'ಹೊಡಿರೆಲೆ ಹಲಗಿ'.. ನಿಶ್ವಿಕಾ ಟಪ್ಪಾಂಗುಚಿ: ಎಲ್ಲರಿಗೂ ಆಕೆಯ ಸಿಕ್ಸ್‌ಪ್ಯಾಕ್ ಮೇಲೆ ಕಣ್ಣು

By ಫಿಲ್ಮಿಬೀಟ್ ಡೆಸ್ಕ್

ಯೋಗರಾಜ್‌ ಭಟ್ ನಿರ್ದೇಶನದ 'ಗರಡಿ' ಚಿತ್ರದ ಸ್ಪೆಷಲ್ ಸಾಂಗ್ ರಿಲೀಸ್ ಆಗಿದೆ. ನಿಶ್ವಿಕಾ ನಾಯ್ಡು ಉತ್ತರ ಕರ್ನಾಟಕ ಶೈಲಿಯ ಬಿಂದಾಸ್ ನಂಬರ್‌ಗೆ ಟಪ್ಪಾಂಗುಚಿ ಸ್ಟೆಪ್ಸ್ ಹಾಕಿ ರಂಗೇರಿಸಿದ್ದಾರೆ. ಮತ್ತೊಮ್ಮೆ ಭಟ್ರು ಹಾಗೂ ವಿ. ಹರಿಕೃಷ್ಣ ಕಾಂಬಿನೇಷನ್‌ ಕ್ಲಿಕ್ ಆಗಿದೆ. 'ಹೊಡಿರೆಲೆ ಹಲಗಿ' ಸಾಂಗ್‌ ಕಿಕ್ ಕೊಡ್ತಿದೆ. ಲಿರಿಕಲ್ ವಿಡಿಯೋ ಸಾಂಗ್ ವೈರಲ್ ಆಗ್ತಿದೆ.

ಯೋಗರಾಜ್ ಭಟ್ ಸಾರಥ್ಯದ ಚಿತ್ರದಲ್ಲಿ ಬಿ. ಸಿ ಪಾಟೀಲ್ ಹಾಗೂ ಯಶಸ್ ಸೂರ್ಯ ಲೀಡ್‌ ರೋಲ್‌ಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಚಿತ್ರದ ವಿಶೇಷ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಕುಸ್ತಿ ಕ್ರೀಡೆಯ ಸುತ್ತಾ ಚಿತ್ರದ ಕಥೆ ಸುತ್ತುತ್ತದೆ. ಬಾದಾಮಿ, ಐಹೊಳೆ, ಪಟ್ಟದಕಲ್ಲು ಸುತ್ತಾಮುತ್ತಾ 'ಗರಡಿ' ಸಿನಿಮಾ ಚಿತ್ರೀಕರಣ ನಡೆದಿದೆ. ಸೋನಲ್ ಮಂತೆರೋ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಧರ್ಮಣ್ಣ ಕಡೂರು, ರವಿಶಂಕರ್‌ ತಾರಾಗಣದಲ್ಲಿದ್ದಾರೆ.

Nishvika Naidu flaunts her sizzling hot moves in Garadi song Hodirele Halagi, video goes viral

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ 'ಹೊಡಿರೆಲೆ ಹಲಗಿ' ಸಾಂಗ್ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೇಕಿಂಗ್ ಝಲಕ್ ಮಿಕ್ಸ್ ಮಾಡಿ ಚಿತ್ರತಂಡ ವಿಡಿಯೋ ತೇಲಿಬಿಟ್ಟಿದೆ. ನಿರ್ದೇಶಕ ಯೋಗರಾಜ್ ಭಟ್ ತಮಟೆ ಬಡಿಯುತ್ತಲೇ ವೇದಿಕೆಗೆ ಆಗಮಿಸಿದ್ದರು ವಿಶೇಷ. ಶೀಘ್ರದಲ್ಲೇ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ.

ನಿಶ್ವಿಕಾ ಸಿಕ್ಸ್‌ಪ್ಯಾಕ್ ದರ್ಶನ

ಎ. ಹರ್ಷ ಕೊರಿಯೋಗ್ರಫಿಯಲ್ಲಿ 'ಹೊಡಿರೆಲೆ ಹಲಗಿ' ಸಾಂಗ್ ಶೂಟ್ ಮಾಡಲಾಗಿದೆ. ಡಾಬ ಮಾದರಿಯ ಸೆಟ್‌ನಲ್ಲಿ ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿ ಸಾಂಗ್ ಶೂಟ್ ಮಾಡಲಾಗಿದೆ. ನಿಶ್ವಿಕಾ ನಾಯ್ಡು ಸಿಕ್ಕಾಪಟ್ಟೆ ವರ್ಕೌಟ್ ಮಾಡಿ ಸಿಕ್ಸ್‌ಪ್ಯಾಕ್ ಮಾಡಿದ್ದಾರೆ. ಹೊಟ್ಟೆ ಕಾಣಿಸುವಂತೆ ತುಂಡು ಕಾಸ್ಟ್ಯೂಮ್‌ನಲ್ಲಿ ನಿಶ್ವಿಕಾ ಮಿಂಚಿದ್ದಾರೆ. ಸಿಕ್ಸ್‌ಪ್ಯಾಕ್ ಪ್ರದರ್ಶಿಸುತ್ತಾ ಬಿಂದಾಸ್ ಆಗಿ ಕುಣಿದಿದ್ದಾರೆ. ಒಂದಷ್ಟು ಡ್ಯಾನ್ಸರ್ಸ್ ಆಕೆಗೆ ಸಾಥ್ ಕೊಟ್ಟಿದ್ದಾರೆ.

