ಯುವ ಪ್ರೇಮಿಗಳ ಮನಸ್ಸು ತಲ್ಲಣಗೊಳಿಸಿದ 'ಓ ಸಂಜೆ' ಹಾಡು

By Bharath Kumar

ಕನ್ನಡದಲ್ಲಿ ಅನೇಕ ರೊಮ್ಯಾಟಿಂಗ್ ಹಾಡುಗಳು ಬಂದಿವೆ. ಆ ಸಮಯಕ್ಕೆ ಅದು ಕೇಳುಗರಿಗೆ ಖುಷಿ ಕೊಡುತ್ತೆ. ಇದೀಗ, ಇಂತಹ ವಿಭಾಗಕ್ಕೆ ಸೇರುವ ಬ್ಯೂಟಿಫುಲ್ ಹಾಡೊಂದು ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

ರಾಜೇಶ್ ವೇಣೂರು ನಿರ್ದೇಶನದಲ್ಲಿ ತಯಾರಾಗಿರುವ 'ಅಸತೋಮ ಸದ್ಗಮಯ' ಚಿತ್ರದ 'ಓ ಸಂಜೆ ಸಂಜೇಯ.....' ಹಾಡನ್ನ ಈಗ ಸಂಗೀತ ಪ್ರಿಯರು ಗುನುಗುತ್ತಿದ್ದಾರೆ.

o sanje sanjeye song from Asathoma Sadgamaya movie

ಯುವ ಪ್ರೇಮಿಗಳ ಮನಸ್ಸು ತಲ್ಲಣಗೊಳಿಸಿರುವ ಈ ಹಾಡಿನ ವಿಡಿಯೋ ತುಣುಕು ಅಷ್ಟೇ ಮುದ್ದಾಗಿದೆ. ಈ ಹಾಡಿನಲ್ಲಿ ನಟ ಕಿರಣ್ ರಾಜ್ ಮತ್ತು ಬಿಗ್ ಬಾಸ್ ಖ್ಯಾತಿಯ ಲಾಸ್ಯ ಇಬ್ಬರು ಕಾಣಿಸಿಕೊಂಡಿದ್ದು, ತುಂಬಾ ಕ್ಯೂಟ್ ಆಗಿದ್ದಾರೆ.

ಅಂದ್ಹಾಗೆ, ವಾಹಬ್ ಸಲೀಂ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಅವರೇ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಲಪ್ ರಾಜು ಮತ್ತು ಪದ್ಮಲತಾ ಅವರ ಧ್ವನಿಯಲ್ಲಿ ಈ ಚೆಂದದ ಹಾಡು ಮೂಡಿಬಂದಿದೆ.

ಇನ್ನುಳಿದಂತೆ ರಾಧಿಕಾ ಚೇತನ್, ಕಿರಣ್ ರಾಜ್, 'ಬಿಗ್ ಬಾಸ್' ಖ್ಯಾತಿಯ ಲಾಸ್ಯ, 'ಡ್ರಾಮಾ ಜೂನಿಯರ್ಸ್' ಖ್ಯಾತಿ ಚಿತ್ರಾಲಿ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ರಾಜೇಶ್ ವೇಣೂರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಅಶ್ವಿನ್ ಜೆ ಪಿರೇರಾ ಬಂಡವಾಳ ಹೂಡಿದ್ದಾರೆ. ಕಿಶೋರ್ ಕುಮಾರ್ ಅವರ ಛಾಯಾಗ್ರಾಹಣ ಹಾಗೂ ರವಿಚಂದ್ರನ್ ಅವರ ಸಂಕಲನ ಚಿತ್ರಕ್ಕಿದೆ. ಜುಲೈ 6 ರಂದು 'ಅಸತೋಮ ಸದ್ಗಮಯ' ಸಿನಿಮಾ ರಾಜ್ಯಾದ್ಯಂತ ತೆರೆಕಾಣುತ್ತಿದೆ.

More from Filmibeat

English summary
Here goes the 'o sanje sanjeye...' video from Asathoma Sadgamaya movie. Sung by alap raju and padmalatha. Movie releasing on July 6th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X