ವಿಡಿಯೋ: ನಂಜಿ ಮೇಲೆ 'ಒಡೆಯ'ನಿಗೆ ಶಾನೆ ಲವ್ ಆಗಿದೆ
'ಒಡೆಯ' ಸಿನಿಮಾದ ಎರಡನೇ ಹಾಡು ಇದೀಗ ಬಿಡುಗಡೆಯಾಗಿದೆ. ಆನಂದ್ ಆಡಿಯೋ ಯೂ ಟ್ಯೂಬ್ ಚಾನಲ್ ನಲ್ಲಿ ಹಾಡು ಹೊರಬಂದಿದೆ.
'ಶಾನೆ ಲವ್ ಆಗೋತಲ್ಲೇ ನಂಜಿ..' ಇದು ಸಿನಿಮಾದ ಎರಡನೇ ಹಾಡು. ಇದೊಂದು ಲವ್ ಸಾಂಗ್ ಆಗಿದೆ. ಹಾಡಿನಲ್ಲಿ ನಂಜ ದರ್ಶನ್ ಹಾಗೂ ನಂಜಿ ಸನಾ ತಿಮ್ಮಯ್ಯ ಡ್ಯುಯೆಟ್ ಹಾಡಿದ್ದಾರೆ. ಸ್ಟೈಲಿಷ್ ಆಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಇದೊಂದು ಟಪ್ಪಾಂಗುಚಿ ಹಾಡಾಗಿದೆ.

ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನೀಡಿದ್ದಾರೆ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಹೇಮಂತ್ ಮತ್ತು ಇಂದು ನಾಗರಾಜ್ ಹಾಡು ಹಾಡಿದ್ದಾರೆ. ಈ ಹಾಡನ್ನು ಜನ ಹೇಗೆ ಸ್ವೀಕರಿಸುತ್ತಾರೆ ಎನ್ನುವ ಕುತೂಹಲ ಇದೆ.
'ಒಡೆಯ' ತಮಿಳಿನ 'ವೀರಂ' ಸಿನಿಮಾದ ರಿಮೇಕ್. ಕನ್ನಡದಲ್ಲಿ ಚಿತ್ರವನ್ನು ಎಂ ಡಿ ಶ್ರೀಧರ್ ನಿರ್ದೇಶನ ಮಾಡುತ್ತಿದ್ದಾರೆ. 'ಬುಲ್ ಬುಲ್' ನಂತರ ಮತ್ತೆ ಎಮ್ ಡಿ ಶ್ರೀಧರ್ ಹಾಗೂ ದರ್ಶನ್ ಒಂದಾಗಿದ್ದಾರೆ.
'ಒಡೆಯ' ಸಿನಿಮಾದ ಒಂದೊಂದೆ ಹಾಡುಗಳು ಬಿಡುಗಡೆ ಆಗುತ್ತಿವೆ. ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗುವ ಸಾಧ್ಯತೆ ಇದೆ.
English summary
'Odeya' kannada movie 2nd song out.


Click it and Unblock the Notifications