Navratri 2023: ನವರಾತ್ರಿಯ ವಿಶೇಷ ಹಾಡು ಗಾರ್ಬೋಗೆ ಸಾಹಿತ್ಯ ಬರೆದ ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ ಹಾಡುಗಳಿಗೆ ಸಾಹಿತ್ಯ ಕೂಡ ಬರೆಯುತ್ತಾರೆ. ನಿಜ...ಇದು ಹೊಸ ವಿಷಯವಾದರೂ ಕೂಡ ನಿಜ. ಪ್ರಧಾನಿ ನರೇಂದ್ರ ಮೋದಿ ವಾಸ್ತೆ ಮತ್ತು ಲೇಜಾ ರೇ ನಂತಹ ಹಿಟ್ ಹಾಡುಗಳನ್ನು ನೀಡಿರುವ ಧ್ವನಿ ಭಾನುಶಾಲಿ ಅವರ ಹೊಸ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
ನವರಾತ್ರಿ ಹಬ್ಬದ ಸಂಭ್ರಮದ ನಡುವೆ ಶನಿವಾರ (ಅಕ್ಟೋಬರ್ 14) ಹೊಸ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಇದಕ್ಕೆ ತನಿಷ್ಕ್ ಬಾಗ್ಚಿ ಸಂಗೀತ ಸಂಯೋಜಿಸಿದ್ದಾರೆ. ಧ್ವನಿ ಭಾನುಶಾಲಿ ದನಿ ನೀಡಿದ್ದು, ಗಾರ್ಬೋ ಎಂದು ಹಾಡಿಗೆ ಶೀರ್ಷಿಕೆ ನೀಡಲಾಗಿದೆ. ಇದು ನಟಿ ಕಂಗನಾ ರನೌತ್ ಸೇರಿದಂತೆ ಹಲವು ಬಾಲಿವುಡ್ ಸೆಲಬ್ರಿಟಿಗಳನ್ನು ಆಕರ್ಷಿಸಿದೆ.

ಗಾರ್ಬೋಗೆ ಪ್ರಧಾನಿ ಮೋದಿ ಸಾಹಿತ್ಯ
ಭಾರತದ ಪ್ರಧಾನಿ ನರೇಂದ್ರ ಮೋದಿ ಬರೆದ ಸಾಹಿತ್ಯವನ್ನು ಒಳಗೊಂಡಿರುವ ಕಾರಣ ಈ ಹಾಡು ವಿಶೇಷತೆಗಳನ್ನು ಹೊಂದಿದೆ. ತನ್ನ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಈ ಬಗ್ಗೆ ಬರೆದುಕೊಂಡಿರುವ ಗಾಯಕಿ ಧ್ವನಿ ಭಾನುಶಾಲಿ, ಪ್ರಧಾನಿ ಮೋದಿಯವರಿಗೆ ಧನ್ಯವಾದ ಹೇಳುವ ಮೂಲಕ ಹಾಡನ್ನು ಬಿಡುಗಡೆ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಹೊಸ ನವರಾತ್ರಿ ಗೀತೆ ಗಾರ್ಬೋಗೆ ಸಾಹಿತ್ಯವನ್ನು ರಚಿಸಿದ್ದಾರೆ. ಈ ಹಾಡು ಮುಂಬರುವ ನವರಾತ್ರಿ ಹಬ್ಬದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಲಿದೆ. ನವರಾತ್ರಿಯ ಏಕತೆ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಈ ಹಾಡಿನಲ್ಲಿ ತೋರಿಸಲಾಗಿದೆ. ಅದರಲ್ಲೂ ಗುಜರಾತ್‌ನ ಗರ್ಬಾ ನೃತ್ಯವನ್ನು ಸುಂದರವಾಗಿ ಚಿತ್ರಿಸಲಾಗಿದೆ.
ಧ್ವನಿ ಭಾನುಶಾಲಿ ಅವರು ತಮ್ಮ ಸುಮಧುರ ಕಂಠದಲ್ಲಿ ಹಾಡಿಗೆ ದನಿಯಾಗಿದ್ದು, ವೀಡಿಯೊದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಪ್ರಧಾನಿ ಸಾಹಿತ್ಯ ಬರೆದಿರುವ ಹಾಡನ್ನು ಜಾಕಿ ಭಗ್ನಾನಿ ನಿರ್ಮಿಸಿದ್ದಾರೆ. ಸಂಗೀತ ಸಂಯೋಜನೆಯನ್ನು ತನಿಷ್ಕ್ ಬಾಗ್ಚಿ ಮಾಡಿದ್ದಾರೆ. ಧ್ವನಿ ಭಾನುಶಾಲಿ ಅವರ ಪೋಸ್ಟ್ ಪ್ರಕಾರ, ಹಾಡಿನ ಸಾಹಿತ್ಯವನ್ನು ಪಿಎಂ ಮೋದಿ ರಚಿಸಿದ್ದಾರೆ.

