ನವೀನ್ ಸಜ್ಜು ಕೈಯಲ್ಲಿ ಮತ್ತೆ ಎಣ್ಣೆ ಬಾಟ್ಲು: ಸೌಂಡ್ ಮಾಡ್ತಿದೆ ಕುಡುಕರ ಸಾಂಗು.!
'ಎಣ್ಣೆ ನಮ್ದು.. ಊಟ ನಿಮ್ದು.. ಇಲ್ಲ ಊಟ ನಮ್ದು.. ಎಣ್ಣೆ ನಿಮ್ದು'' - 'ಕನಕ' ಚಿತ್ರದ ಈ ಹಾಡು ಯಾರಿಗ್ತಾನೆ ಗೊತ್ತಿಲ್ಲ.?! ಸೂಪರ್ ಡ್ಯೂಪರ್ ಹಿಟ್ ಆದ ಈ ಸಾಂಗ್ ನ ಸೃಷ್ಟಿಕರ್ತ ನವೀನ್ ಸಜ್ಜು.
ಎಣ್ಣೆ ಸಾಂಗ್ ಮೂಲಕ ಕರ್ನಾಟಕದ ಮೂಲೆ ಮೂಲೆಯಲ್ಲೂ ಜನಪ್ರಿಯತೆ ಪಡೆದಿದ್ದ ನವೀನ್ ಸಜ್ಜು ಇದೀಗ ಅದೇ ಎಣ್ಣೆ ಬಾಟಲ್ ನ ಕೈಯಲ್ಲಿ ಹಿಡ್ಕೊಂಡು ಹೊಸ ಹಾಡಿನ ಮೂಲಕ ನಿಮ್ಮ ಮುಂದೆ ಬಂದಿದ್ದಾರೆ.
ನವೀನ್ ಸಜ್ಜು ಸಾಹಿತ್ಯ ಬರೆದು ಸಂಗೀತ ನೀಡಿರುವ 'ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ' ಮ್ಯೂಸಿಕ್ ವಿಡಿಯೋ ಬಿಡುಗಡೆ ಆಗಿದೆ. ಮೊನ್ನೆಯಷ್ಟೇ ರಿಲೀಸ್ ಆದ ಈ ಹಾಡು ಯೂಟ್ಯೂಬ್ ನಲ್ಲಿ ಮೂರು ಲಕ್ಷಕ್ಕೂ ಅಧಿಕ ವ್ಯೂಸ್ ಪಡೆದುಕೊಂಡು ಟ್ರೆಂಡಿಂಗ್ ನಲ್ಲಿದೆ.

''ನಾಳೆಯಿಂದ ಎಣ್ಣೆ ಬುಟ್ಬುಡ್ತೀನಿ.. ಒಂದಿನ ಲಾಸ್ಟು ಕುಡುದ್ಬುತೀನಿ..
ಅಮ್ಮ ಬೈತಾಳೆ..
ಅಪ್ಪ ಹೊಡೀತಾನೆ..
ಹೆಂಡತಿ ಉಗೀತಾಳೆ..
ವರ್ಕೌಟ್ ಮಾಡ್ಬೇಕು.. ಜಿಮ್ಗೆ ಸೇರ್ಬೇಕು..
ಕರುಳು ಸುಟ್ಟೋಯ್ತದೆ.. ಬಾಡಿ ಬೆಂಡ್ ಆಯ್ತದೆ.. ನನ್ ಪಾಡಿಗ್ ನನ್ನ ಬುಟ್ಬುಡ್ರಪ್ಪೋ...'' - ಎಂಬ ಸಾಹಿತ್ಯ ಹೊಂದಿರುವ 'ಎಣ್ಣೆ ಬುಟ್ಬುಡ್ತೀನಿ' ಮ್ಯೂಸಿಕಲ್ ವಿಡಿಯೋದಲ್ಲಿ ನವೀನ್ ಸಜ್ಜು ಕುಣಿದು ಕುಪ್ಪಳಿಸಿದ್ದಾರೆ.
ಪಾರ್ಟಿ ಮೂಡ್ ನಲ್ಲಿ ಇರುವ ಈ ಹಾಡು ಇನ್ಮುಂದೆ ಕುಡುಕರ ಸುಪ್ರಭಾತ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ.!


Click it and Unblock the Notifications











