twitter
    For Quick Alerts
    ALLOW NOTIFICATIONS  
    For Daily Alerts

    2 ದಿನಗಳಲ್ಲಿ ಶೂಟಿಂಗ್ ಮುಗಿಸಿದ 'ಅಯೋಗ್ಯ' ಚಿತ್ರದ ಏನಮ್ಮಿ ಯಾಕಮ್ಮಿ ಹಾಡಿಗೆ 100 ಮಿಲಿಯನ್ ವೀವ್ಸ್

    |

    ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಜೋಡಿಯಾಗಿ ತೆರೆಮೇಲೆ ಕಂಡಿದ್ದ ಮೊದಲ ಸಿನಿಮಾ 'ಅಯೋಗ್ಯ'. ಯೋಗರಾಜ್‌ ಭಟ್ ಬಳಿ ಸಹಾಯಕರಾಗಿದ್ದ ಮಹೇಶ್ ಕುಮಾರ್ ನಿರ್ದೇಶಿಸಿದ ಚೊಚ್ಚಲ ಚಿತ್ರ. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಎಷ್ಟು ಸದ್ದು ಮಾಡಿತ್ತೋ. ಈ ಸಿನಿಮಾ ಹಾಡುಗಳು ಕೂಡ ಅಷ್ಟೇ ಸದ್ದು ಮಾಡಿತ್ತು. 2018ರಲ್ಲಿ ರಿಲೀಸ್ ಆಗಿದ್ದ ಸಿನಿಮಾದ ಹಾಡುಗಳಿಗೆ ಸಂಗೀತ ಪ್ರೇಮಿಗಳು ಭೇಷ್ ಎಂದಿದ್ದರು. ಇದೇ ಚಿತ್ರದ ಏನಮ್ಮಿ ಯಾಕಮ್ಮಿ ಸಾಂಗ್ ಹೊಸ ಮೈಲಿಗಲ್ಲು ತಲುಪಿದೆ.

    Recommended Video

    Ayogya ಸಿನಿಮಾದಲ್ಲಿ Satish Neenasam ಕೆಂಡದ ಮೇಲೆ ಓಡಿದ್ದು ಹೇಗೆ ನೋಡಿ|Ayogya song Making| Oneindia Kannada

    ಕನ್ನಡದಲ್ಲಿ 100 ಮಿಲಿಯನ್ ವೀವ್ಸ್ ಪಡೆದ ಹಾಡುಗಳು ತೀರಾ ವಿರಳ. ಅತೀ ಕಡಿಮೆ ಬಜೆಟ್‌ನಲ್ಲಿ , ಕಡಿಮೆ ಸಮಯದಲ್ಲಿ ಶೂಟ್ ಆದ ಹಾಡು ಏನಮ್ಮಿ, ಯಾಕಮ್ಮಿ. ಅರ್ಜುನ್ ಜನ್ಯ ಕಂಪೋಸ್ ಮಾಡಿದ ಈ ಹಾಡು ಹುಟ್ಟಿದ್ದು ಇಂದು ಇಂಟ್ರೆಸ್ಟಿಂಗ್ ಸ್ಟೋರಿ. ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲು ಸೃಷ್ಟಿಸಿದ ಈ ಹಾಡಿನ ಬಗ್ಗೆ ನಿರ್ದೇಶಕ ಮಹೇಶ್ ಮಾಹಿತಿಯನ್ನು ಫಿಲ್ಮಿ ಬೀಟ್ ಜೊತೆ ಹಂಚಿಕೊಂಡಿದ್ದಾರೆ.

