ವಿಡಿಯೋ : 'ನಟ ಸಾರ್ವಭೌಮ' ಹಾಗೂ 'ಕವಚ' ಹೊಸ ಹಾಡುಗಳನ್ನು ಕೇಳಿ

ಈ ವರ್ಷದ ಮೊದಲ ಶುಕ್ರವಾರ ಕನ್ನಡದ ಮೂರು ಸಿನಿಮಾಗಳ ಬಿಡುಗಡೆಯಾಗಿವೆ. ಅದರ ಜೊತೆಗೆ ಇದೇ ದಿನ ಶಿವರಾಜ್ ಕುಮಾರ್ ಅವರ 'ಕವಚ' ಹಾಗೂ ಪುನೀತ್ ರಾಜ್ ಕುಮಾರ್ ಅವರ 'ನಟ ಸಾರ್ವಭೌಮ' ಸಿನಿಮಾದ ಹೊಸ ಹಾಡುಗಳು ರಿಲೀಸ್ ಆಗಿವೆ.

'ನಟ ಸಾರ್ವಭೌಮ' ಸಿನಿಮಾದ ಎರಡನೇ ಹಾಡು ಅಭಿಮಾನಿಗಳ ಕೈ ಸೇರಿದೆ. ಟೈಟಲ್ ಸಾಂಗ್ ಇದಾಗಿದ್ದು, ಡ್ಯಾನ್ಸ್ ವಿತ್ ಅಪ್ಪು ಎನ್ನುತ್ತಿದ್ದಾರೆ ಅಭಿಮಾನಿಗಳು. ನಿರ್ದೇಶಕ ಪವನ್ ಒಡೆಯರ್ ಅವರೇ ಈ ಹಾಡಿನ್ನು ಬರೆದಿದ್ದಾರೆ. ಸಂಚಿತ್ ಹೆಗ್ಡೆ, ಅಂಟೋನಿ ದಾಸ್ ಹಾಗೂ ಜಿತೀನ್ ರಾಜ್ ಹಾಡನ್ನು ಹಾಡಿದ್ದಾರೆ. ಡಿ ಇಮಾನ್ ಸಂಗೀತ ನೀಡಿದ್ದಾರೆ.

ಈ ಹಾಡಿನಲ್ಲಿ ಪುನೀತ್ ಸಖತ್ ಸ್ಟೆಪ್ ಹಾಕಿರುವ ಸೂಚನೆ ಸಿಕ್ಕಿದೆ. ವಿಡಿಯೋ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ನಾಳೆ ಚಿತ್ರದ ಆಡಿಯೋ ಬಿಡುಗಡೆ ಹುಬ್ಬಳಿಯಲ್ಲಿ ನಡೆಯಲಿದೆ.

nata sarvabhouma and kavacha movie songs released

ಈ ಹಾಡಿನ ಜೊತೆಗೆ ಶಿವರಾಜ್ ಕುಮಾರ್ ಅವರ 'ಕವಚ' ಸಿನಿಮಾದ ಹಾಡು ಕೂಡ ಬಿಡುಗಡೆಯಾಗಿದೆ. ರಾಜ್ ಕುಮಾರ್ ಅವರ ಹೊಸ ಬೆಳಕು ಹಾಡನ್ನು ಶಿವಣ್ಣ ಇಲ್ಲಿ ಹಾಡಿದ್ದಾರೆ. ಹಾಡಿನ ಒಂದು ಸಾಲಿನಲ್ಲಿ ಇದನ್ನು ಬಳಸಲಾಗಿದೆ.

ಕವಿರಾಜ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ, ವಿಜಯ್ ಪ್ರಕಾಶ್ ಹಾಗೂ ಅನುರಾಧ ಭಟ್ ಅವರ ಧ್ವನಿ ಹಾಡಿನಲ್ಲಿದೆ. ಈ ಸಿನಿಮಾವನ್ನು ಜಿವಿಆರ್ ವಾಸು ನಿರ್ದೇಶನ ಮಾಡಿದ್ದಾರೆ.

More from Filmibeat

English summary
Kannada actors Puneeth Rajkuma and Shivaraj Kumar's 'Nata Sarvabhouma' and 'Kavacha' movie songs released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X