twitter
    For Quick Alerts
    ALLOW NOTIFICATIONS  
    For Daily Alerts

    'ಪೊಗರು' ಚಿತ್ರದ 'ಖರಾಬು...' ಹಾಡಿನ ಸಂಗೀತ ಒರಿಜಿನಲ್ ಅಲ್ಲವೇ?

    By Avani Malnad
    |

    ಧ್ರುವ ಸರ್ಜಾ ಅಭಿನಯದ 'ಪೊಗರು' ಚಿತ್ರ ಸೆಟ್ಟೇರಿ ಮೂರು ವರ್ಷ ಕಳೆದಿದ್ದರೂ ಬಿಡುಗಡೆಯ ಭಾಗ್ಯ ಕಂಡಿಲ್ಲ. ಆಕ್ಷನ್ ಪ್ರಿನ್ಸ್ ಅಭಿಮಾನಿಗಳು ಚಿತ್ರಕ್ಕಾಗಿ ಕಾದು ಕುಳಿತಿದ್ದಾರೆ. ಚಿತ್ರದ ಸ್ವಲ್ಪ ಭಾಗದ ಚಿತ್ರೀಕರಣ ಇನ್ನೂ ಬಾಕಿ ಉಳಿದಿದೆ.

    Recommended Video

    Karabu song released date postponed | Pogaru | Dhruva sarja | Filmibeat kannada

    ಚಿತ್ರದ ಡೈಲಾಗ್ ಟೀಸರ್ ಕಳೆದ ಅಕ್ಟೋಬರ್‌ನಲ್ಲಿ ಬಿಡುಗಡೆಯಾಗಿತ್ತು. ಅದು 19 ಮಿಲಿಯನ್ ವೀವ್ಸ್ ಪಡೆದುಕೊಂಡಿತ್ತು, ಬೇಸರದಲ್ಲಿದ್ದ ಅಭಿಮಾನಿಗಳಿಗೆ ಖುಷಿ ನೀಡಲು ಚಿತ್ರದ ಮೊದಲ ಹಾಡನ್ನು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಲಾಗಿತ್ತು. ಏಪ್ರಿಲ್‌ನಲ್ಲಿ ಬಿಡುಗಡೆಯಾಗಿದ್ದ 'ಖರಾಬು' ಹಾಡು 23 ಮಿಲಿಯನ್ ವೀಕ್ಷಣೆ ಪಡದುಕೊಂಡಿದೆ. ಹಾಡು ಸಕತ್ ಹಿಟ್ ಆಗಿದ್ದು, ಟಿಕ್ ಟಾಕ್ ಪ್ರಿಯರಿಗೂ ಅಚ್ಚುಮೆಚ್ಚಿನ ಹಾಡಾಗಿದೆ. ಅಷ್ಟೇ ಅಲ್ಲ ಬೇರೆ ಬೇರೆ ಭಾಷೆಯ ಸಿನಿಮಾ ಪ್ರಿಯರೂ ಹಾಡಿನ ಬೀಟ್ಸ್ ಸೂಪರ್ ಆಗಿದೆ ಎಂದು ಕಾಮೆಂಟ್ಸ್ ಹಾಕುತ್ತಿದ್ದಾರೆ. ಆದರೆ 'ಖರಾಬು' ಹಾಡು ಒರಿಜಿನಲ್ ಅಲ್ಲ ಎನ್ನಲಾಗಿದೆ. ಮುಂದೆ ಓದಿ...

    ಚಂದನ್ ಶೆಟ್ಟಿ ಸಂಗೀತ

    ಚಂದನ್ ಶೆಟ್ಟಿ ಸಂಗೀತ

    'ಪೊಗರು' ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ. 'ಖರಾಬು' ಹಾಡಿನ ಸಾಹಿತ್ಯವೂ ಅವರದ್ದೇ. ಈ ಹಾಡಿನ ಸಾಹಿತ್ಯವನ್ನು ಅವರ ಅಭಿಮಾನಿಗಳು ಇಷ್ಟಪಟ್ಟಿದ್ದರೂ, ಸಾಕಷ್ಟು ಟೀಕೆಗಳೂ ವ್ಯಕ್ತವಾಗಿವೆ. ಅಣ್ಣ ಬಂದ ಬಾಸು ಬಂದ ಸೈಡು ಬಿಡು ಎಂದು ನಾಯಕಿಗೆ ಹೇಳುವ ಸಾಲು ಇದೆ. ಹೀರೋ ನಾಯಕಿಗೆ ಅಣ್ಣನಾಗುತ್ತಾನೆಯೇ? ಎಂದು ಅನೇಕರು ಪ್ರಶ್ನಿಸಿದ್ದಾರೆ. ಅದೇನೇ ಇರಲಿ, ಈ ಹಾಡಿನ ಯಶಸ್ಸು ಚಿತ್ರತಂಡಕ್ಕೆ ಖುಷಿ ನೀಡಿದೆ. ನೃತ್ಯ ಕೂಡ ವೈರಲ್ ಆಗಿದೆ. ಹೀಗಾಗಿ ಹಾಡಿನ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲು ಉದ್ದೇಶಿಸಲಾಗಿದೆ.

    ಧ್ರುವ ಸರ್ಜಾ ಅಭಿಮಾನಿಗಳಿಗೆ 'ಪೊಗರು' ಚಿತ್ರದಿಂದ ಸಿಗಲಿದೆ ಮತ್ತೊಂದು ಗಿಫ್ಟ್ಧ್ರುವ ಸರ್ಜಾ ಅಭಿಮಾನಿಗಳಿಗೆ 'ಪೊಗರು' ಚಿತ್ರದಿಂದ ಸಿಗಲಿದೆ ಮತ್ತೊಂದು ಗಿಫ್ಟ್

    ಮೂಲ ಹುಡುಕಿದ ಟಿಕ್ ಟಾಕ್ ಬಳಕೆದಾರ

    ಮೂಲ ಹುಡುಕಿದ ಟಿಕ್ ಟಾಕ್ ಬಳಕೆದಾರ

    ಹಾಡಿನಲ್ಲಿ ಬೀಟ್ಸ್ ಒಂದಕ್ಕೆ ಧ್ರುವ ಸರ್ಜಾ ಸಕತ್ ಸ್ಟೆಪ್ಸ್ ಹಾಕಿದ್ದಾರೆ. ಆ ಬೀಟ್ಸ್ ಸೂಪರ್ ಇದೆ ಎಂದು ಹೇಳಲಾಗಿದೆ. ಆದರೆ ಟಿಕ್ ಟಾಕ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, 'ಖರಾಬು' ಚಿತ್ರದ ಈ ಬೀಟ್ಸ್‌ನ ಮೂಲ ತೆಲುಗು ಚಿತ್ರದ್ದು ಎಂದು ಹೇಳಲಾಗಿದೆ.

    ತೆಲುಗಿನ ಪೆಲ್ಲಿ ಚಿತ್ರ

    ತೆಲುಗಿನ ಪೆಲ್ಲಿ ಚಿತ್ರ

    1997ರಲ್ಲಿ ಬಿಡುಗಡೆಯಾಗಿದ್ದ ತೆಲುಗಿನ 'ಪೆಲ್ಲಿ' ಚಿತ್ರದಲ್ಲಿ 'ಕೊಂಡ ಕೋನ ಗುಂಡೆಲ್ಲೋ' ಎಂಬ ಹಾಡು ಹಿಟ್ ಆಗಿತ್ತು. ಕೋಡಿ ರಾಮಕೃಷ್ಣ ನಿರ್ದೇಶನದ 'ಪೆಲ್ಲಿ' ಚಿತ್ರದಲ್ಲಿ ವಡ್ಡೆ ನವೀನ್, ಮಹೇಶ್ವರಿ, ಪೃಥ್ವಿರಾಜ್ ಮುಂತಾದವರು ನಟಿಸಿದ್ದರು. ಎಸ್.ಎ. ರಾಜ್ ಕುಮಾರ್ ಸಂಗೀತ ನೀಡಿದ್ದ ಈ ಹಾಡನ್ನು ಎಸ್‌.ಪಿ. ಬಾಲಸುಬ್ರಮಣ್ಯಂ ಮತ್ತು ಚಿತ್ರಾ ಹಾಡಿದ್ದರು.

