twitter
    For Quick Alerts
    ALLOW NOTIFICATIONS  
    For Daily Alerts

    ವಿಡಿಯೋ : 'ನಟ ಸಾರ್ವಭೌಮ' ಹಾಗೂ 'ಕವಚ' ಹೊಸ ಹಾಡುಗಳನ್ನು ಕೇಳಿ

    |

    ಈ ವರ್ಷದ ಮೊದಲ ಶುಕ್ರವಾರ ಕನ್ನಡದ ಮೂರು ಸಿನಿಮಾಗಳ ಬಿಡುಗಡೆಯಾಗಿವೆ. ಅದರ ಜೊತೆಗೆ ಇದೇ ದಿನ ಶಿವರಾಜ್ ಕುಮಾರ್ ಅವರ 'ಕವಚ' ಹಾಗೂ ಪುನೀತ್ ರಾಜ್ ಕುಮಾರ್ ಅವರ 'ನಟ ಸಾರ್ವಭೌಮ' ಸಿನಿಮಾದ ಹೊಸ ಹಾಡುಗಳು ರಿಲೀಸ್ ಆಗಿವೆ.

    ವಿಡಿಯೋ : ಚಂದನ್ ಶೆಟ್ಟಿ ಧ್ವನಿಯ 'ಕಿಸ್' ಹಾಡು ಕೇಳಿ ವಿಡಿಯೋ : ಚಂದನ್ ಶೆಟ್ಟಿ ಧ್ವನಿಯ 'ಕಿಸ್' ಹಾಡು ಕೇಳಿ

    'ನಟ ಸಾರ್ವಭೌಮ' ಸಿನಿಮಾದ ಎರಡನೇ ಹಾಡು ಅಭಿಮಾನಿಗಳ ಕೈ ಸೇರಿದೆ. ಟೈಟಲ್ ಸಾಂಗ್ ಇದಾಗಿದ್ದು, ಡ್ಯಾನ್ಸ್ ವಿತ್ ಅಪ್ಪು ಎನ್ನುತ್ತಿದ್ದಾರೆ ಅಭಿಮಾನಿಗಳು. ನಿರ್ದೇಶಕ ಪವನ್ ಒಡೆಯರ್ ಅವರೇ ಈ ಹಾಡಿನ್ನು ಬರೆದಿದ್ದಾರೆ. ಸಂಚಿತ್ ಹೆಗ್ಡೆ, ಅಂಟೋನಿ ದಾಸ್ ಹಾಗೂ ಜಿತೀನ್ ರಾಜ್ ಹಾಡನ್ನು ಹಾಡಿದ್ದಾರೆ. ಡಿ ಇಮಾನ್ ಸಂಗೀತ ನೀಡಿದ್ದಾರೆ.

    ಈ ಹಾಡಿನಲ್ಲಿ ಪುನೀತ್ ಸಖತ್ ಸ್ಟೆಪ್ ಹಾಕಿರುವ ಸೂಚನೆ ಸಿಕ್ಕಿದೆ. ವಿಡಿಯೋ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ನಾಳೆ ಚಿತ್ರದ ಆಡಿಯೋ ಬಿಡುಗಡೆ ಹುಬ್ಬಳಿಯಲ್ಲಿ ನಡೆಯಲಿದೆ.

    ಹಾಡಿನ ರೂಪ ಪಡೆಯಿತು ಭಟ್ಟರು ಮೆಚ್ಚಿದ ಸಾಹಿತ್ಯ ಹಾಡಿನ ರೂಪ ಪಡೆಯಿತು ಭಟ್ಟರು ಮೆಚ್ಚಿದ ಸಾಹಿತ್ಯ

    nata sarvabhouma and kavacha movie songs released

    ಈ ಹಾಡಿನ ಜೊತೆಗೆ ಶಿವರಾಜ್ ಕುಮಾರ್ ಅವರ 'ಕವಚ' ಸಿನಿಮಾದ ಹಾಡು ಕೂಡ ಬಿಡುಗಡೆಯಾಗಿದೆ. ರಾಜ್ ಕುಮಾರ್ ಅವರ ಹೊಸ ಬೆಳಕು ಹಾಡನ್ನು ಶಿವಣ್ಣ ಇಲ್ಲಿ ಹಾಡಿದ್ದಾರೆ. ಹಾಡಿನ ಒಂದು ಸಾಲಿನಲ್ಲಿ ಇದನ್ನು ಬಳಸಲಾಗಿದೆ.

    ಕವಿರಾಜ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತ, ವಿಜಯ್ ಪ್ರಕಾಶ್ ಹಾಗೂ ಅನುರಾಧ ಭಟ್ ಅವರ ಧ್ವನಿ ಹಾಡಿನಲ್ಲಿದೆ. ಈ ಸಿನಿಮಾವನ್ನು ಜಿವಿಆರ್ ವಾಸು ನಿರ್ದೇಶನ ಮಾಡಿದ್ದಾರೆ.

    English summary
    Kannada actors Puneeth Rajkuma and Shivaraj Kumar's 'Nata Sarvabhouma' and 'Kavacha' movie songs released.
    Friday, January 4, 2019, 18:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X