ಇಂಗ್ಲೀಷ್ ಸಾಹಿತ್ಯ ಹಾಡಿ ಟ್ರೋಲ್ ಆದ 'ನೇಹಾ ಕಕ್ಕರ್'!

ನೇಹಾ ಕಕ್ಕರ್ ತಮ್ಮ ಧ್ವನಿ, ಹಾಡುಗಳ ಮೂಲಕ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ನೇಹಾ ಅವರ ಹಾಡಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಪ್ರತಿಬಾರಿಯೂ ನೇಹಾ ಅವರ ಹಾಡು ರಿಲೀಸ್ ಆಗುವುದನ್ನೇ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಈ ಬಾರಿ ರಿಲೀಸ್ ಆದ ಹಾಡು ಅದ್ಯಾಕೋ ಜನರಿಗೆ ಅಷ್ಟೊಂದು ಇಷ್ಟ ಆಗಿಲ್ಲ.

ನೇಹಾ ಕಕ್ಕರ್ ಧ್ವನಿ ಹಾಡಿನಲ್ಲಿ ಬೇರೆ ರೀತಿ ಕೇಳುತ್ತದೆ. ಹಾಗಾಗಿ ನೇಹಾ ಅವರ ಧ್ವನಿ ಮತ್ತು ಹೊಸ ಹಾಡನ್ನು ಟ್ರೋಲ್ ಮಾಡಲಾಗುತ್ತಿದೆ. ಇತ್ತೀಚಿಗೆ ರಿಲೀಸ್ ಆದ ಆಲ್ಬಂ ವೀಡಿಯೊ ಸಾಂಗ್ 'ನರಾಜಗಿ'. ಈ ಹಾಡಿನಲ್ಲಿ ನೇಹಾ ತಮ್ಮ ಹಳೆಯ ಪ್ರೇಮಿಯನ್ನು ಕಂಡು ನೋವಿನಲ್ಲಿ ಹಾಡುತ್ತಾಳೆ.

'ನೀನಿಲ್ಲದೆ ನಾನು ಒಂಟಿ, ಒಂಟಿತನ ಅನುಭವಿಸುತ್ತಿದ್ದೇನೆ' ಎಂಬ ಸಾಹಿತ್ಯದೊಂದಿಂಗೆ ಹಾಡು ಸಾಗುತ್ತದೆ. ಈ ಹಾಡು ಶುರು ಆಗುವುದೇ ಇಂಗ್ಲೀಷ್ ಸಾಹಿತ್ಯದಿಂದ. ಇಂಗ್ಲೀಷ್ ಸಾಹಿತ್ಯವನ್ನು ಹಾಡುವಾಗ ನೇಹಾ ಕಕ್ಕರ್ ಧ್ವನಿ ವಿಭಿನ್ನವಾಗಿ ಕೇಳಿಸುತ್ತದೆ. ಅದನ್ನು ಆಟೋ ಕಂಪೋಸ್‌ ಮಾಡಲಾಗಿದೆ. ಯಾಕೆಂದರೆ ಇಂಗ್ಲೀಷ್ ಸಾಹಿತ್ಯದ ಸಾಲುಗಳನ್ನು ಸ್ಟೈಲಿಶ್ ಆಗಿ ಉಚ್ಚರಣೆ ಮಾಡಲಾಗಿದೆ. ಹಾಗಾಗಿ ಇದು ನಕಲಿ ಇಂಗ್ಲೀಷ್ ಆ್ಯಕ್ಸೆಂಟ್ ಎಂದು ಟ್ರೋಲ್ ಮಾಡಲಾಗುತ್ತಿದೆ.

