ವಾಟ್ಸಪ್ ನಂಬರ್ ಕೇಳಿದ ನೆಟ್ಟಿಗನಿಗೆ ಗಾಯಕಿ ಸುನಿತಾ ಕೊಟ್ಟ ಉತ್ತರ ಹೀಗಿದೆ
ತೆಲುಗಿನ ಖ್ಯಾತ ಗಾಯಕಿ ಸುನಿತಾ ಉಪದ್ರಸ್ತ ಇತ್ತೀಚೆಗೆ ತಮ್ಮ ಮದುವೆಯ ಕಾರಣಕ್ಕೆ ಸುದ್ದಿಯಲ್ಲಿದ್ದರು. ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಪತಿಯಿಂದ ದೂರಾಗಿ ಬಹುಕಷ್ಟದಿಂದ ಬದುಕು ಕಟ್ಟಿಕೊಂಡಿದ್ದ ಸುನಿತಾ ಅವರಿಗೆ ಅವರ ಮಕ್ಕಳೆ ಮುಂದೆ ನಿಂತು ಇತ್ತೀಚೆಗಷ್ಟೆ ಅದ್ಧೂರಿಯಾಗಿ ಎರಡನೇ ಮದುವೆ ಮಾಡಿದರು.
ಗಾಯಕಿಯಾಗಿ, ನಿರೂಪಕಿಯಾಗಿ ತೆಲುಗು ಪ್ರೇಕ್ಷಕರ ಹೃದಯ ಗೆದ್ದಿರುವ ಸುನಿತಾ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಲೈವ್ ಬರುವ ಮೂಲಕ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ. ಕೊರೊನಾ ಭೀಕರತೆಯ ಈ ಪರಿಸ್ಥಿತಿಯಲ್ಲಿ ಎಲ್ಲರೂ ಮನೆಯಲ್ಲೇ ಕಾಲಕಳೆಯುವಂತಾಗಿದೆ. ಸಿನಿಮಾ ಕೆಲಸಗಳಿಗೂ ಬ್ರೇಕ್ ಬಿದ್ದಿದೆ.
ಅಮ್ಮಂದಿರ ದಿನ ವಿಶೇಷವಾಗಿ ಸುನಿತಾ ಇನ್ಸ್ಟಾಗ್ರಾಮ್‌ನಲ್ಲಿ ಲೈವ್ ಬಂದಿದ್ದರು. ಅಭಿಮಾನಿಗಳು ಸುನಿತಾಗೆ ಅಮ್ಮಂದಿರ ದಿನದ ವಿಶ್ ಮಾಡುವ ಜೊತೆಗೆ ನೆಚ್ಚಿನ ಹಾಡು ಹೇಳುವಂತೆ ಕೇಳಿಕೊಂಡಿದ್ದಾರೆ. ಅಭಿಮಾನಿಗಳ ಆಸೆಯಂತೆ ಸುನಿತಾ ಹಾಡನ್ನು ಹಾಡಿ ಸಂತಸ ಪಡಿಸಿದ್ದಾರೆ. ಈ ನಡುವೆ ನೆಟ್ಟಿಗನೊಬ್ಬ ವಾಟ್ಸಪ್ ನಂಬರ್ ಕೊಡಿ ಎಂದು ಬೇಡಿಕೆ ಇಟ್ಟಿದ್ದಾನೆ. ಮುಂದೆ ಓದಿ...