    ಏನಮ್ಮಿ ಯಾಕಮ್ಮಿ ಹಾಡಿಗೆ 100 ಮಿಲಿಯನ್ ವೀವ್ಸ್

    ಏನಮ್ಮಿ ಯಾಕಮ್ಮಿ ಹಾಡಿಗೆ 100 ಮಿಲಿಯನ್ ವೀವ್ಸ್

    'ಅಯೋಗ್ಯ' ಸಿನಿಮಾದ ಏನಮ್ಮಿ ಯಾಕಮ್ಮಿ.. ಸಾಂಗ್ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟ ಸಾಧನೆ ಮಾಡಿದೆ. ಅದೇನಂದರೆ, ಏನಮ್ಮಿ ಯಾಕಮ್ಮಿ 100 ಮಿಲಿಯನ್ ವೀವ್ಸ್ ಪಡೆದ 4ನೇ ಹಾಡು. ಶರಣ್ ಅಭಿನಯದ 'Rambo 2' ಚಿತ್ರದ ಚುಟುಚುಟು ಅಂತೈತಿ ಕನ್ನಡದಲ್ಲಿ 100 ಮಿಲಿಯನ್ ವೀವ್ಸ್ ಪಡೆದಿತ್ತು. ಸದ್ಯ ಈ ಹಾಡನ್ನು 150 ಮಿಲಿಯನ್ ಮಂದಿ ವೀಕ್ಷಣೆ ಮಾಡಿದ್ದಾರೆ. ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರದ ಕರಾಬು ಹಾಡು ಅತೀ ಹೆಚ್ಚು ವೀವ್ಸ್ ಪಡೆದಿದೆ. 279 ವೀವ್ಸ್ ಈ ಹಾಡಿಗೆ ಸಿಕ್ಕಿದೆ. ಇದರ ಹಿಂದನೇ ದರ್ಶನ್ ನಟನೆಯ 'ರಾಬರ್ಟ್' ಚಿತ್ರದ ಕಣ್ಣು ಹೊಡೆಯಾಕಾ ಸಾಂಗ್‌ಗೆ 112 ಮಿಲಿಯನ್ಸ್ ವೀವ್ಸ್ ಸಿಕ್ಕಿದೆ. ಈಗ 'ಅಯೋಗ್ಯ' ಚಿತ್ರದ ಏನಮ್ಮಿ ಯಾಕಮ್ಮಿ 100 ಮಿಲಿಯನ್ಸ್ ವೀವ್ಸ್ ಪಡೆದುಕೊಂಡಿದೆ.

    2 ದಿನಗಳಲ್ಲಿ ಶೂಟಿಂಗ್ ಮುಗಿಸಿದ ಹಾಡು

    2 ದಿನಗಳಲ್ಲಿ ಶೂಟಿಂಗ್ ಮುಗಿಸಿದ ಹಾಡು

    'ಅಯೋಗ್ಯ' ಸಿನಿಮಾ ಕತೆ ಮಂಡ್ಯ ನೆಟಿವಿಟಿಯ ಕಥೆ. ಹೀಗಾಗಿ ಹಾಡನ್ನೂ ಕೂಡ ಮಂಡ್ಯ ಸುತ್ತಮುತ್ತಲೇ ಚಿತ್ರೀಕರಣ ಮಾಡಲಾಗಿತ್ತು. ನೀನಾಸಂ ಸತೀಶ್ ಹಾಗೂ ರಚಿತಾ ರಾಮ್ ಕಾಂಬಿನೇಷನ್‌ನಲ್ಲಿ ಈ ಹಾಡು ಮೂಡಿ ಬಂದಿತ್ತು. ಭರ್ಜರಿ ಮೋಹನ್ ಕೊರಿಯೋಗ್ರಫಿ ಮಾಡಿದ್ದರು. ನಂಜನಗೂಡಿನ ಗದ್ದೆಗಳು ಹಾಗೂ ಪಾಂಡಪುರದ ಕರಿಗಡ್ಡ ಸಮೀಪದ ಹಳ್ಳಿಗಳಲ್ಲಿ ಈ ಹಾಡನ್ನು ಚಿತ್ರೀಕರಣ ಮಾಡಲಾಗಿತ್ತು. ಕೇವಲ ಎರಡೇ ದಿನಗಳಲ್ಲಿ ಈ ಹಾಡಿನ ಚಿತ್ರೀಕರಣ ಮುಗಿದಿತ್ತು.

    ಏನಮ್ಮಿ ಹಾಡನ್ನು ಶ್ರೇಯಾ ಘೋಷಾಲ್ ಹಾಡಬೇಕಿತ್ತು

    ಏನಮ್ಮಿ ಹಾಡನ್ನು ಶ್ರೇಯಾ ಘೋಷಾಲ್ ಹಾಡಬೇಕಿತ್ತು

    "ಬಾಂಬೆಯಲ್ಲಿ ವಿಜಯ್ ಪ್ರಕಾಶ್ ಸ್ಟುಡಿಯೋ ಆರಂಭ ಮಾಡಿದ್ದರು. ಮೊದಲ ಹಾಡನ್ನುಅದೇ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಬೇಕು ಅಂದುಕೊಂಡಿದ್ದರು. ಆಗ ಅರ್ಜುನ್ ಜನ್ಯ ಏನಮ್ಮಿ ಯಾಕಮ್ಮಿ ಹಾಡನ್ನೇ ರೆಕಾರ್ಡ್ ಮಾಡೋಣ ಎಂದಿದ್ದರು. ಫಿಮೇಲ್ ಸಿಂಗರ್ ಶ್ರೇಯಾ ಘೋಷಾಲ್ ಈ ಹಾಡನ್ನು ಹಾಡಬೇಕಿತ್ತು. ಆದರೆ, ಅವರಿಗೆ ಆ ದಿನ ಜ್ವರ ಬಂದಿತ್ತು. ಅರ್ಜುನ್ ಜನ್ಯ ಏನು ಮಾಡೋಣ ಅಂತ ನನಗೆ ಕೇಳಿದರು. ನೀವು ನಿರ್ಧಾರ ಮಾಡಿ ಎಂದು ಹೇಳಿದ್ದೆ. ಆಗ ಯುವ ಗಾಯಕಿ ಪಾಲಕ್ ಮುಚ್ಚಾಲ್ ಅವರನ್ನು ಕರೆಸಿ ಹಾಡಿಸಿದ್ದರು. ಅದೇ ಹಾಡು ಸೂಪರ್ ಡೂಪರ್ ಹಿಟ್ ಆಯ್ತು." ಎಂದು ಮಹೇಶ್ ಆ ದಿನವನ್ನು ನೆನಪಿಕೊಳ್ಳುತ್ತಾರೆ.