ಟೀಸರ್ ಅನ್ನು ಹಂಚಿಕೊಂಡಿರುವ ಧ್ವನಿ ಟ್ವೀಟ್ ಮಾಡಿ, "ಪ್ರೀತಿಯಾ ನರೇಂದ್ರ ಮೋದಿಜಿ , ತನಿಷ್ಕ್ ಬಾಗ್ಚಿ ಮತ್ತು ನಾನು ನೀವು ಬರೆದಿರುವ ಗರ್ಬಾವನ್ನು ಇಷ್ಟಪಟ್ಟೆವು. ನಾವು ಹೊಸ ತಾಳ, ಸಂಯೋಜನೆಯಿಂದ ಈ ಹಾಡನ್ನು ಮಾಡಲು ಬಯಸಿದ್ದೇವೆ. ಜಸ್ಟ್ ಮ್ಯೂಸಿಕ್ ಈ ಹಾಡು ಮತ್ತು ವೀಡಿಯೊಗೆ ಜೀವ ತುಂಬಲು ನಮಗೆ ಸಹಾಯ ಮಾಡಿದೆ" ಎಂದಿದ್ದಾರೆ.
ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿರುವ ಪ್ರಧಾನಿ ಮೋದಿ, "ವರ್ಷಗಳ ಹಿಂದೆ ನಾನು ಬರೆದ ಗರ್ಬಾದ ಈ ಸುಂದರವಾದ ಪ್ರಸ್ತುತಿಗಾಗಿ ಧ್ವನಿವಿನೋದ್, ತನಿಷ್ಕ್ ಬಾಗ್ಚಿ ಮತ್ತು ಜಸ್ಟ್ ಮ್ಯೂಸಿಕ್ ತಂಡಕ್ಕೆ ಧನ್ಯವಾದಗಳು! ಇದು ಅನೇಕ ನೆನಪುಗಳನ್ನು ತರುತ್ತದೆ. ನಾನು ಈಗ ಹಲವು ವರ್ಷಗಳಿಂದ ಬರೆದಿಲ್ಲ. ಕಳೆದ ಕೆಲವು ದಿನಗಳಿಂದ ನಾನು ಹೊಸ ಗರ್ಬಾವನ್ನು ಬರೆಯುವಲ್ಲಿ ಯಶಸ್ವಿಯಾಗಿದ್ದೇನೆ. ಅದನ್ನು ನಾನು ನವರಾತ್ರಿಯ ಸಮಯದಲ್ಲಿ ಹಂಚಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.
ಗಾರ್ಬೋ
ಗಾರ್ಬೊ ಹಾಡಿನ ವೀಡಿಯೊವು ನವರಾತ್ರಿ ಹಬ್ಬದ ಒಂಬತ್ತು ದಿನಗಳಲ್ಲಿ ಒಂಬತ್ತು ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸುವ ಮತ್ತು ಗಾರ್ಬಾ ನೃತ್ಯದಲ್ಲಿ ತೊಡಗಿರುವ ಜನರ ಸುಂದರ ಕ್ಷಣಗಳನ್ನು ತೋರಿಸುತ್ತದೆ. ಧ್ವನಿ ಭಾನುಶಾಲಿ ವೀಡಿಯೊದಲ್ಲಿ ತಮ್ಮ ಗಾರ್ಬಾ ನೃತ್ಯ ಕಲೆಯನ್ನು ತೋರಿಸಿದ್ದಾರೆ. ಈ ವರ್ಷ, ಒಂಬತ್ತು ದಿನಗಳ ನವರಾತ್ರಿ ಉತ್ಸವವು ಅಕ್ಟೋಬರ್ 15 ರಂದು ಪ್ರಾರಂಭವಾಗುತ್ತದೆ. ಅಕ್ಟೋಬರ್ 24ರ ದಸರಾ ಹಬ್ಬದವರೆಗೆ ಇರುತ್ತದೆ.


Click it and Unblock the Notifications











