ವೇದಿಕೆ ಮೇಲೆಯೇ ಕುಸಿದು ಬಿದ್ದು ಗಾಯಕ ನಿಧನ!

ಹಠಾತ್ ಸಾವು ಪ್ರಕರಣಗಳು ಹೆಚ್ಚಾಗುತ್ತಿರವ ಹೊತ್ತಿನಲ್ಲೇ, ಜನಪ್ರಿಯ ಗಾಯಕರೊಬ್ಬರು ವೇದಿಕೆ ಮೇಲೆ ಹಾಡುತ್ತಿರುವಾಗಲೇ ಕುಸಿದು ಜೀವ ಬಿಟ್ಟಿರುವ ಘಟನೆ ನಡೆದಿದೆ.

ಒಡಿಯಾದ ಜನಪ್ರಿಯ ಗಾಯಕ ಮುರಳಿ ಮೋಹಪಾತ್ರ ಅವರು ದುರ್ಗಾ ಪೂಜೆಯ ಕಾರ್ಯಕ್ರಮವೊಂದರಲ್ಲಿ ಹಾಡುತ್ತಿದ್ದರು. ಆ ವೇಳೆ ವೇದಿಕೆಯಲ್ಲಿಯೇ ಮುರಳಿ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರು ಆಸ್ಪತ್ರೆಗೆ ದಾಖಲಿಸುವ ಹೊತ್ತಿನ್ಲಲಿಯೇ ನಿಧನ ಹೊಂದಿದರು. ಅವರಿಗೆ 59 ವರ್ಷ ವಯಸ್ಸಾಗಿತ್ತು.

ಮುರಳಿ ಮೋಹಪಾತ್ರ ಅವರು ಒಡಿಸ್ಸಾದ ಕೋರಪುತ್ ಜಿಲ್ಲೆಯ ಜೇಯ್‌ಪುರ್‌ನಲ್ಲಿ ಗಾಯನ ಪ್ರದರ್ಶನ ನೀಡುತ್ತಿದ್ದರು. ಕೆಲವು ಹಾಡುಗಳನ್ನು ಹಾಡಿದ ಮುರಳಿ ಮೋಹಪಾತ್ರ ಕುರ್ಚಿಯಲ್ಲಿ ಕುಳಿತು ಬೇರೆ ಗಾಯಕರ ಹಾಡು ಕೇಳುತ್ತಿದ್ದರು. ಅ ವೇಳೆ ಕುರ್ಚಿಯಿಂದ ಕೆಳಗೆ ಬಿದ್ದರು ಮುರಳಿ ಮೋಹಪಾತ್ರ. ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು ಆದರೆ ಅದು ಪ್ರಯೋಜನವಾಗಲಿಲ್ಲ.

Odiya Popular Singer Murali Mohapatra Died On Stage While Performing

ಗಾಯಕ ಮುರಳಿ ಮೋಹಪಾತ್ರ ನಿಧನಕ್ಕೆ ಒಡಿಸ್ಸಾ ಸಿಎಂ ನವೀನ್ ಪಟ್ನಾಯಕ್ ಸೇರಿದಂತೆ ಹಲವು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ''ಮುರಳಿ ಮೋಹಪಾತ್ರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ. ಅವರ ಮಧುರವಾದ ಧ್ವನಿ ಕೇಳುಗರ ಹೃದಯಕ್ಕೆ ಸದಾ ಬೆಳಕು ಹರಿಸಲಿದೆ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ, ಅವರ ಕುಟುಂಬಕ್ಕೆ ನನ್ನ ಸಂತಾಪಗಳು'' ಎಂದಿದ್ದಾರೆ ಸಿಎಂ ನವೀನ್ ಪಟ್ನಾಯಕ್.

ಮುರಳಿ ಮೋಹಪಾತ್ರ ಒಡಿಸ್ಸಾನಲ್ಲಿ ಕೋಕಾ ಭಾಯ್ ಎಂದೇ ಜನಪ್ರಿಯರು. ಕೋರಾಪುತ್ ಜಿಲ್ಲೆಯ ಗಾಯಕ ದಿವಂಗತ ಅಕ್ಷಯ್ ಮೋಹಂತಿ ಅವರ ಶೈಲಿಯಲ್ಲಿಯೇ ಮುರಳಿ ಹಾಡುತ್ತಿದ್ದ ಕಾರಣ ಅವರಿಗೆ ಕೋಕಾ ಭಾಯ್ ಎಂಬ ಹೆಸರು ಬಂದಿತ್ತು. ಮುರಳಿ ಅವರನ್ನು ಜಯ್‌ಪುರದ ಅಕ್ಷಯ್ ಮೊಹಂತಿ ಎಂದು ಕರೆಯುತ್ತಿದ್ದರು.

ಇದೇ ವರ್ಷಾರಂಭದಲ್ಲಿ ಖ್ಯಾತ ಗಾಯಕ ಕೆಕೆ ಸಹ ಗಾಯನ ಕಾರ್ಯಕ್ರಮ ನೀಡುವಾಗಲೇ ಕುಸಿದು ಬಿದ್ದು ನಿಧನ ಹೊಂದಿದ್ದರು. ಈಗ ಮುರಳಿ ಮೋಹಪಾತ್ರ ಸಹ ಅದೇ ಹಾದಿ ಹಿಡಿದಿದ್ದಾರೆ.

More from Filmibeat

English summary
Famous Odiya singer Murali Mohapatra died on stage while performing in a Durga Pooja event in Odisha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X