Neha Kakkar Gets Trolled For Using English Lyric In Latest Music Video

ಈ ಹಾಡು ಜನಮನ ಗೆಲ್ಲುವಲ್ಲಿ ವಿಫಲವಾಗಿದೆ. ಹಾಡು ರಿಲೀಸ್ ಆಗುತ್ತಲೆ ಟ್ರೋಲ್ ಆಗಿದೆ. ನೇಹಾ ತಮ್ಮ ನೈಜ ಧ್ವನಿಯಲ್ಲಿ ಹಿಂದಿ ಭಾಷೆಯಲ್ಲೇ ಹಾಡು ಬಹುದಿತ್ತು. ಅದು ಬಿಟ್ಟು ಹೀಗೆ ಬಲವಂತವಾಗಿ ಇಂಗ್ಲೀಷ್ ಸಾಹಿತ್ಯ ತುರುಕಿ, ಅದಕ್ಕೆ ಎಫೆಕ್ಟ್ ಕೊಟ್ಟು ಕೆಟ್ಟದಾಗಿ ಕೇಳುವಂತೆ ಮಾಡಿದ್ದಾರಲ್ಲಾ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.

ನೇಹಾ ಹೊಸ ಹಾಡಿಗೆ ಬಂದ ಕಮೆಂಟ್‌ಗಳು ಹೀಗಿವೆ. 'ಬಲವಂತವಾಗಿ ನಕಲಿ ಇಂಗ್ಲಿಷ್ ಉಚ್ಚಾರಣೆ', 'ಸೌಂಡ್ ತುಂಬಾನೇ ಇರಿಟೇಟಿಂಗ್ ಆಗಿದೆ, ಆಟೋಟ್ಯೂನ್ ತುಂಬಾನೇ ಹೆಚ್ಚಾಗಿದೆ', 'ನೀವು ಹಿಂದಿಯಲ್ಲೇ ಚೆನ್ನಾಗಿ ಹಾಡಲು ಸಾಧ್ಯವಿಲ್ಲ ಮತ್ತು ನೀವು ಇಂಗ್ಲಿಷ್ ಹಾಡನ್ನು ಪ್ರಯತ್ನಿಸುತ್ತಿದ್ದೀರಿ', ಹೀಗೆ ನೇಹಾ ಹಾಡು ಮತ್ತು ಧ್ವನಿಗೆ, ಆಕೆಯೆ ಇಂಗ್ಲೀಷ್ ಉಚ್ಚಾರಣೆ ಬಗ್ಗೆ ನೆಗೆಟಿವ್ ಕಮೆಂಟ್‌ಗಳು ಬಂದಿವೆ.

ಇದು ಒಂದು ಕಡೆ ಆದರೆ ಮತ್ತೊಂದೆಡೆ ನೇಹಾಳ ಹೊಸ ಹಾಡು ಕೆಲವು ಪ್ರೇಕ್ಷಕರಿಗೆ ಇಷ್ಟ ಆಗಿದೆ. ಈ ಹಾಡನ್ನು ಮೆಚ್ಚಿ ಕೊಂಡಾಡುತ್ತಿವವರು ಇತ್ತಾರೆ. ಆದರೆ ಈ ಬಾರಿ ಹೆಚ್ಚಾಗಿ ಟ್ರೋಲ್ ಆಗಿ, ಬಹುತೇಕ ಪ್ರೇಕ್ಷಕರ ಮನ ಗೆಲ್ಲುವಲ್ಲಿ ನೇಹಾ ಹಿಂದೆ ಉಳಿದಿದ್ದಾರೆ. ನೇಹಾ ಕಕ್ಕರ್ ಈ ಹಾಡಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ.

ನೇಹಾ ಹಾಡಿರುವ ಈ ಹಾಡಿನಲ್ಲಿ ನೇಹಾ ಜೊತೆಗೆ ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ಕೂಡ ಇದ್ದಾರೆ. ಸೋನಾಲ್ ಪ್ರಧಾನ್ ಅವರು ಹಾಡಿನ ಸಾಹಿತ್ಯವನ್ನು ರಚಿಸಿದ್ದಾರೆ.

More from Filmibeat

English summary
Neha Kakkar Gets Trolled For Using English Lyric In Latest Music Video, Its Called Fake English Accent,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X