ಪದೇ ಪದೇ ಕೇಳುವಂತಹ ಹಾಡು

ಈಗಾಗಲೇ ಭಟ್ರು ಸಾಕಷ್ಟು ಎಣ್ಣೆ ಸಾಂಗ್ಸ್ ಬರೆದಿದ್ದಾರೆ. ಆದರೆ ಉತ್ತರ ಕರ್ನಾಟಕ ಶೈಲಿಯ ಭಾಷೆಯಲ್ಲಿ ಈ ಸಾಂಗ್ ಲಿರಿಕ್ಸ್ ಸಖತ್ ಮಜವಾಗಿದೆ. ಪದೇ ಪದೇ ಗುನುಗುವಂತಿದೆ. ಹರಿ- ಭಟ್ರ ಕಾಂಬೋ ಸೂಪರ್ ಎಂದು ಕೆಲವರು ರಿಪೀಟ್ ಮೋಡ್‌ನಲ್ಲಿ 'ಹೊಡಿರೆಲೆ ಹಲಗಿ' ಸಾಂಗ್ ಕೇಳ್ತಿದ್ದಾರೆ. ಮೇಘನಾ ಹಲಿಯಾಲ್ ವಾಯ್ಸ್ ಮತ್ತಷ್ಟು ಖದರ್ ತಂದುಕೊಟ್ಟಿದೆ. ಛಾಯಾಗ್ರಾಹಕ ನಿರಂಜನ್ ಬಾಬು ಬಹಳ ಸೊಗಸಾಗಿ ಸಾಂಗ್ ಸೆರೆ ಹಿಡಿದಿದ್ದಾರೆ.

Nishvika Naidu flaunts her sizzling hot moves in Garadi song Hodirele Halagi, video goes viral

ನಿಶ್ವಿಕಾ ನಾಯ್ಡು ಹೇಳಿದ್ದೇನು?

ಇದೇ ಮೊದಲ ಬಾರಿಗೆ ನಟಿ ನಿಶ್ವಿಕಾ ನಾಯ್ಡು ಸ್ಪೆಷಲ್ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದಾರೆ. "ನನಗೆ ಡ್ಯಾನ್ಸ್ ಅಂದರೆ ಪಂಚಪ್ರಾಣ. ನಾನು ಡ್ಯಾನ್ಸ್ ಮಾಡೋದಕ್ಕೆ ಒಂದು ಒಳ್ಳೆ ಅವಕಾಶಕ್ಕಾಗಿ ಕಾಯ್ತಿದ್ದೆ. ಅದರಲ್ಲೂ ಇಂತಹ ಸಾಂಗ್ ಸಿಕ್ಕಿದ್ದು ಖುಷಿ ಆಗ್ತಿದೆ. ಇದಕ್ಕಾಗಿ ಯೋಗರಾಜ್ ಭಟ್ ಸರ್‌ಗೆ ದೊಡ್ಡ ಥ್ಯಾಂಕ್ಸ್. ಹಂಗೂ ಹಿಂಗೂ ಭಟ್ಟರ ಜೊತೆ 3 ಸಿನಿಮಾ ಮಾಡಿದಂತಾಯ್ತು. ಹಾಗಾಗಿ ಅವರು ಕರೆ ಮಾಡಿ ಹೇಳಿದ ತಕ್ಷಣ ಈ ಹಾಡಿನಲ್ಲಿ ಕಾಣಿಸಿಕೊಳ್ಳಲು ಒಪ್ಪಿಕೊಂಡೆ" ಎಂದು ನಿಶ್ವಿಕಾ ಹೇಳಿದ್ದಾರೆ.

ಶೀಘ್ರದಲ್ಲೇ ಸಿನಿಮಾ ರಿಲೀಸ್

ಚಿತ್ರದ ಬಗ್ಗೆ ನಟ, ನಿರ್ಮಾಪಕ ಬಿ. ಸಿ ಪಾಟೀಲ್ ಮಾತನಾಡಿ ಇದು ಕ್ರೀಡೆ ಆಧರಿತ ಸಿನಿಮಾ. ಎಲ್ಲಾ ವರ್ಗದವರು ಎಂಜಾಯ್‌ ಮಾಡುವಂತಹ ಕಥೆಯನ್ನು ಯೋಗರಾಜ್‌ ಭಟ್ ತೆರೆಗೆ ತರುತ್ತಿದ್ದಾರೆ. ಈ ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆ. ಅದರಲ್ಲಿ ಒಂದು ಸಾಂಗ್‌ನ ಈಗ ರಿಲೀಸ್ ಮಾಡಿದ್ದೇವೆ, ನಿಶ್ವಿಕಾ ನಾಯ್ಡು ಡ್ಯಾನ್ಸ್ ಮಾಡಿದ್ದಾರೆ. ಎಲ್ಲಾ ಹಾಡುಗಳು ಚೆನ್ನಾಗಿ ಬಂದಿದೆ. ಪ್ರತಿಭಾನ್ವಿತ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಎಲ್ಲರೂ ಸಿನಿಮಾ ನೋಡಿ ಹರಸಿ ಎಂದಿದ್ದಾರೆ.

More from Filmibeat

English summary
Nishvika Naidu flaunts her sizzling hot moves in Garadi song Hodirele Halagi, video goes viral. she shows off her 6 pack abs in the song. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X