For Quick Alerts
  ALLOW NOTIFICATIONS  
  For Daily Alerts

  ತೆಲುಗು ಟಾಪ್ ಗಾಯಕನ ದನಿಯಲ್ಲಿ ಮೂಡಿಬಂತು 'ಭಜರಂಗಿ' ಮೆಲೋಡಿ ಹಾಡು

  |

  ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ-2' ಚಿತ್ರದ ಎರಡನೇ ಹಾಡು ಬಿಡುಗಡೆಯಾಗಿದೆ. ತೆಲುಗು ಟಾಪ್ ಗಾಯಕ ಸಿದ್ ಶ್ರೀರಾಮ್ ದನಿಯಲ್ಲಿ ಮೂಡಿಬಂದಿರುವ ಮೇಲೋಡಿ ಹಾಡು ಸದ್ದು ಮಾಡ್ತಿದೆ.

  ಅರ್ಜುನ್ ಜನ್ಯ ಸಂಗೀತ ನಿರ್ದೇಶನ ನೀಡಿರುವ ಈ ಹಾಡನ್ನು ತೆಲುಗಿನ ಸಿದ್ ಶ್ರೀರಾಮ್ ಹಾಡಲಿದ್ದಾರೆ ಎಂದಾಗಲೇ ಹಾಡಿನ ಮೇಲೆ ಹೆಚ್ಚು ನಿರೀಕ್ಷೆ ಹುಟ್ಟಿಕೊಂಡಿತ್ತು. ನಿರೀಕ್ಷೆಗೆ ತಕ್ಕಂತೆ ಹಾಡು ಇಂಪಾಗಿ ಮೂಡಿ ಬಂದಿದೆ.

  ಶಿವರಾಜ್ ಕುಮಾರ್ 125ನೇ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆಶಿವರಾಜ್ ಕುಮಾರ್ 125ನೇ ಸಿನಿಮಾದ ಟೈಟಲ್ ಮತ್ತು ಪೋಸ್ಟರ್ ಬಿಡುಗಡೆ

  ಸಿದ್ ಶ್ರೀರಾಮ್ ಹಾಡಿರುವ ಎರಡನೇ ಕನ್ನಡ ಹಾಡು ಇದು. ಇದಕ್ಕೂ ಮುಂಚೆ 'ಟಾಮ್ ಅಂಡ್ ಜೆರ್ರಿ' ಚಿತ್ರದಲ್ಲಿ ಹಾಡೊಂದಕ್ಕೆ ದನಿಯಾಗಿದ್ದಾರೆ. ಆ ಹಾಡು ಬಹಳ ಮೆಚ್ಚುಗೆ ಗಳಿಸಿಕೊಂಡಿದೆ.

  ಅಲ್ಲು ಅರ್ಜುನ್ ಅಭಿನಯಿಸಿದ್ದ 'ಅಲಾ ವೈಕುಂಠಪುರಂಲೋ' ಚಿತ್ರದಲ್ಲಿ 'ಸಾಮಜವರಗಮನ' ಹಾಡು ಹಾಡಿದ್ದು ಇದೇ ಗಾಯಕ.

  ಗೀತಾ ಗೋವಿಂದಂ, ಟ್ಯಾಕ್ಸಿವಾಲಾ, 2.0, ಡಿಯರ್ ಕಾಮ್ರೆಡ್, ವಕೀಲ್ ಸಾಬ್, ರಂಗ್‌ದೇ, ತಮಿಳಿನಲ್ಲಿ ಮಾರ, ಸೈಕೋ, ಎನ್‌ಜಿಕೆ, ವಿಶ್ವಾಸಂ, ವಡಾ ಚೆನ್ನೈ, 2.0, ಮೆರ್ಸಲ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಸಿದ್ ಶ್ರೀರಾಮ್ ಹಾಡಿದ್ದಾರೆ.

  ಇನ್ನುಳಿದಂತೆ ಹರ್ಷ ನಿರ್ದೇಶನದ ಭಜರಂಗಿ 2 ಚಿತ್ರವನ್ನು ಜಯಣ್ಣ-ಭೋಗೇಂದ್ರ ನಿರ್ಮಿಸಿದ್ದಾರೆ. ಭಾವನಾ ನಾಯಕಿಯಾಗಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ. ಮೇ ತಿಂಗಳಲ್ಲಿ ರಿಲೀಸ್ ಆಗಬೇಕಿದೆ. ಕೊರೊನಾ ಕಾರಣದಿಂದ ಮತ್ತಷ್ಟು ವಿಳಂಬವಾದರೂ ಅಚ್ಚರಿ ಇಲ್ಲ.

  English summary
  Nee Sigovaregu Melody Lyrical Video from Bhajarangi 2 released. Sung By telugu singer Sid Sriram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X