For Quick Alerts
  ALLOW NOTIFICATIONS  
  For Daily Alerts

  ಯುವ ಪ್ರೇಮಿಗಳ ಮನಸ್ಸು ತಲ್ಲಣಗೊಳಿಸಿದ 'ಓ ಸಂಜೆ' ಹಾಡು

  By Bharath Kumar
  |

  ಕನ್ನಡದಲ್ಲಿ ಅನೇಕ ರೊಮ್ಯಾಟಿಂಗ್ ಹಾಡುಗಳು ಬಂದಿವೆ. ಆ ಸಮಯಕ್ಕೆ ಅದು ಕೇಳುಗರಿಗೆ ಖುಷಿ ಕೊಡುತ್ತೆ. ಇದೀಗ, ಇಂತಹ ವಿಭಾಗಕ್ಕೆ ಸೇರುವ ಬ್ಯೂಟಿಫುಲ್ ಹಾಡೊಂದು ಬಿಡುಗಡೆಯಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.

  ರಾಜೇಶ್ ವೇಣೂರು ನಿರ್ದೇಶನದಲ್ಲಿ ತಯಾರಾಗಿರುವ 'ಅಸತೋಮ ಸದ್ಗಮಯ' ಚಿತ್ರದ 'ಓ ಸಂಜೆ ಸಂಜೇಯ.....' ಹಾಡನ್ನ ಈಗ ಸಂಗೀತ ಪ್ರಿಯರು ಗುನುಗುತ್ತಿದ್ದಾರೆ.

  ಬಾಲ್ಯದ ನೆನಪುಗಳನ್ನ ಹೊತ್ತು ತರುವ 'ಟಿಂಗ ಲಿಂಗ' ಹಾಡು.!ಬಾಲ್ಯದ ನೆನಪುಗಳನ್ನ ಹೊತ್ತು ತರುವ 'ಟಿಂಗ ಲಿಂಗ' ಹಾಡು.!

  ಯುವ ಪ್ರೇಮಿಗಳ ಮನಸ್ಸು ತಲ್ಲಣಗೊಳಿಸಿರುವ ಈ ಹಾಡಿನ ವಿಡಿಯೋ ತುಣುಕು ಅಷ್ಟೇ ಮುದ್ದಾಗಿದೆ. ಈ ಹಾಡಿನಲ್ಲಿ ನಟ ಕಿರಣ್ ರಾಜ್ ಮತ್ತು ಬಿಗ್ ಬಾಸ್ ಖ್ಯಾತಿಯ ಲಾಸ್ಯ ಇಬ್ಬರು ಕಾಣಿಸಿಕೊಂಡಿದ್ದು, ತುಂಬಾ ಕ್ಯೂಟ್ ಆಗಿದ್ದಾರೆ.

  ಅಮ್ಮಂದಿರಿಗಾಗಿ ಅನುರಾಧ ಭಟ್ ಹಾಡಿರುವ ಹೊಸ ಹಾಡು ಕೇಳಿ ಅಮ್ಮಂದಿರಿಗಾಗಿ ಅನುರಾಧ ಭಟ್ ಹಾಡಿರುವ ಹೊಸ ಹಾಡು ಕೇಳಿ

  ಅಂದ್ಹಾಗೆ, ವಾಹಬ್ ಸಲೀಂ ಈ ಹಾಡಿಗೆ ಸಾಹಿತ್ಯ ರಚಿಸಿದ್ದು, ಅವರೇ ಸಂಗೀತ ನಿರ್ದೇಶನ ಮಾಡಿದ್ದಾರೆ. ಅಲಪ್ ರಾಜು ಮತ್ತು ಪದ್ಮಲತಾ ಅವರ ಧ್ವನಿಯಲ್ಲಿ ಈ ಚೆಂದದ ಹಾಡು ಮೂಡಿಬಂದಿದೆ.

  ಇನ್ನುಳಿದಂತೆ ರಾಧಿಕಾ ಚೇತನ್, ಕಿರಣ್ ರಾಜ್, 'ಬಿಗ್ ಬಾಸ್' ಖ್ಯಾತಿಯ ಲಾಸ್ಯ, 'ಡ್ರಾಮಾ ಜೂನಿಯರ್ಸ್' ಖ್ಯಾತಿ ಚಿತ್ರಾಲಿ ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

  ರಾಜೇಶ್ ವೇಣೂರು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಅಶ್ವಿನ್ ಜೆ ಪಿರೇರಾ ಬಂಡವಾಳ ಹೂಡಿದ್ದಾರೆ. ಕಿಶೋರ್ ಕುಮಾರ್ ಅವರ ಛಾಯಾಗ್ರಾಹಣ ಹಾಗೂ ರವಿಚಂದ್ರನ್ ಅವರ ಸಂಕಲನ ಚಿತ್ರಕ್ಕಿದೆ. ಜುಲೈ 6 ರಂದು 'ಅಸತೋಮ ಸದ್ಗಮಯ' ಸಿನಿಮಾ ರಾಜ್ಯಾದ್ಯಂತ ತೆರೆಕಾಣುತ್ತಿದೆ.

  English summary
  Here goes the 'o sanje sanjeye...' video from Asathoma Sadgamaya movie. Sung by alap raju and padmalatha. Movie releasing on July 6th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X