಯಜಮಾನ ದರ್ಶನ್. ಹೌದು, ಮಹಿರಾ ಚಿತ್ರದ 'ನನ್ನೆಲ್ಲಾ ಕನಸು....' ವಿಡಿಯೋ ಹಾಡು ರಿಲೀಸ್ ಆಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ತುಂಬಾ ಕೂಲ್ ಆಗಿ ಮೂಡಿ ಬಂದಿರುವ ಈ ಹಾಡನ್ನ ನೋಡುತ್ತಿದ್ದರೇ, ಹೊಸದೊಂದು ಅನುಭವ ನೀಡುತ್ತಿದೆ.
ಪಿಆರ್ ಕೆ ಯೂಟ್ಯೂಬ್ ಚಾನಲ್ ಮೂಲಕ ಈ ಹಾಡು ತೆರೆಕಂಡಿದ್ದು, ರಾಕೇಶ್ ಯುಪಿ ಮತ್ತು ನೀಲಿಮಾ ರಾವ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನಿಖಿತಾ ಭಾರದ್ವಜ್ ಈ ಹಾಡಿಗೆ ಧ್ವನಿಯಾಗಿದ್ದು, ಪ್ರತಾಪ್ ಭಟ್ ಸಾಹಿತ್ಯ ರಚಿಸಿದ್ದಾರೆ.
ರಾಜ್ ಬಿ ಶೆಟ್ಟಿ, ವರ್ಜಿನಿಯಾ ರೊಡ್ರಿಗಸ್, ಚೈತ್ರಾ ಆಚಾರ್, ಬಾಲಾಜಿ ಮನೋಹರ್ ಮಹಿರಾ ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದು, ಮಹೇಶ್ ಗೌಡ ನಿರ್ದೇಶನ ಮಾಡಿದ್ದಾರೆ.

ಇನ್ನುಳಿದಂತೆ ವಿವೇಕ್ ಕೊಡ್ಡಪ್ಪ ಮತ್ತು ಸ್ನೇಹಿತರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಕೀರ್ತನ್ ಪೂಜಾರಿ ಛಾಯಾಗ್ರಹಣ, ಮಿಧುನ್ ಮುಕುಂದನ್ ಹಿನ್ನೆಲೆ ಸಂಗೀತವಿದೆ.


Click it and Unblock the Notifications











