»   » ಆಧುನಿಕ ಹೆಣ್ಣು ಮಕ್ಕಳೇ ದಯವಿಟ್ಟು ಈ ಬೋಳು ಮಕ್ಕಳ ಗೋಳು ಕೇಳಿ.....

ಆಧುನಿಕ ಹೆಣ್ಣು ಮಕ್ಕಳೇ ದಯವಿಟ್ಟು ಈ ಬೋಳು ಮಕ್ಕಳ ಗೋಳು ಕೇಳಿ.....

Posted By:
Subscribe to Filmibeat Kannada

ಟ್ರೇಲರ್ ಮೂಲಕ ಕನ್ನಡದಲ್ಲಿ ಹೊಸ ಸೆನ್ಸೆಷ್ನಲ್ ಹುಟ್ಟುಹಾಕಿರುವ 'ಒಂದು ಮೊಟ್ಟೆಯ ಕಥೆ' ಚಿತ್ರ ಈಗ ಹಾಡಿನ ಮೂಲಕ ಮತ್ತೆ ದೊಡ್ಡ ಸುದ್ದಿ ಮಾಡಿದೆ. ಚಿತ್ರದ ಟೈಟಲ್ ಹಾಡು ಬಿಡುಗಡೆಯಾಗಿದ್ದು, ಈ ಹಾಡನ್ನ ಕೇಳಿ ಜನರು ಸಿಕ್ಕಾಪಟ್ಟೆ ಎಂಜಾಯ್ ಮಾಡುತ್ತಿದ್ದಾರೆ.[ವಿಡಿಯೋ: ತಲೆಮೇಲೆ ಕೂದಲು ಇಲ್ಲದವರು ನೋಡಲೇಬೇಕಾದ 'ಒಂದು ಮೊಟ್ಟೆಯ ಕಥೆ' ]

ಬೋಳು ತಲೆಯ ಹುಡುಗರಿಗೆ ಏನೆಲ್ಲ ಕಷ್ಟಗಳು ಬರುತ್ತೆ ಎಂಬುದನ್ನ ಈ ಹಾಡಿನ ಮೂಲಕ ಹೇಳಲಾಗಿದೆ. ಆಧುನಿಕ ಹೆಣ್ಣು ಮಕ್ಕಳು ಇಂತವರನ್ನ ಗೋಳನ್ನ ಕೇಳಬೇಕು ಎಂದು ಮನವಿ ಮಾಡಲಾಗಿದೆ. ಕನ್ನಡ ಪ್ರೇಕ್ಷಕರಂತೂ ಈ ಬೋಳು ಮಕ್ಕಳು ಗೋಳು ಕೇಳಿ ಕಣ್ಣೀರು ಹಾಕುತ್ತಿದ್ದಾರೆ.

Ondu Motteya Kathe Movie Motte Song Release

ಅಂದ್ಹಾಗೆ, ಈ ಚಿತ್ರವನ್ನ ರಾಜ್ ಬಿ. ಶೆಟ್ಟಿ ನಟಿಸಿ ನಿರ್ದೇಶನ ಮಾಡುತ್ತಿದ್ದಾರೆ. ಲೂಸಿಯಾ‌ ನಿರ್ದೇಶಕ ಪವನ್ ಕುಮಾರ್ ಒಂದು ಮೊಟ್ಟೆಯ ಕಥೆ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಮಿಥುನ್ ಮುಕುಂದನ್ ಅವರ ಸಂಗೀತ ನೀಡಿದ್ದು ಹಾಡುಗಳು ಗಮನ ಸೆಳೆಯುತ್ತಿದೆ. ಉಳಿದಂತೆ ಒಂದು ಮೊಟ್ಟೆಯ ಕಥೆ ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರ ಜೊತೆ ಶೈಲ ಶ್ರೀ ಸೇರಿದಂತೆ ಮುಂತಾದವರು ಅಭಿನಯಿಸಿದ್ದಾರೆ.

ಇಲ್ಲಿದೆ ನೋಡಿ 'ಬೋಳು ಮಕ್ಕಳು ಗೋಳು' ಹೇಳುವ ಮೊಟ್ಟೆ ಹಾಡು......

English summary
Ondu Motteya Kathe Movie The Motte Song Release. The Movie Starring and Directing Raj B Shetty. Music by Midhun Mukundan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada