»   » ಪ್ರಿಯಾಮಣಿ ಜತೆ ದರ್ಶನ್ ಅಸುಕು ಪಸುಕು ಲಸಕು!

ಪ್ರಿಯಾಮಣಿ ಜತೆ ದರ್ಶನ್ ಅಸುಕು ಪಸುಕು ಲಸಕು!

Posted By:
Subscribe to Filmibeat Kannada

ಈ ವರ್ಷದ ಅದ್ದೂರಿ ಚಿತ್ರವೆಂದೇ ಬಿಂಬಿತವಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಿತ್ರ 'ಅಂಬರೀಶ' ಈಗ ಅಂತಿಮ ಹಂತ ತಲುಪಿದೆ. ಇತ್ತೀಚೆಗೆ ಈ ಚಿತ್ರಕ್ಕಾಗಿ ಒಂದು ಚೇತೋಹಾರಿ ರೊಮ್ಯಾಂಟಿಕ್ ಗೀತೆಯನ್ನು ಚಿತ್ರೀಕರಿಸಿಕೊಳ್ಳಲಾಯಿತು.

"ಅಸುಕು, ಪಸುಕು ಲಸಕು ಮುಸುಕು ನನ್ನ ಒಳಗೆ ಛಳಕು ಛಳಕು...ಮುಸುಕು ಮಸುಕು ಮನಸ್ನಲ್ಲಿ ಇಣುಕು ಸೊಂಟದಲ್ಲಿ ತೆಗಿಯೋ ಉಳುಕು..." ಎಂಬ ಗೀತೆಯನ್ನು ದರ್ಶನ್ ಹಾಗೂ ಪ್ರಿಯಾಮಣಿ ಅಭಿನಯದೊಂದಿಗೆ ಅಬ್ಬಾಯಿ ನಾಯ್ಡು ಸ್ಟುಡಿಯೋವಿನಲ್ಲಿ ಚಿತ್ರೀಕರಿಕೊಳ್ಳಲಾಯಿತು. [ದರ್ಶನ್ 'ಅಂಬರೀಶ' ಹಾಡಿಗೆ ರು.80 ಲಕ್ಷ]

ಸರಿಸುಮಾರು ರು. 50 ಲಕ್ಷ ವೆಚ್ಚದಲ್ಲಿ ಈಶ್ವರಿಕುಮಾರ್ ಹಾಕಿದ್ದ ಭವ್ಯ ಸೆಟ್ ನಲ್ಲಿ ಗಣೇಶ್ (ಹೈದ್ರಾಬಾದ್) ನೃತ್ಯ ನಿರ್ದೇಶನದೊಂದಿಗೆ ಸತ್ಯ ಹೆಗ್ಡೆ ಛಾಯಾಗ್ರಹಣದಲ್ಲಿ ನಿರ್ದೇಶಕ ಕೆ.ಮಹೇಶ್ ಸುಖಧರೆ ಚಿತ್ರಿಸಿಕೊಂಡರು.

ಚಿತ್ರಕ್ಕೆ ಕಥೆ, ಸಂಭಾಷಣೆ ಚಿಂತನ್, ಛಾಯಾಗ್ರಹಣ ಸತ್ಯ, ಸಾಹಿತ್ಯ ನಾಗೇಂದ್ರ ಪ್ರಸಾದ್, ಸಂಗೀತ ಹರಿಕೃಷ್ಣ, ಕಲೆ ಈಶ್ವರಿಕುಮಾರ್, ಸಾಹಸ ರವಿವರ್ಮ, ನೃತ್ಯ ಮುರುಳಿ ಗಣೇಶ್, ಕಲೈ, ಸಂಕಲನ ಪ್ರಕಾಶ್, ನಿರ್ಮಾಣ ಮೇಲ್ವಿಚಾರಣೆ ಮೋಹನ್, ನಿರ್ಮಾಣ ನಿರ್ವಹಣೆ ಅನಿಲ್‍ಕುಮಾರ್, ಚಿತ್ರದ ಸಹ ನಿರ್ಮಾಪಕರು ಮಹೇಶ್ ನಂಜಯ್ಯ, ಎಂ.ಸುರೇಶ್.

ರೆಬೆಲ್ ಸ್ಟಾರ್ ಡಾ.ಅಂಬರೀಶ್, ದರ್ಶನ್ ಜೊತೆಗೆ ಬಹುಭಾಷಾತಾರೆ ಪ್ರಿಯಾಮಣಿ, ಬುಲ್ ಬುಲ್ ಖ್ಯಾತಿಯ ರಚಿತಾರಾಮ್, ರೇಖಾ, ಬಾಲಿವುಡ್ ನ ಖ್ಯಾತ ಖಳ ನಾಯಕ ದೋಜಿಣ, ತುಳಸಿ, ಶರತ್ ಲೋಹಿತಾಶ್ವ, ರವಿಕಾಳೆ, ಬುಲೆಟ್ ಪ್ರಕಾಶ್, ಸಾಧುಕೋಕಿಲ, ತಿಮ್ಮೇಗೌಡ, ನೆ.ಲ.ನೆರೇಂದ್ರಬಾಬು, ಮೊದಲಾದವರ ಭರ್ಜರಿ ತಾರಾಗಣ ಚಿತ್ರದಲ್ಲಿದೆ. (ಒನ್ಇಂಡಿಯಾ ಕನ್ನಡ)

English summary
One more Costly song for the film 'Ambareesha' was recently shot on Darshan and Priyamani at Abbaiah Naidu Studio in Bangalore. Producer Mahesh Sukhadhare almost spent around Rs 50 Lakh to shoot this song. Actress Priyamani shakes leg with Darshan and both drain in rai
Please Wait while comments are loading...