    7 ಗಂಟೆಯಲ್ಲಿ ಸಾಹಿತ್ಯ ರೆಡಿಯಾಗಿತ್ತು

    7 ಗಂಟೆಯಲ್ಲಿ ಸಾಹಿತ್ಯ ರೆಡಿಯಾಗಿತ್ತು

    "ರಾತ್ರಿ 8 ಗಂಟೆಗೆ ಚಂದ್ರ ಲೇ ಔಟ್ ಮನೆಯಲ್ಲಿ ಏನಮ್ಮಿ ಯಾಕಮ್ಮಿ ಹಾಡು ಬರೆಯಲು ಭರ್ಜರಿ ಚೇತನ್ ಶುರು ಮಾಡಿದ್ದರು. ಬೆಳಗ್ಗೆ 3 ಗಂಟೆಗೆ ಇಡೀ ಹಾಡಿನ ಸಾಹಿತ್ಯ ರೆಡಿಯಿತ್ತು. ಮಾರನೇ ದಿನ ಬೆಳಗ್ಗೆ 11 ಗಂಟೆಗೆ ಅರ್ಜುನ್ ಜನ್ಯ ಅವರಿಗೆ ಸಾಹಿತ್ಯ ನೀಡಿದ್ದೇವು. 24 ಗಂಟೆಯೊಳಗೆ ಟ್ಯಾಕ್ ವರ್ಷನ್ ರೆಡಿಯಾಗಿತ್ತು. ಅರ್ಜುನ್ ಜನ್ಯ ಅವರೇ ಹಾಡಿದ್ದರು. ಏನೂ ಚೇಂಜ್ ಮಾಡಬೇಡಿ ಅಂದಿದ್ದರು. ಶೂಟಿಂಗ್ ಮುಗಿಸಿಕೊಂಡು ಬನ್ನಿ ಆಮೇಲೆ ಗಾಯಕರನ್ನು ಫೈನಲ್ ಮಾಡಿದ್ದರು ಎಂದಿದ್ದರು." ಎನ್ನುತ್ತಾರೆ ನಿರ್ದೇಶಕ ಮಹೇಶ್.

    10ಲಕ್ಷಕ್ಕೆ ಅಯೋಗ್ಯ ಹಾಡು ಖರೀದಿ

    10ಲಕ್ಷಕ್ಕೆ ಅಯೋಗ್ಯ ಹಾಡು ಖರೀದಿ

    ಆನಂದ್ ಆಡಿಯೋ ಸಂಸ್ಥೆ 'ಅಯೋಗ್ಯ' ಹಾಡುಗಳನ್ನು ಅಂದು 10 ಲಕ್ಷಕ್ಕೆ ಖರೀದಿ ಮಾಡಿದ್ದರು. ಇಂದು ಅವರು ಕೋಟ್ಯಾಂತರ ಲಾಭದಲ್ಲಿದ್ದಾರೆ ಎನ್ನತ್ತಾರೆ ನಿರ್ದೇಶಕ ಮಹೇಶ್. ಇದೇ ಕಾರಣಕ್ಕೆ 100 ಮಿಲಿಯನ್ ವೀವ್ಸ್ ಪಡೆದಿದ್ದರಿಂದ ಆನಂದ್ ಆಡಿಯೋ ಕಾರ್ಯಕ್ರಮ ಮಾಡಲಿದ್ದಾರಂತೆ. ಈ ಹಾಡಿಗೆ ಸಂಬಂಧ ಪಟ್ಟವರನ್ನು ಕರೆದು ಗ್ರ್ಯಾಂಡ್ ಇವೆಂಟ್ ಮಾಡುತ್ತಿದ್ದಾರೆ. 'ಅಯೋಗ್ಯ' ಬಿಡುಗಡೆ ಬಳಿಕ ಹಲವು ಸೆಂಟರ್‌ಗಳಲ್ಲಿ 100 ದಿನ ಪೂರೈಸಿ, ಯಶಸ್ವಿ ಸಿನಿಮಾ ಎನಿಸಿಕೊಂಡಿತ್ತು.

    English summary
    Ninasam Sathish Rachita Ram Starrer Ayogya Movie song Yenammi Yakammi got 100 million views. Madagaja fame director Mahesh Kumar directed first movie.
    Friday, January 28, 2022, 17:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X