    'ಪೊಗರು' ಸಿನಿಮಾಗೆ ರಶ್ಮಿಕಾ ಮಂದಣ್ಣನೇ ಪೈಪೋಟಿ'ಪೊಗರು' ಸಿನಿಮಾಗೆ ರಶ್ಮಿಕಾ ಮಂದಣ್ಣನೇ ಪೈಪೋಟಿ

    ಅವಳ್ ವರುವಳಾ ಸಿನಿಮಾ

    ಅವಳ್ ವರುವಳಾ ಸಿನಿಮಾ

    ಹಾಗೆಯೇ ಇದೇ ಹಾಡು ತಮಿಳಿನಲ್ಲಿಯೂ ಬಂದಿತ್ತು. 1998ರಲ್ಲಿ ಬಿಡುಗಡೆಯಾಗಿದ್ದ 'ಅವಳ್ ವರುವಳಾ' ಚಿತ್ರದಲ್ಲಿ 'ಸಿಕ್ಕಿ ಮುಕ್ಕಿ ಉಯ್ಯಾಲಾ' ಎಂಬ ಹಾಡಿನ ಟ್ಯೂನ್ ಕೇಳಿದಾಗ 'ಖರಾಬು' ಹಾಡಿಗೆ ಇರುವ ಸಾಮ್ಯತೆ ಕಾಣಿಸುತ್ತದೆ. ರಾಜ್ ಕಪೂರ್ ನಿರ್ದೇಶನದ ಈ ಚಿತ್ರದಲ್ಲಿ ಅಜಿತ್ ಮತ್ತು ಸಿಮ್ರಾನ್ ನಟಿಸಿದ್ದರು. ಅಂದಹಾಗೆ ಇದು ಒಂದು ವರ್ಷದ ಮೊದಲು ತೆಲುಗಿನಲ್ಲಿ ಬಂದಿದ್ದ 'ಪೆಲ್ಲಿ' ಚಿತ್ರದ ರೀಮೇಕ್. ಎಸ್.ಎ ರಾಜ್ ಕುಮಾರ್ ಸಂಗೀತವನ್ನೂ ಯಥಾವತ್ತಾಗಿ ಬಳಸಲಾಗಿತ್ತು.