ನಂಬರ್ ಕೇಳಿದ ನೆಟ್ಟಿಗನಿಗೆ ಸುನಿತಾ ಪ್ರತಿಕ್ರಿಯೆ
ಅಭಿಮಾನಿಗಳ ಶುಭಾಶಯ, ಹಾರೈಕೆ, ಮೆಚ್ಚುಗೆಯ ಜೊತೆ ನೆಟ್ಟಿಗನೊಬ್ಬ ಸುನಿತಾ ಅವರ ವಾಟ್ಸಪ್ ನಂಬರ್ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಅಭಿಮಾನಿಯ ಬೇಡಿಕೆಗೆ ಶಾಕ್ ಆದ ಸುನಿತಾ ಬಳಿಕ ಕೂಲ್ ಆಗಿಯೇ ಪ್ರತಿಕ್ರಿಯೆ ನೀಡಿದ್ದಾರೆ. ನಗುತ್ತಲೇ ಕ್ಷಮಿಸಿ ಎಂದು ಹೇಳಿದ್ದಾರೆ. ಸುನಿತಾ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಅಭಿಮಾನಿಗಳಿಂದ ತರಹೇವಾರಿ ಬೇಡಿಕೆ
ಸೆಲೆಬ್ರಿಟಿಗಳಿಗೆ ಅಭಿಮಾನಿಗಳು ತರಹೇವಾರಿ ಬೇಡಿಗಳು ಇಡುತ್ತಾರೆ. ಒಂದೇ ಒಂದು ಸೆಲ್ಫಿ ಬೇಕು, ನಿಮ್ಮನ್ನು ಭೇಟಿ ಮಾಡಬೇಕು, ಮಾತನಾಡಿಸಬೇಕು ಹೀಗೆ ಪರಿಪರಿಯಾಗಿ ಕೇಳಿಕೊಳ್ಳುತ್ತಿರುತ್ತಾರೆ. ಇದೆಲ್ಲವನ್ನು ನಿಭಾಯಿಸಿಕೊಂಡು ಅಭಿಮಾನಿಗಳನ್ನು ಸಂತಸ ಪಡಿಸುತ್ತಿರುತ್ತಾರೆ. ಸದ್ಯ ಸುನಿತಾ ಕೂಡ ನೆಟ್ಟಿಗನ ಪ್ರಶ್ನೆಗೆ ನಗುತ್ತಲೇ ಉತ್ತರಿಸುವ ಮೂಲಕ ಸೈಲೆಂಟ್ ಆಗಿದ್ದಾರೆ.

ನಿರ್ದೇಶಕ ನೀಡಿದ ಹಿಂಸೆಯ ಬಗ್ಗೆ ಬಹಿರಂಗ ಪಡಿಸಿದ್ದ ಸುನಿತಾ
ಇತ್ತೀಚಿಗಷ್ಟೆ ಸುನಿತಾ, ನಿರ್ದೇಶಕನೊಬ್ಬ ಕೊಟ್ಟ ಹಿಂಸೆಯ ಬಗ್ಗೆ ಬಹಿರಂಗ ಪಡಿಸಿದ್ದರು. ಡಬ್ಬಿಂಗ್ ಸ್ಟುಡಿಯೂದಲ್ಲಿ ನಡೆದ ಕೆಟ್ಟ ಘಟನೆಯನ್ನು ಬಿಚ್ಚಿಟ್ಟಿದ್ದರು. 'ಗೌರವದಿಂದ ಮಾತನಾಡುತ್ತಿದ್ದ ಆ ನಿರ್ದೇಶಕ ಕೆಲ ಹೊತ್ತಿನ ಬಳಿಕ 'ಸುನಿತಾ' ಎಂದು ಹೆಸರು ಹಿಡಿದು ಕರೆಯಲು ಆರಂಭಿಸಿದ. ನಾನು ಇರಲಿ ಪರವಾಗಿಲ್ಲವೆಂದು ಸುಮ್ಮನೆ ಇದ್ದೆ. ಕೆಲವೇ ನಿಮಿಷಗಳಲ್ಲಿ 'ಬುಜ್ಜಿ', 'ಬಂಗಾರು' ಎನ್ನಲು ಆರಂಭಿಸಿದ. ಆಗ ನನಗೆ ಅನುಮಾನ ಬರಲು ಆರಂಭವಾಯಿತು' ಎಂದು ಸುನಿತಾ ಹೇಳಿದ್ದರು.

ಅತ್ಯಂತ ಕೆಟ್ಟ ಸಮಯವಾಗಿತ್ತು ಎಂದ ಗಾಯಕಿ
'ಆತನ ಚೇಷ್ಟೆಗಳು ಹೆಚ್ಚಾಗುತ್ತಾ ಹೋಗುತ್ತಿತ್ತು, ಮುಟ್ಟಿ ಮಾತನಾಡಿಸುವುದು, ಡಬಲ್ ಮೀನಿಂಗ್ ಮಾದರಿ ಮಾತುಗಳು ಹೇಳುವುದು ಹೀಗೆ ಹಲವು ರೀತಿಯಲ್ಲಿ ಆತ ನನಗೆ ಕಾಟ ಕೊಟ್ಟ. ನನಗೆ ವಿಪರೀತ ಭಯ, ಗಾಬರಿ ಆಗಿತ್ತು. ಡಬ್ಬಿಂಗ್ ಅನ್ನು ಆತುರಾತರದಲ್ಲಿ ಮುಗಿಸಿ ಅಲ್ಲಿಂದ ಹೊರಬಂದೆ. ಅದು ನನಗೆ ಅತ್ಯಂತ ಕೆಟ್ಟ ಸಮಯ' ಎಂದು ಹೇಳಿದ್ದಾರೆ.


Click it and Unblock the Notifications











