'ಒಂದು ಮೊಟ್ಟೆಯ ಕಥೆ' ಪ್ರಮೋಶನ್ ನಲ್ಲಿ ಕಟ್ಟಪ್ಪ ಪ್ರತ್ಯಕ್ಷ
'ಒಂದು ಮೊಟ್ಟೆಯ ಕಥೆ' ಸಿನಿಮಾ ನಾಳೆ (ಜುಲೈ7) ರಾಜ್ಯಾದ್ಯಂತ ತೆರೆಗೆ ಬರಲಿದೆ. ಸದ್ಯ ಈಗ ಸಿನಿಮಾದ ಪ್ರಮೋಶನಲ್ ಸಾಂಗ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
'ಒಂದು ಮೊಟ್ಟೆಯ ಕಥೆ'ಯ ಪ್ರಮೋಶನಲ್ ಸಾಂಗ್ ಸಿಕ್ಕಾಪಟ್ಟೆ ಕ್ಯಾಚಿ ಆಗಿದೆ. ವಿಶೇಷ ಅಂದರೆ ಈ ಹಾಡಿನಲ್ಲಿ ಕಟ್ಟಪ್ಪ, ರಜನಿ ಕಾಂತ್, ಇಂದ್ರಜಿತ್ ಲಂಕೇಶ್, ಹಾಲಿವುಡ್ ನಟ ವಿನ್ ಡೀಸೆಲ್ ಅವರ ಫೋಟೋಗಳನ್ನು ಬಳಸಲಾಗಿದೆ. ಈ ರೀತಿ ಬೋಳು ತಲೆಯ ಗೋಳು ಮತ್ತು ಅದರ ಘನತೆಯನ್ನು ಹಾಡಿನಲ್ಲಿ ವಿವರಿಸಿದ್ದಾರೆ.

'ಸರಿಗಮಪ ಸೀಸನ್ 13' ಖ್ಯಾತಿಯ ಗಾಯಕ ಸಂಚಿತ್ ಹೆಗ್ಡೆ ಈ ಹಾಡನ್ನು ಹಾಡಿದ್ದಾರೆ ಇನ್ನೂ ಈ ಹಾಡಿನ ಬಗ್ಗೆ ಹೆಚ್ಚು ಹೇಳುವುದಕ್ಕಿಂತ ನೋಡುವುದರಲ್ಲಿ ಕಿಕ್ ಜಾಸ್ತಿ ಇದೆ. 'ಒಂದು ಮೊಟ್ಟೆಯ ಕಥೆ'ಯ ಈ ವಿಶೇಷ ಹಾಡನ್ನು ನೋಡಲು ಈ ಲಿಂಕ್ ಕ್ಲಿಕ್ಕಿಸಿ.
English summary
Watch video : Kannada Movie 'Ondu Motteya Kathe' promotional Song Out


Click it and Unblock the Notifications