    ಕನ್ನಡದಲ್ಲಿ ಮದುವೆ ಸಿನಿಮಾ ಹಾಡು

    ಕನ್ನಡದಲ್ಲಿ ಮದುವೆ ಸಿನಿಮಾ ಹಾಡು

    ಇಷ್ಟಕ್ಕೇ ಮುಗಿದಿಲ್ಲ. ಕನ್ನಡ ಸಿನಿಮಾ ಪ್ರಿಯರಿಗೆ ಕೂಡ ಈ ಟ್ಯೂನ್ ಎಲ್ಲಿಯೋ ಕೇಳಿದಂತಿದೆ ಎನಿಸಿದರೂ ಅಚ್ಚರಿಯಿಲ್ಲ. ಹೌದು. ಕನ್ನಡದಲ್ಲಿಯೂ ಈ ಹಾಡು ಬಂದಿತ್ತು. ಎಸ್.ಎ. ರಾಜ್ ಕುಮಾರ್ ತಮ್ಮ ಸಂಗೀತವನ್ನು ಕನ್ನಡದಲ್ಲಿಯೂ ಬಳಸಿಕೊಂಡಿದ್ದರು. 2000ರಲ್ಲಿ ರಮೇಶ್ ಅರವಿಂದ್ ಮತ್ತು ಚಾರುಲತಾ ನಟಿಸಿದ್ದ 'ಮದುವೆ' ಚಿತ್ರವನ್ನು ಉಮಾಕಾಂತ್ ವಿ. ನಿರ್ದೇಶಿಸಿದ್ದರು. ಇದು ಕೂಡ 'ಪೆಲ್ಲಿ' ಚಿತ್ರದ ರೀಮೇಕ್. 'ತೂಗೋ ತೂಗೋ ಉಯ್ಯಾಲೆ' ಹಾಡು ಕೇಳಿದಾಗ 'ಖರಾಬು' ಟ್ಯೂನ್ಸ್ ಹೋಲಿಕೆ ಸ್ಪಷ್ಟವಾಗಿ ಗೊತ್ತಾಗುತ್ತದೆ.

    ಯಾರ ಮನೆಯಲ್ಲೂ ಸಂಭ್ರಮವಿಲ್ಲ ಈ ನಡುವೆ 'ಪೊಗರು' ಸಂಭ್ರಮ ಬೇಡ: ನಟ ಧ್ರುವ ಸರ್ಜಾಯಾರ ಮನೆಯಲ್ಲೂ ಸಂಭ್ರಮವಿಲ್ಲ ಈ ನಡುವೆ 'ಪೊಗರು' ಸಂಭ್ರಮ ಬೇಡ: ನಟ ಧ್ರುವ ಸರ್ಜಾ

    ಕೋಯಿ ಮೇರೆ ದಿಲ್ ಸೆ ಪೂಚೆ

    ಕೋಯಿ ಮೇರೆ ದಿಲ್ ಸೆ ಪೂಚೆ

    'ಪೆಲ್ಲಿ' ಚಿತ್ರವನ್ನು ಹಿಂದಿಯಲ್ಲಿ ವಿನಯ್ ಶುಕ್ಲಾ 'ಕೋಯಿ ಮೇರೆ ದಿಲ್ ಸೆ ಪೂಚೆ' ಎಂಬ ಹೆಸರಲ್ಲಿ ರೀಮೇಕ್ ಮಾಡಿದ್ದರು. ಅಫ್ತಾಬ್ ಶಿವದಾಸಾನಿ ಮತ್ತು ಇಶಾ ಡಿಯೋಲ್ ಅದರಲ್ಲಿ ನಟಿಸಿದ್ದರು. ರಾಜೇಶ್ ರೋಷನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದರು. ಇಲ್ಲಿ ಮೂಲ ಸಂಗೀತವನ್ನು ಬಳಸಿಕೊಂಡಿರಲಿಲ್ಲ.

    ಫೇಸ್‌ಬುಕ್‌ನಲ್ಲಿ ಚರ್ಚೆ

    'ಖರಾಬು' ಚಿತ್ರದ ಸಾಹಿತ್ಯದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಯುತ್ತಿತ್ತು. ಈಗ ಅದರ ಸಂಗೀತದ ಮೂಲದ ಕುರಿತೂ ಚರ್ಚೆ ಶುರುವಾಗಿದೆ. ಟಿಕ್ ಟಾಕ್‌ನಲ್ಲಿ ಒಬ್ಬರು ಮೂಲ ಹಾಡುಗಳೊಂದಿಗೆ ಜೋಡಿಸಿ ವಿಡಿಯೋ ಸೃಷ್ಟಿಸಿದ್ದು, ಅದನ್ನು ಕೆಲವರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

    English summary
    Chandan Shetty composed Kharabu song of Pogaru movie is a huge hit. But the original music of this song was from 1997 Telugu movie Pelli.
    Friday, May 22, 2020, 15:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X